For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಸಿನಿಮಾ ಸೇರಿದ ಸಾಯಿ ಪಲ್ಲವಿ!

  |

  ನಟಿ ಸಾಯಿ ಪಲ್ಲವಿ ನಟನಾ ವೃತ್ತಿಯ ಏರು ಹಾದಿಯಲ್ಲಿದ್ದಾರೆ. ಗ್ಲಾಮರ್, ಸಂಭಾವನೆ ಇತರೆ ಕಾರಣಿಗಲ್ಲದೆ ಪ್ರತಿಭೆಯ ಕಾರಣಕ್ಕೆ ದೊಡ್ಡ ದೊಡ್ಡ ಅವಕಾಶಗಳನ್ನು ಪಡೆಯುತ್ತಾ ಮುಂದೆ ಸಾಗುತ್ತಿದ್ದಾರೆ.

  ಪ್ರತಿ ಬಾರಿಯು ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಅದ್ಭುತ ಪ್ರದರ್ಶನ ತೋರಿ ಸೈ ಎನಿಸಿಕೊಳ್ಳುತ್ತಿರುವ ಸಾಯಿ ಪಲ್ಲವಿ ಇದೀಗ ಹೊಸ ಸವಾಲೊಂದನ್ನು ಸ್ವೀಕರಿಸಿದ್ದಾರೆ.

  ಭಾರತ ಚಿತ್ರರಂಗದ ಅದ್ಭುತ ನಾಯಕ ನಟರಲ್ಲಿ ಒಬ್ಬರಾಗಿರುವ ಕಮಲ್ ಹಾಸನ್ ಸಿನಿಮಾದಲ್ಲಿ ನಟಿಸುವ ನಟಿಸುವ ಸವಾಲನ್ನು ಒಪ್ಪಿಕೊಂಡಿದ್ದಾರೆ ಸಾಯಿ ಪಲ್ಲವಿ.

  ಕಮಲ್ ಹಾಸನ್-ಶಿವಕಾರ್ತಿಕೇಯನ್ ಅವರ ಹೊಸ ಪ್ರಾಜೆಕ್ಟ್‌ನಲ್ಲಿ ಸಾಯಿ ಪಲ್ಲವಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಈ ಸಿನಿಮಾಕ್ಕೆ ಕಮಲ್ ಹಾಸನ್ ಬಂಡವಾಳ ಹೂಡಿದ್ದಾರೆ.

  ಸಿನಿಮಾವು ರಾಜ್ ಕಮಲ್ ಬ್ಯಾನರ್ಸ್‌ನಿಂದ ನಿರ್ಮಾಣಗೊಳ್ಳುತ್ತಿದ್ದು, ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ನಿರ್ಮಾಣ ಸಂಸ್ಥೆಯು ಅಧಿಕೃತವಾಗಿ ಟ್ವೀಟ್ ಮಾಡಿದೆ. ರಾಜ್ ಕಮಲ್ ನಿರ್ಮಾಣ ಸಂಸ್ಥೆಯ 51ನೇ ಸಿನಿಮಾ ಇದಾಗಿದ್ದು, ಸಾಯಿ ಪಲ್ಲವಿ, ಶಿವಕಾರ್ತಿಕೇಯನ್, ಕಮಲ್ ಹಾಸನ್ ಇನ್ನಿತರರು ಒಟ್ಟಿಗೆ ಇರುವ ಚಿತ್ರಗಳನ್ನು ಟ್ವೀಟ್ ಮಾಡಿ, ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿರುವ ಸುದ್ದಿಯನ್ನು ಖಾತ್ರಿಗೊಳಿಸಲಾಗಿದೆ.

  ಸಿನಿಮಾದಲ್ಲಿ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಜೊತೆಗೆ ಕಮಲ್ ಹಾಸನ್ ಸಹ ನಟಿಸಲಿದ್ದಾರೆ. ಸಿನಿಮಾವನ್ನು ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಕತೆ ಬರೆದಿರುವುವದು ಸಹ ಕಮಲ್ ಹಾಸನ್ ಅವರೇ.

  ಸಾಯಿ ಪಲ್ಲವಿಗೆ ಇದು ಎರಡನೇ ಮೂರನೇ ತಮಿಳು ಸಿನಿಮಾ. ಸೂರ್ಯಾ ಜೊತೆಗೆ ಎನ್‌ಜಿಕೆ, ಧನುಶ್ ಜೊತೆಗೆ 'ಮಾರಿ 2' ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಿದ್ದರು. ಒಟಿಟಿಗಾಗಿ 'ಪಾವ ಕತೆಗಳ್' ಹೆಸರಿನ ಅಂಥಾಲಜಿ ತಮಿಳು ಸಿನಿಮಾದಲ್ಲಿಯೂ ಸಾಯಿ ಪಲ್ಲವಿ ನಟಿಸಿದ್ದರು. ಅಸಲಿಗೆ ಸಾಯಿ ಪಲ್ಲವಿ ನಾಯಕಿಯಾಗಿ ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ ಎಂಟ್ರಿ ಕೊಡುವ ಮೊದಲು ಎರಡು ತಮಿಳು ಸಿನಿಮಾದಲ್ಲಿ ಹೆಸರೇ ಇಲ್ಲದ ಅತಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

  ಸಾಯಿ ಪಲ್ಲವಿ ಬಳಿ ಈಗ ಹಲವು ಸಿನಿಮಾಗಳಿವೆ. ಅವರ ನಟನೆಯ 'ವಿರಾಟ ಪರ್ವಂ' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ನಂತರ 'ಗಾರ್ಗಿ' ಹೆಸರಿನ ಹೊಸ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಂತರ ಧನುಶ್‌ರ ಹೊಸ ಸಿನಿಮಾದಲ್ಲಿಯೂ ಸಾಯಿ ಪಲ್ಲವಿ ನಟಿಸಲಿದ್ದಾರೆ. ಇದೀಗ ಕಮಲ್ ಹಾಸನ್ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

  English summary
  Actress Sai Pallavi acting in Kamal Haasan and Shiva Karthikeyan's Movie. Kamal Haasan producing that movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion