For Quick Alerts
  ALLOW NOTIFICATIONS  
  For Daily Alerts

  ಅಡುಗೆ ಮಾಡಿಕೊಂಡು ತಿನ್ನಿ, ಆದರೆ ಅದನ್ನು ಪ್ರದರ್ಶಿಸಬೇಡಿ: ನೆಟ್ಟಿಗರ ಮೇಲೆ ಖುಷ್ಬೂ ಕಿಡಿ

  |

  ಸೆಲೆಬ್ರಿಟಿಗಳು ಮನೆಯಲ್ಲಿ ವ್ಯಾಯಾಮ ಮಾಡುವ, ಅಡುಗೆ ಮಾಡುವ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಾಕಿಕೊಳ್ಳುತ್ತಿರುವುದಕ್ಕೆ ಇತ್ತೀಚೆಗೆ ಬಾಲಿವುಡ್ ನಿರ್ದೇಶಕಿ ಫರಾಹ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊರೊನಾ ವೈರಸ್ ಕಾರಣದಿಂದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ಮೋಜಿನ ವಿಡಿಯೋಗಳನ್ನು ಹಾಕುವುದು ಸರಿಯಲ್ಲ ಎಂದು ಅವರು ನಟ. ನಟಿಯರನ್ನು ತರಾಟೆಗೆ ತೆಗೆದುಕೊಂಡಿದ್ದರು.

  'ಅಂಬಿ ನಿಂಗ್ ವಯಸ್ಸಾಯ್ತೋ' , ನಾಯಕಿಯರಲ್ಲಿ ಬದಲಾಣೆ | FIlmibeat Kannada

  ಅವರಂತೆಯೇ ದಕ್ಷಿಣ ಭಾರತದ ನಟಿ, ರಾಜಕಾರಣಿ ಖುಷ್ಬೂ ಕೂಡ ನೆಟ್ಟಿಗರ ವಿರುದ್ಧ ಕಿಡಿಕಾರಿದ್ದಾರೆ. ಜನರು ಹೊಟ್ಟೆಗಿಲ್ಲದೆ ಹಸಿವಿನಿಂದ ಸಾಯುವ ಪರಿಸ್ಥಿತಿ ಉಂಟಾಗಿದೆ. ದುಡಿಮೆ ಇಲ್ಲದೆ ಅವರಿಗೆ ಆಹಾರವೂ ಸಿಗದಂತಾಗಿದೆ. ಲಾಕ್‌ಡೌನ್‌ನ ಈ ಕಷ್ಟಕರ ಪರಿಸ್ಥಿತಿಯಲ್ಲಿ ನೀವು ಬಗೆಬಗೆಯ ಅಡುಗೆ ಮಾಡಿ ಅವುಗಳನ್ನು ಹಂಚಿಕೊಳ್ಳುವುದು ತರವಲ್ಲ ಎಂದು ಖುಷ್ಬೂ ನೆಟ್ಟಿಗರಿಗೆ ಕಿವಿಮಾತು ಹೇಳಿದ್ದಾರೆ. ಮುಂದೆ ಓದಿ...

  ನಮ್ಮ ತಟ್ಟೆಯಲ್ಲಿ ಆಹಾರ ಇದೆ

  ನಮ್ಮ ತಟ್ಟೆಯಲ್ಲಿ ಆಹಾರ ಇದೆ

  ಅಡುಗೆ ಮಾಡುವುದನ್ನು ಹೆಮ್ಮೆ ಎಂದು ಪರಿಗಣಿಸಿರುವ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ಆಹಾರಗಳ ಫೋಟೊಗಳನ್ನು ಪೋಸ್ಟ್ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಮ್ಮ ತಟ್ಟೆಗಳಲ್ಲಿ ಆಹಾರ ಇದೆ ಎಂದು ಖುಷಿಪಡುವಂತಹ ಆಶೀರ್ವಾದವನ್ನು ನಾವು ಪಡೆದಿದ್ದೇವೆ ಎಂದು ಖುಷ್ಬೂ ಹೇಳಿದ್ದಾರೆ.

  ಈಗ ನಿಮ್ಮ ವರ್ಕೌಟ್ ವಿಡಿಯೋ ಎಲ್ಲ ಬೇಕಾ? 'ಸ್ಟಾರ್‌'ಗಳಿಗೆ ಛಡಿಯೇಟು ಕೊಟ್ಟ ನಿರ್ದೇಶಕಿ: ವಿಡಿಯೋ

  ನೀವು ತಿನ್ನಿ, ಪ್ರದರ್ಶಿಸಬೇಡಿ

  ನೀವು ತಿನ್ನಿ, ಪ್ರದರ್ಶಿಸಬೇಡಿ

  ಈ ವಿಪತ್ತಿನ ಸಮಯದಲ್ಲಿ ಒಂದು ಹೊತ್ತಿನ ಊಟವನ್ನು ಪಡೆಯಲೂ ಪರದಾಡುತ್ತಿರುವ ಅನೇಕರಿದ್ದಾರೆ. ಅವರ ಬಗ್ಗೆ ನಾವು ಕರುಣೆ ತೋರಿಸೋಣ. ನೀವು ತಿನ್ನಿ. ಆದರೆ ದಯವಿಟ್ಟು ಅದನ್ನು ಪ್ರದರ್ಶಿಸಬೇಡಿ ಎಂದು ಖುಷ್ಬೂ ನೆಟಿಜನ್‌ಗಳಿಗೆ ಮನವಿ ಮಾಡಿದ್ದಾರೆ.

  ಧಾರಾವಾಹಿ ಶೂಟಿಂಗ್

  ಧಾರಾವಾಹಿ ಶೂಟಿಂಗ್

  ಲಾಕ್ ಡೌನ್ ಕಾರಣದಿಂದ ಧಾರಾವಾಹಿಗಳ ಚಿತ್ರೀಕರಣದ ಸಮಸ್ಯೆಯ ಕುರಿತು ಇತ್ತೀಚೆಗೆ ಅವರು ಮಾತನಾಡಿದ್ದ ಆಡಿಯೋವೊಂದನ್ನು ಹಂಚಿಕೊಂಡಿದ್ದರು. ಎಫ್‌ಇಎಫ್ಎಫ್ಎಸ್ಐನ ಆರ್‌ಕೆ ಸೆಲ್ವಮಣಿ ಮತ್ತು ತಮಿಳುನಾಡು ಆರೋಗ್ಯ ಸಚಿವರ ಜತೆ ಮಾತುಕತೆ ನಡೆಸಿದ್ದು, ಧಾರಾವಾಹಿಗಳ ಚಿತ್ರೀಕರಣ ಸಂಬಂಧ ಈ ತಿಂಗಳ ಅಂತ್ಯದ ವೇಳೆಗೆ ಸೂಕ್ತ ನಿಯಂತ್ರಣಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದಾಗಿ ತಿಳಿಸಿದ್ದರು.

  ವರ್ಕೌಟ್ ವಿಡಿಯೋ ಬೇಡ ಎಂದ ಫರಾಹ್ ಖಾನ್‌ಗೆ ದೀಪಿಕಾ ಪಡುಕೋಣೆ ತಿರುಗೇಟು

  ರಜನಿಕಾಂತ್ ಜತೆ ಸಿನಿಮಾ

  ರಜನಿಕಾಂತ್ ಜತೆ ಸಿನಿಮಾ

  ರಾಜಕಾರಣದಲ್ಲಿಯೂ ಬಿಜಿಯಾಗಿರುವ ನಟಿ ಖುಷ್ಬೂ, ಶಿವ ನಿರ್ದೇಶನದ ರಜನಿಕಾಂತ್ ನಟನೆಯ 'ಅಣ್ಣಾತ್ತೆ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಖುಷ್ಬೂ, ರಾಜಕೀಯ, ಸಾಮಾಜಿಕ ಹಾಗೂ ತಮ್ಮ ಮೂಲ ಕ್ಷೇತ್ರವಾದ ಸಿನಿಮಾ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  English summary
  Actress turned politician Khushbu requested netizens not to show the pics of exotic food, as many people struggling to get one square meal a day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X