Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡದಲ್ಲೇ ಕನ್ನಡಿಗರಿಗೆ ಕಮಲ್ ಹಾಸನ್ ಧನ್ಯವಾದ!
ನಟ ಕಮಲ್ ಹಾಸನ್ ಅಭಿನಯದ ವಿಕ್ರಂ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿ ಇಡೀ ತಂಡ ತೇಲಾಡುತ್ತಾ ಇದೆ. ಇನ್ನು ನಟ ಕಮಲ್ ಹಾಸನ್ ಅಂತೂ ತಮ್ಮ ಖುಷಿಯನ್ನು ಹಲವು ರೂಪಗಳಲ್ಲಿ ಉಡುಗೊರೆಯನ್ನು ನೀಡುವ ಮೂಲಕ ವ್ಯಕ್ತ ಪಡಿಸುತ್ತಿದ್ದಾರೆ.
ಆದರೆ ಈ ಚಿತ್ರ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗಿಲ್ಲ. ಕರ್ನಾಟಕದಲ್ಲೂ ಕೂಡ ವಿಕ್ರಂ ತಮಿಳಿನಲ್ಲಿ ತೆರೆಕಂಡಿದೆ. ಕರ್ನಾಟಕದಲ್ಲಿ ತಮಿಳಿನ ಈ ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಎದುರಾಗಿಲ್ಲ. ಈ ಹಿಂದೆ ನಟ ಕಮಲ್ ಹಾಸನ್ ತಮ್ಮ ಸಿನಿಮಾ ಪ್ರಚಾರದ ವೇಳೆ ಕನ್ನಡದಲ್ಲಿ ಮಾತಾಡಿರಲಿಲ್ಲ.
'ವಿಕ್ರಂ'
ಹಿಟ್:
ನಿರ್ದೇಶಕನಿಗೆ
ಕಾರು
ಉಡುಗೊರೆ
ಕೊಟ್ಟ
ಕಮಲ್
ಹಾಸನ್,
ಬೆಲೆ
ಎಷ್ಟು
ಗೊತ್ತೆ?
ಕನ್ನಡದಲ್ಲಿ ಕಮಲ್ ಹಾಸನ್ ಮಾತನಾಡದೇ ಇರುವ ಕಾರಣ ಹಲವು ಕನ್ನಡಿಗರು ಕಮಲ್ ಹಾಸನ್ ವಿರುದ್ಧ ಕಿಡಿ ಕಾರಿದ್ದರು. ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತನಾಡಿಲ್ಲ ಎಂದು 'ವಿಕ್ರಂ' ಸಿನಿಮಾ ಕರ್ನಾಟಕದಲ್ಲಿ ಬ್ಯಾನ್ ಮಾಡಿ ಎನ್ನುವ ಕೂಗು ಕೇಳಿ ಬಂದಿತ್ತು.
|
ಕನ್ನಡಿಗರಿಗೆ ಕಮಲ್ ಹಾಸನ್ ಧನ್ಯವಾದ!
ಸಿನಿಮಾ ಯಶಸ್ಸಿನ ಬಳಿಕ ನಟ ಕಮಲ್ ಹಾಸನ್ ಸಿನಿಮಾ ಗೆಲುವಿಗೆ ಕಾರಣ ಆದವರಿಗೆ ಧನ್ಯವಾದ ತಿಳಿಸಿದ್ದಾರೆ. ಕರ್ನಾಟಕದಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. 'ವಿಕ್ರಂ' ಸಿನಿಮಾದ ಗೆಲುವಿನಲ್ಲಿ ಕನ್ನಡಿಗರ ಪಾಲು ದೊಡ್ಡದಾಗಿದೆ. ಹಾಗಾಗಿ ಕನ್ನಡದಲ್ಲಿ ಮಾತನಾಡಿ ವಿಡಿಯೋ ಮೂಲಕ ಕನ್ನಡ ಪ್ರೇಕ್ಷಕರಿಗೆ ನಟ ಕಮಲ್ ಹಾಸನ್ ಧನ್ಯವಾದ ತಿಳಿಸಿದ್ದಾರೆ. ಕಮಲ್ ಈ ನಡೆಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ.
ಮೂರೇ
ದಿನದಲ್ಲಿ
'ವಿಕ್ರಂ'
ಕಲೆಕ್ಷನ್
₹150
ಕೋಟಿ:
ಕಮಲ್
ಸಿನಿಮಾ
ಕರ್ನಾಟಕದಲ್ಲಿ
ಗಳಿಸಿದ್ದೆಷ್ಟು?

ಸ್ಪಷ್ಟ ಕನ್ನಡ ಮಾತಾಡಿದ ಕಮಲ್ ಹಾಸನ್!
"ಕನ್ನಡ ಪ್ರೇಕ್ಷಕರು ಒಂದೊಳ್ಳೆ ಸಿನಿಮಾವನ್ನು ಯಾವಾಗಲೂ ಬೆಂಬಲಿಸುತ್ತಾ ಬಂದಿದ್ದಾರೆ. ಹಾಗೆ ಒಳ್ಳೆಯ ನಟರನ್ನು ಕೂಡ ಬೆಂಬಲಿಸಿದ್ದಾರೆ. ಅದೇ ರೀತಿ ನನ್ನನ್ನು, ನಮ್ಮ 'ವಿಕ್ರಂ' ಸಿನಿಮಾವನ್ನು ಬೆಂಬಲಿಸುತ್ತಿರುವುದು ಅತೀವ ಸಂತೋಷ ತಂದುಕೊಟ್ಟಿದೆ." ಎಂದು ಹೇಳುತ್ತಾ ಕನ್ನಡ ಪ್ರೇಕ್ಷಕರು ಮತ್ತು ಕನ್ನಡಿಗರ ಬಗ್ಗೆ ಮಾತನಾಡಿದ್ದಾರೆ.

ಚಿತ್ರತಂಡವನ್ನು ಹೊಗಳಿದ ಕಮಲ್!
ಶ್ರೀ ಅನುರುದ್ಧ್, ಶ್ರೀ ಗಿರೀಶ್, ಶ್ರೀ ಅನ್ಬು ಅರಿವ್, ಶ್ರೀ ಸತೀಶ್ ಅವರಿಗೆ ಬೆನ್ನೆಲುಬಾಗಿ ಕೆಲಸ ಮಾಡಿದ ಎಲ್ಲರೂ ಅಭಿನಂದನೆ ಸಲ್ಲಿಸೋದು ನ್ಯಾಯ. ನನ್ನ ಸೋದರರಾದ ಶ್ರೀ ವಿಜಯ್ ಸೇತುಪತಿ, ಶ್ರೀ ಫಹಾದ್ ಫಾಸಿಲ್, ಶ್ರೀ ನರೇನ್ ಈ ಅಮೋಘ ನಟರ ಬಳಗವೇ ಈ ವಿಜಯಕ್ಕೆ ಕಾರಣ. ಚಿತ್ರದ ಕೊನೆಯ 3 ನಿಮಿಷದಲ್ಲಿ ಸೋದರ ಸೂರ್ಯ ಈ ಚಿತ್ರದಲ್ಲಿ ನಟಿಸಿದ್ದು ನನ್ನ ಮೇಲಿಸುವ ಪ್ರೀತಿಗಾಗಿ. ಅವರಿಗೆ ನಾನು, ನಾವು ಜೊತೆಯಾಗಿ ನಟಿಸುತ್ತಿರುವ ಮುಂದಿನ ಸಿನಿಮಾದ ಮೂಲಕ ಧನ್ಯವಾದ ತಿಳಿಸುತ್ತೇನೆ.
ಪೃಥ್ವಿರಾಜ್'ಗೆ
ಟಕ್ಕರ್
ಕೊಟ್ಟ
ಕಮಲ್
ಹಾಸನ್
'ವಿಕ್ರಂ':
2
ದಿನದ
ಕಲೆಕ್ಷನ್
ಎಷ್ಟು?

ಅಭಿಮಾನಿಗಳಿಗೆ ಕಮಲ್ ಧನ್ಯವಾದ!
ಚಿತ್ರದ ನಿರ್ದೇಶಕ ಲೋಕೇಶ್ ಅವರಿಗೆ ಸಿನಿಮಾ ಮೇಲೆ, ನನ್ನ ಮೇಲೆ ಇರುವ ಪ್ರೀತಿ ಚಿತ್ರೀಕರಣದಲ್ಲಿ ಪ್ರತೀ ದಿನ, ಪ್ರತಿ ಫ್ರೇಮ್‌ನಲ್ಲಿಯೂ ಕಾಣಿಸುತ್ತಿದೆ. ಹಾಗೆ ಅಭಿಮಾನಿಗಳು ಪ್ರೀತಿ ಕೂಡ. ನಿಮ್ಮೆಲ್ಲರ ಪ್ರೀತಿ ಬೆಂಬಲ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ."ಎಂದು ಹೇಳು ನಮಸ್ಕಾರ ಮಾಡಿದ್ದಾರೆ ಕಮಲ್ ಹಾಸನ್.