For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ವಿರುದ್ಧ ನಯನತಾರಾ ಫ್ಯಾನ್ಸ್ ಕಿಡಿಕಾರಿದ್ದೇಕೆ?

  |

  ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿಥ್ ಕರಣ್ ಶೋ ಪ್ರತಿ ಬಾರಿ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇರುತ್ತೆ. ಈ ಬಾರಿಯ ಸೀಸನ್ 7 ಕೂಡ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

  ಈ ಬಾರಿ ಕಾಫಿ ವಿಥ್ ಕರಣ್ ಸೀಸನ್ 7ರ ಮೂರನೇ ಸಂಚಿಕೆಯಲ್ಲಿ ನಟಿ ಸಮಂತಾ ಭಾಗವಹಿಸಿದ್ದರು. ಅಕ್ಷಯ್ ಕುಮಾರ್ ಹಾಗೂ ಸ್ಯಾಮ್ ಇಬ್ಬರ ಕಾಂಬಿನೇಷನ್‌ನಲ್ಲಿ ನಡೆದ ಸಂದರ್ಶನಕ್ಕೆ ಮುಚ್ಚುಗೆ ವ್ಯಕ್ತವಾಗಿತ್ತು. ಆದರೆ, ನಯನತಾರಾ ಅಭಿಮಾನಿಗಳು ಮಾತ್ರ ಕರಣ್ ಜೋಹರ್ ವಿರುದ್ಧ ಕಿಡಿಕಾರುತ್ತಿದ್ದಾರೆ.

  ಕರಣ್ ಜೋಹರ್ ಈ ಬಾರಿ ಕಾಫಿ ವಿಥ್ ಕರಣ್‌ ಸೀಸನ್ 7 ಅನ್ನು ಒಟಿಟಿಯಲ್ಲಿ ನಡೆಸಿಕೊಡುತ್ತಿದ್ದಾರೆ. ಪ್ರತಿ ಒಂದೊಂದು ಸಂಚಿಕೆ ಬಿಡುಗಡೆಯಾಗುತ್ತಿದೆ. ಕಳೆದ ವಾರ ಅಕ್ಷಯ್ ಕುಮಾರ್ ಹಾಗೂ ಸಮಂತಾ ಕಾಣಿಸಿಕೊಂಡಿದ್ದರು. ಕಳೆದ ಮೂರು ಸಂಚಿಕೆಗಳಲ್ಲಿ ಮೂರನೇ ಎಪಿಸೋಡ್ ಸದ್ದು ಮಾಡುತ್ತಿದೆ. ಆದರೆ, ಇದು ನಯನತಾರಾ ಅಭಿಮಾನಿಗಳಿ ಮಾತ್ರ ಇಷ್ಟ ಆಗಿಲ್ಲ.

  ನಯನತಾರಾಗೆ ಸಮಂತಾ ಹೊಗಳಿಕೆ

  ನಯನತಾರಾಗೆ ಸಮಂತಾ ಹೊಗಳಿಕೆ

  ಕಾಪಿ ವಿಥ್ ಕರಣ್ ಶೋನಲ್ಲಿ ನಯನತಾರಾ ಜೊತೆ 'ಕಾತುವಕ್ಕುಲ ರೆಂಡು ಕಾದಲ್' ಸಿನಿಮಾದಲ್ಲಿ ನಟಿಸಿದ ಅನುಭವವನ್ನು ಸಮಂತಾ ಶೇರ್ ಮಾಡಿದ್ದರು. ನಯನತಾರಾ ಸ್ಟಾರ್‌ಢಮ್ ಹಾಗೂ ಅವರ ಸರಳತೆಯನ್ನು ಹಾಡಿ ಹೊಗಳಿದ್ದರು. ಇದಾದ ಬಳಿಕವೂ ಕರಣ್ ಜೋಹರ್ ತಮ್ಮ ಶೋನಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾರನ್ನು ಅವಮಾನ ಮಾಡಿದ್ದಾರೆ ಎಂದು ಅಭಿಮಾನಿಗಳು ಆರೋಪ ಮಾಡಿದ್ದಾರೆ. ಅದಕ್ಕೆ ಒಂದು ಪಟ್ಟಿ

  ಲೇಡಿ ಸೂಪರ್‌ಸ್ಟಾರ್ ಫ್ಯಾನ್ಸ್ ಗರಂ

  ಲೇಡಿ ಸೂಪರ್‌ಸ್ಟಾರ್ ಫ್ಯಾನ್ಸ್ ಗರಂ

  ಇದೇ ಶೋನಲ್ಲಿಸ ಕರಣ್ ಜೋಹರ್ ಒಂದು ಪಟ್ಟಿಯನ್ನು ತೋರಿಸಿದ್ದರು. ಅದು ಒರ್ಮಾಕ್ಸ್ ಸಂಸ್ಥೆ ಮಾಡಿದ ಸರ್ವೆಯ ಪಟ್ಟಿ. ಈ ಪಟ್ಟಿಯಲ್ಲಿ ನಟಿ ಸಮಂತಾ ಮೊದಲ ಸ್ಥಾನದಲ್ಲಿದ್ದಾರೆ. ಹಾಗೇ ನಯನತಾರಾ ಮೂರನೇ ಸ್ಥಾನದಲ್ಲಿದ್ದಾರೆ. ಇದೇ ವಿಷಯವನ್ನು ಇಟ್ಟುಕೊಂಡು ನಯನತಾರಾ ಮೂರನೇ ಸ್ಥಾನದಲ್ಲಿ ಇದ್ದಾರೆ ಎಂದು ಒತ್ತಿ ಹೇಳಿದ್ದರು. ಈ ಕಾಮೆಂಟ್‌ಗಾಗಿ ನಯನತಾರಾ ಅಭಿಮಾನಿಗಳು ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದಾರೆ. ಕರಣ್ ಜೋಹರ್ ತಾರೆಯರ ಮಕ್ಕಳನ್ನು ಮಾತ್ರ ಬೆಂಬಲಿಸುತ್ತಾರೆ. ನಯನತಾರಾ ಸಿನಿಮಾದ ಯಾವುದೇ ಹಿನ್ನೆಲೆ ಇಲ್ಲದೆ ಲೇಡಿ ಸೂಪರ್‌ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  'ಜವಾನ್' ಸಿನಿಮಾಗಾಗಿ ಕಾಯುತ್ತಿರೋ ಫ್ಯಾನ್ಸ್

  'ಜವಾನ್' ಸಿನಿಮಾಗಾಗಿ ಕಾಯುತ್ತಿರೋ ಫ್ಯಾನ್ಸ್

  ಕರಣ್ ಜೋಹರ್ ತಮ್ಮ ಶೋಗೆ ನಯನತಾರಾರನ್ನೂ ಕರೆದಿದ್ದರು. ಆದರೆ, ಲೇಡಿ ಸೂಪರ್‌ಸ್ಟಾರ್ ತಿರಸ್ಕರಿಸಿದ್ದರು ಎನ್ನಲಾಗಿದೆ. ಈ ಬೆನ್ನಲ್ಲೇ ಕರಣ್ ಜೋಹರ್ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎನ್ನುತ್ತಿದ್ದಾರೆ ಫ್ಯಾನ್ಸ್. ಹೀಗಾಗಿ, ಶಾರುಖ್ ಜೊತೆ ನಟಿಸುತ್ತಿರುವ 'ಜವಾನ್' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಗೆದ್ದು ದಕ್ಷಿಣ ಭಾರತಕ್ಕಷ್ಟೇ ಅಲ್ಲ. ಇಡೀ ಭಾರತಕ್ಕೆ ಸೂಪರ್‌ಸ್ಟಾರ್ ಆಗಬೇಕು ಎಂದು ಎದುರು ನೋಡುತ್ತಿದ್ದಾರೆ.

  Recommended Video

  Neetha Ashok | ಸಲ್ಮಾನ್ ಖಾನ್‌ನ ಕಂಡು ನೀತಾ ಅಶೋಕ್‌ ನರ್ವಸ್ | Vikrant Rona | Kiccha Sudeep *Press Meet
  ಅಕ್ಷಯ್-ಸ್ಯಾಮ್ ಎಂಟ್ರಿಗೆ ಫಿದಾ

  ಅಕ್ಷಯ್-ಸ್ಯಾಮ್ ಎಂಟ್ರಿಗೆ ಫಿದಾ

  ಟಾಲಿವುಡ್‌ ನಟಿ ಸಮಂತಾ ಹಾಗೂ ಅಕ್ಷಯ್ ಕುಮಾರ್ ಇಬ್ಬರೂ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್ ಶೋಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಈ ಶೋಗೆ ಎಂಟ್ರಿ ಕೊಡುವಾಗ ಅಕ್ಷಯ್ ಕುಮಾರ್ ಸಮಂತಾರನ್ನು ಎತ್ತಿಕೊಂಡು ಬಂದಿದ್ದೇ ಕಾರ್ಯಕ್ರಮದ ಹೈಲೈಟ್ ಆಗಿತ್ತು. ಇನ್ನೊಂದು ಕಡೆ ಅಕ್ಷಯ್ ಕುಮಾರ್ ಹಾಗೂ ಸಮಂತಾ ಗ್ರ್ಯಾಂಡ್ ಎಂಟ್ರಿ ನಾಗ ಚೈತನ್ಯ ಅಭಿಮಾನಿಗಳನ ನಿದ್ದೆ ಕೆಡಿಸಿದೆ ಎಂದೂ ಮಾತಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಸಮಂತಾ ವಿಚ್ಛೇದನದ ಬಗ್ಗೆ ಮಾತಾಡಿದ್ದೂ ಕೂಡ ಅಸಮಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

  English summary
  Nayanthara Fans Angry On Karan Johar While Koffee With Karan Show With Samantha, Know More.
  Sunday, July 24, 2022, 23:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X