For Quick Alerts
  ALLOW NOTIFICATIONS  
  For Daily Alerts

  ಇಸ್ಲಾಂಗೆ ಮತಾಂತರಗೊಳ್ಳುತ್ತಿರುವ ಖ್ಯಾತ ದಕ್ಷಿಣ ಭಾರತದ ನಟ

  |

  ದೇಶದಲ್ಲಿ ಈಗ ಎಲ್ಲೆಲ್ಲೂ ಪೌರತ್ವ ತಿದ್ದುಪಡಿ ಮಸೂದೆಯ ಸದ್ದು. ಕೆಲವಡೆ ಶಾಂತಿಯುತ ಪ್ರತಿಭಟನೆಯಾದರೆ, ಮತ್ತೊಂದೆಡೆ ಭಾರೀ ಹಿಂಸಾಚಾರ.

  ಈ ನಡುವೆ, ದೇಶದ ಬಾಲಿವುಡ್, ಕಾಲಿವುಡ್, ಟಾಲಿವುಡ್ ಉದ್ಯಮದ ಕಲಾವಿದರು, ಮಸೂದೆಯ ವಿಚಾರದಲ್ಲಿ ತಮ್ಮತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ.

  ಹಿರಿಯ ನಟರುಗಳಾದ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ರಜನೀಕಾಂತ್ ಮುಂತಾದವರು, ಮಸೂದೆಯ ವಿಚಾರದಲ್ಲಿ ಹೇಳಿಕೆಯನ್ನು ನೀಡುತ್ತಿದ್ದಾರೆ.

  ರಾಷ್ಟ್ರಪತಿಗಳಿಂದ ಈಗಾಗಲೇ ಅನುಮೋದನೆ ಪಡೆದುಕೊಂಡಿರುವ ಈ ಮಸೂದೆ, ಮುಸ್ಲಿಂ ಸಮುದಾಯಕ್ಕೆ ಮಾರಕವೇ ಎನ್ನುವ ಚರ್ಚೆಯ ನಡುವೆ, ಖ್ಯಾತ ನಟರೊಬ್ಬರು ಇಸ್ಲಾಂಗೆ ಮತಾಂತರಗೊಳ್ಳುತ್ತಿರುವ ಸುದ್ದಿ, ಅಧಿಕೃತಗೊಂಡಿದೆ.

  ಇಳಯರಾಜ ಅವರ ಪುತ್ರ ಯುವನ್ ಶಂಕರ್ ರಾಜ

  ಇಳಯರಾಜ ಅವರ ಪುತ್ರ ಯುವನ್ ಶಂಕರ್ ರಾಜ

  ಖ್ಯಾತ ಸಂಗೀತ ನಿರ್ದೇಶಕ ಮತ್ತು ಇಳಯರಾಜ ಅವರ ಪುತ್ರ ಯುವನ್ ಶಂಕರ್ ರಾಜ, ಆಗಸ್ಟ್ 2014ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ವಿಚಾರ, ಅವರ ಕುಟುಂಬದಲ್ಲಿ ಮತ್ತು ಚಿತ್ರೋದ್ಯಮದಲ್ಲಿ ಭಾರೀ ಸದ್ದನ್ನು ಮಾಡಿತ್ತು. ಈಗ, ಇನ್ನೊಬ್ಬ, ತಮಿಳಿನ ನಟ, ಇಸ್ಲಾಂ ಧರ್ಮಕ್ಕೆ ಕನ್ವರ್ಟ್ ಆಗಲಿದ್ದಾರೆ.

  ಸಂಗೀತ ನಿರ್ದೇಶಕ ದೇವ ಅವರ ಸೋದರಳಿಯ

  ಸಂಗೀತ ನಿರ್ದೇಶಕ ದೇವ ಅವರ ಸೋದರಳಿಯ

  ತಮಿಳಿನ ಖ್ಯಾತ ನಟ, ಸಂಗೀತ ನಿರ್ದೇಶಕ ದೇವ ಅವರ ಸೋದರಳಿಯ ಜೈ ಸಂಪತ್ ಆಲಿಯಾಸ್ ಜೈ, ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈಗ, ಅವರೇ ಇದಕ್ಕೆ ಸ್ಪಷ್ಟನೆಯನ್ನು ನೀಡುವ ಮೂಲಕ, ಎಲ್ಲಾ ಗೊಂದಲಗಳಿಗೆ ತೆರೆಯೆಳೆದಿದ್ದಾರೆ. (ಚಿತ್ರದಲ್ಲಿ ದೇವಾ)

  ಜೈ ಸಂಪತ್ ಆಲಿಯಾಸ್ ಜೈ

  ಜೈ ಸಂಪತ್ ಆಲಿಯಾಸ್ ಜೈ

  ಸಣ್ಣ ವಯಸ್ಸಿನಲ್ಲೇ ಚಿತ್ರೋದ್ಯಮಕ್ಕೆ ಕಾಲಿಟ್ಟ ಜೈ, ಮೊದಮೊದಲು ನಾಯಕನ ತಮ್ಮ/ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು. 2002ರಲ್ಲಿ ಭಗವತಿ ಎನ್ನುವ ಸಿನಿಮಾದ ಮೂಲಕ, ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು. ತಮಿಳು, ಮಲಯಾಳಂನಲ್ಲಿ ಇದುವರೆಗೆ 35ಕ್ಕೂ ಹೆಚ್ಚಿ ಸಿನಿಮಾಗಳಲ್ಲಿ ಜೈ ನಟಿಸಿದ್ದಾರೆ.

  ಇಸ್ಲಾಂಗೆ ಮತಾಂತರಗೊಂಡ ಜೈ

  ಇಸ್ಲಾಂಗೆ ಮತಾಂತರಗೊಂಡ ಜೈ

  "ಏಳು ವರ್ಷದ ಹಿಂದೆಯೇ ಇಸ್ಲಾಂಗೆ ಮತಾಂತರಗೊಂಡಿದ್ದೆ, ಈಗ ಹೆಸರು ಬದಲಾಯಿಸಿಕೊಳ್ಳಲಿದ್ದೇನೆ" ಎಂದು ಜೈ ಹೇಳುವ ಮೂಲಕ, ಎಲ್ಲಾ ಊಹಾಪೋಹ ಸುದ್ದಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. "ನಮ್ಮ ಮನೆಯಲ್ಲಿ ಇದಕ್ಕೆ ಯಾರೂ ಅಡ್ಡಿ ಮಾಡಲಿಲ್ಲ. ಅವರಿಗೆ, ನಾನು ಯಾವುದಾರು ಒಂದು ದೇವರಲ್ಲಿ ನಂಬಿಕೆ ಇಟ್ಟರೆ ಸಾಕು ಎನ್ನುವ ಅಭಿಪ್ರಾಯವನ್ನು ಹೊಂದಿದ್ದರು" ಎಂದು ಜೈ ಹೇಳಿದ್ದಾರೆ.

  2013ರಲ್ಲಿ ಬಿಡುಗಡೆಯಾದ 'ರಾಜರಾಣಿ' ಚಿತ್ರ

  2013ರಲ್ಲಿ ಬಿಡುಗಡೆಯಾದ 'ರಾಜರಾಣಿ' ಚಿತ್ರ

  2013ರಲ್ಲಿ ಬಿಡುಗಡೆಯಾದ 'ರಾಜರಾಣಿ' ಚಿತ್ರ ಜೈ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟು, ಫಿಲಂ ಫೇರ್ ಪ್ರಶಸ್ತಿಗೆ ನಾಮಿನೇಟ್ ಕೂಡಾ ಆಗಿದ್ದರು. ಇದಾದ ನಂತರ, ಬಿರಿಯಾನಿ, ಬ್ರಾಮಿಮನ್, ಚೆನ್ನೈ 600028 ಮುಂತಾದ ಸಿನಿಮಾಗಳು ಜೈ ಸಂಪತ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.

  English summary
  Noted Kollywood Actor Jai Sampath Aka Jai, Converting Into Islam And Name Changing Shortly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X