Don't Miss!
- News
ವಿಮಾನದಲ್ಲಿ ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಆರೋಪಿಗೆ ಜಾಮೀನು!
- Sports
WPL Auction 2023: ದುಬಾರಿ ಮೊತ್ತಕ್ಕೆ ಹರಾಜಾಗಬಹುದಾದ ಐವರು ಆಟಗಾರರು
- Technology
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- Finance
Economic Survey: ನವೆಂಬರ್ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್, 12-ಡಿಜಿಟ್ ಪ್ರಾಮುಖ್ಯತೆ ತಿಳಿಯಿರಿ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪೊನ್ನಿಯನ್ ಸೆಲ್ವನ್' ಚಿತ್ರದ ಐಶ್ವರ್ಯಾ, ವಿಕ್ರಂ, ತ್ರಿಶಾ ಫಸ್ಟ್ ಲುಕ್, ರಿಲೀಸ್ ಡೇಟ್ ರಿವೀಲ್
ಮಣಿರತ್ನ ಸಿನಿಮಾಗಾಗಿ ಕೇವಲ ದಕ್ಷಿಣ ಭಾರತವಷ್ಟೇ ಕಾದು ಕೂರುವುದಿಲ್ಲ. ಇಡೀ ಭಾರತವೇ ಈ ನಿರ್ದೇಶಕನ ಚಿತ್ರಕ್ಕಾಗಿ ಎದುರು ನೋಡುತ್ತೆ. ಇದೇ ಮಣಿರತ್ನಂ ಮತ್ತೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದುವೇ 'ಪೊನ್ನಿಯನ್ ಸೆಲ್ವನ್'. ಇಷ್ಟು ದಿನ ಈ ಸಿನಿಮಾಗಾಗಿಯೇ ಕಾದು ಕೂತಿದ್ದ ಸಿನಿಪ್ರಿಯರಿಗೆ ಕೊನೆಗೂ ಮಣಿರತ್ನಂ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಈ ಐತಿಹಾಸಿಕ ಸಿನಿಮಾದ ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನವನ್ನು ಘೋಷಣೆ ಮಾಡಲಾಗಿದೆ.
ಮಣಿರತ್ನಂ ಮೆಗಾ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್, ವಿಕ್ರಂ, ಕಾರ್ತಿ, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಐಶ್ವರ್ಯ ಲಕ್ಷ್ಮಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಪ್ರಮುಖ ಪಾತ್ರಗಳ ಫಸ್ಟ್ ಲುಕ್ ಇಂದು (ಮಾರ್ಚ್ 02) ರಿಲೀಸ್ ಆಗಿದೆ. ಇಷ್ಟು ಗೌಪ್ಯವಾಗಿಯೇ ಇಟ್ಟಿದ್ದ ನಿರ್ದೇಶಕ ಇದೇ ಮೊದಲ ಬಾರಿಗೆ ಲುಕ್ ರಿವೀಲ್ ಮಾಡಿ ಹುಬ್ಬೇರಿಸಿದ್ದಾರೆ.

'ಪೋನ್ನಿಯನ್ ಸೆಲ್ವನ್' ಫಸ್ಟ್ ಲುಕ್ ಸೂಪರ್
ಪೊನ್ನಿಯನ್ ಸೆಲ್ವನ್ ನಿರ್ದೇಶಕ ಮಣಿರತ್ನಂ ಅವರ ಮಹತ್ವಾಕಾಂಕ್ಷೆಯ ಸಿನಿಮಾ. 10ನೇ ಶತಮಾನದ ಈ ಕಥೆಯನ್ನು ತೆರೆಮೇಲೆ ತರಲು ಹೊರಟಿದ್ದಾರೆ. ಮಣಿರತ್ನಂ ಫೇವರಿಟ್ ನಟ ವಿಕ್ರಂ ಹಾಗೂ ನಟಿ ಐಶ್ವರ್ಯಾ ಈ ಸಿನಿಮಾದಲ್ಲಿ ಮುಂದುವರೆದಿದ್ದಾರೆ. ಉಳಿದಂತೆ, ತಮಿಳಿನ ಸ್ಟಾರ್ ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಮಲ್ಟಿಸ್ಟಾರರ್ ಸಿನಿಮಾ ಆಗಿರುವುದರಿಂದ ಇಡೀ ಭಾರತದ ನೋಟ ಈ ಸಿನಿಮಾ ಮೇಲಿದೆ.

ಯಾರಿಗೆ ಯಾವ್ಯವಾವ ಪಾತ್ರ?
ಈ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್ ನಂದಿನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಕ್ರಂ ಆದಿತ್ಯ ಕರಿಕಾಲನ್ ಅನ್ನುವ ಪವರ್ ಫುಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಯಂ ರವಿ ಅರುಲ್‌ಮೊಳಿ ವರ್ಮನ್, ಕಾರ್ತಿ ವಂಧಿಯಾಥೇವನ್ ಹಾಗೂ ತ್ರಿಶಾ ಕುಂದವೈ ಅನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ಮಂದಿಯ ಫಸ್ಟ್ ಲುಕ್ ಇಂದು ( ಮಾರ್ಚ್ 02) ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

'ಪೊನ್ನಿಯನ್ ಸೆಲ್ವನ್' ಕಥೆಯೇನು?
ಕಲ್ಕಿ ಕೃಷ್ಣಮೂರ್ತಿ ಎಂಬ ತಮಿಳಿನ ಲೇಖಕ ಪೊನ್ನಿಯನ್ ಸೆಲ್ವನ್ ಕಥೆಯನ್ನು ರಚಿಸಿದ್ದಾರೆ. ಇದು ಅರುಲ್‌ಮೊಳಿ ವರ್ಮನ್ ಹಾಗೂ ಚೋಳ ಸಾಮ್ರಾಜ್ಯದ ಕಥೆಯನ್ನು ಹೇಳುತ್ತೆ. ಚೋಳ ರಾಜವಂಶ ಹೇಗೆ ಶಕ್ತಿಶಾಲಿಯಾಗಿ ಸಾಮ್ರಾಜ್ಯ ಕಟ್ಟುತ್ತೆ ಎನ್ನುವುದೇ ಸ್ಟೋರಿ. ಮಣಿರತ್ನಂ ನಿರ್ದೇಶನದ ಜೊತೆಗೆ ಚಿತ್ರಕಥೆಯನ್ನು ರಚಿಸಿದ್ದಾರೆ. ಎಲಂಗೋ ಕುಮಾರವೇಲ್ ಮತ್ತು ಬಿ ಜೆಯಮೋಹನ್ ಕೂಡ ಚಿತ್ರಕಥೆ ಹೆಣೆದಿದ್ದಾರೆ. ಎ.ಆರ್. ರೆಹಮಾನ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಈ ಐತಿಹಾಸಿ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಹಾಗೂ ಮದ್ರಾಸ್ ಟಾಕೀಸ್ ಹಣ ಹೂಡಿದೆ.

ಪೊನ್ನಿಯನ್ ಸೆಲ್ವನ್ ರಿಲೀಸ್ ಯಾವಾಗ?
ಮಣಿರತ್ನಂ 'ಪೊನ್ನಿಯನ್ ಸೆಲ್ವನ್' ಸಿನಿಮಾದ ಮೊದಲ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. 2019ರಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಿತ್ತು. ಆದರೆ, ಮಧ್ಯದಲ್ಲಿ ಕೊರೊನಾ ಬಂದಿದ್ದರಿಂದ ಸಿನಿಮಾದ ಚಿತ್ರೀಕರಣ ತಡವಾಗಿದೆ. ಮೂರು ವರ್ಷಗಳ ಬಳಿಕ ಮಣಿರತ್ನಂ 'ಪೊನ್ನಿಯನ್ ಸೆಲ್ವನ್' ಸಿನಿಮಾ ಮುಗಿಸಿದ್ದು ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ 2022 ಸೆಪ್ಟೆಂಬರ್ 30ರಂದು ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.