twitter
    For Quick Alerts
    ALLOW NOTIFICATIONS  
    For Daily Alerts

    'ಶಿವಾಜಿ'ಗೆ 15 ವರ್ಷ ಹಿನ್ನೆಲೆ ರಜನಿ-ಶಂಕರ್ ಭೇಟಿ: ಇಲ್ಲಿದೆ ಇಂಟ್ರೆಸ್ಟಿಂಗ್ ಮ್ಯಾಟರ್!

    |

    ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ಶಂಕರ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳೆಲ್ಲಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದೆ. ಇಂತಹ ಸಿನಿಮಾಗಳಲ್ಲಿ 'ಶಿವಾಜಿ' ಸಿನಿಮಾ ಕೂಡ ಒಂದು. ರಜನಿಕಾಂತ್ ಹಾಗೂ ಶಂಕರ್ ಎಂದೂ ಮರೆಯಲು ಸಾಧ್ಯವಿಲ್ಲದ ಈ ಸಿನಿಮಾ ಬಿಡುಗಡೆಯಾಗಿ 15 ವರ್ಷಗಳನ್ನು ಪೂರೈಸಿದೆ.

    2007 ಜೂನ್ 15ರಂದು 'ಶಿವಾಜಿ' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಇಂತಹ ವಿಶೇಷ ದಿನದಂದು ನಿರ್ದೇಶಕ ಶಂಕರ್ ಚೆನ್ನೈನ ಪೊಯೆಸ್ ಗಾರ್ಡನ್‌ನಲ್ಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಇಬ್ಬರು ದಿಗ್ಗಜರು ಜೊತೆ ನಿಂತ ಫೋಟೊಗಳು ವೈರಲ್ ಆಗಿವೆ.

    ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!

    'ಶಿವಾಜಿ' ಸಿನಿಮಾದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಶ್ರಿಯಾ ಸರಣ್, ವಿವೇಕ್ ಹಾಗೂ ಸುಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾ ತಮಿಳು ಚಿತ್ರರಂಗದ ದಾಖಲೆಗಳನ್ನು ಉಡೀಸ್ ಮಾಡಿತ್ತು. ಇಂದು ( ಜೂನ್ 15) ಈ ಬ್ಲಾಕ್‌ಬಸ್ಟರ್ ಸಿನಿಮಾ 15 ವರ್ಷದ ಸಂಭ್ರಮದಲ್ಲಿದೆ. ಈಗ ಇಬ್ಬರೂ ಭೇಟಿಯಾಗಿದ್ದು ಹೊಸ ಸಿನಿಮಾ ನಾಂದಿ ಹಾಡುತ್ತಿದ್ದಾರಾ? ಅನ್ನುವ ಅನುಮಾನವಂತೂ ಮೂಡಿದೆ. ಇದೇ ಸಂದರ್ಭದಲ್ಲಿ 'ಶಿವಾಜಿ' ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

    Exclusive: ಶಿವಣ್ಣನಿಗೆ ಕಥೆ ಒಪ್ಪಿಸಿದ ರಜನಿ ಸಿನಿಮಾದ ನಿರ್ದೇಶಕ: ಶಿವಣ್ಣನ ಪಾತ್ರದ ಹೈಲೈಟ್ ಏನು?Exclusive: ಶಿವಣ್ಣನಿಗೆ ಕಥೆ ಒಪ್ಪಿಸಿದ ರಜನಿ ಸಿನಿಮಾದ ನಿರ್ದೇಶಕ: ಶಿವಣ್ಣನ ಪಾತ್ರದ ಹೈಲೈಟ್ ಏನು?

    ಶ್ರೀಲಂಕಾದಲ್ಲಿ ಅತೀ ಹೆಚ್ಚು ಶೋ

    'ಶಿವಾಜಿ' ಸಿನಿಮಾ ಕೇವಲ ಭಾರತ ಅಷ್ಟೇ ಅಲ್ಲದೆ ಏಕಕಾಲಕ್ಕೆ ವಿದೇಶದಲ್ಲಿಯೂ ಬಿಡುಗಡೆಯಾಗಿತ್ತು. ಯುರೋಪ್, ಯುಎಸ್‌ಎ, ಕೆನಡಾ, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು, ಸಿಂಗಾಪುರ, ಮಲೇಷ್ಯಾ ಮತ್ತು ಶ್ರೀ ಲಂಕಾದಲ್ಲಿ ರಿಲೀಸ್ ಆಗಿತ್ತು. ಶ್ರೀಲಂಕಾದಲ್ಲಿಯೇ ಸುಮಾರು 70 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಲ್ಲದೆ ಸುಮಾರು 700 ಶೋಗಳನ್ನುಇಲ್ಲಿ ಪ್ರದರ್ಶನ ಕಂಡಿತ್ತು.

    'ಶಿವಾಜಿ' ಯುಕೆ ರಿಲೀಸ್

    'ಶಿವಾಜಿ' ಯುಕೆ ರಿಲೀಸ್

    ತಮಿಳಿನ ಬ್ಲಾಕ್‌ ಬಸ್ಟರ್ ಸಿನಿಮಾ 'ಶಿವಾಜಿ' ಬಿಡುಗಡೆಯಾದ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುವುದಕ್ಕೆ ಶುರು ಮಾಡಿತ್ತು. ದೇಶ-ವಿದೇಶದಲ್ಲೆಲ್ಲಾ ಸಿನಿಮಾ ರಿಲೀಸ್ ಆಗಿತ್ತು. ಅದರಲ್ಲೂ ಯುಕೆಯಲ್ಲಿ 'ಶಿವಾಜಿ' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ಬಿಡುಗಡೆಯಾದ ಮೊದಲ ವಾರವೇ ಯುಕೆಯ ಟಾಪ್ 10 ಪಟ್ಟಿಯಲ್ಲಿ ಸಿನಿಮಾವಿತ್ತು. ಯುಕೆ ಟಾಪ್ 10 ಪಟ್ಟಿಯಲ್ಲಿದ್ದ ಮೊದಲ ತಮಿಳು ಸಿನಿಮಾ.

    ಯುಕೆ ಗಲ್ಲಾಪೆಟ್ಟಿಗೆಯಲ್ಲಿ 9ನೇ ಸ್ಥಾನ

    ಯುಕೆ ಗಲ್ಲಾಪೆಟ್ಟಿಗೆಯಲ್ಲಿ 9ನೇ ಸ್ಥಾನ

    2007ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಭಾರತದಲ್ಲಿ ಚಿಂದಿ ಉಡಾಯಿಸುತ್ತಿತ್ತು. ಅದರಂತೆಯೇ ಯುಕೆಯಲ್ಲೂ ಈ ಸಿನಿಮಾದ ಗಳಿಕೆ ಅದ್ಭುವಾಗಿತ್ತು. ನಿರ್ದೇಶಕರೇ ಹೇಳಿರುವಂತೆ, ಯುಕೆ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ 9ನೇ ಸ್ಥಾನದಲ್ಲಿತ್ತು. ಸುಮಾರು 14 ಸಾವಿರ ಪೌಂಡ್ಸ್ ಹಣ ಕಲೆಹಾಕಿತ್ತು. ಇಷ್ಟೇ ಅಲ್ಲದೆ ಇದು ಅತೀ ಹೆಚ್ಚು ಸ್ಕ್ರೀನ್ ಕವರೇಜ್ ಮಾಡಿದ ಸಿನಿಮಾಗಳ ಪಟ್ಟಿ ಸೇರಿತ್ತು.

    ರಜನಿ ಅಂದ್ರೆ ಶಿವಾಜಿ

    ರಜನಿ ಅಂದ್ರೆ ಶಿವಾಜಿ

    'ಶಿವಾಜಿ' ಸಿನಿಮಾ 15 ವರ್ಷಗಳ ಹಿಂದೆನೇ 150 ಕೋಟಿ ಕ್ಲಬ್ ಸೇರಿತ್ತು. ಸುಮಾರು 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದಲ್ಲೆಲ್ಲಾ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಂದಿನ ಕಾಲಕ್ಕೆ ಈ ಸಿನಿಮಾ ಸುಮಾರು 150 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು.

    4ಕೆ ರೆಸಲ್ಯೂಷನ್‌ನಲ್ಲಿ ಕಲರ್ ಗ್ರೇಡ್

    ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಶಿವಾಜಿ' ಸಿನಿಮಾವನ್ನು 4K ರೆಸಲ್ಯೂಷನ್‌ನಲ್ಲಿ ಕಲರ್ ಗ್ರೇಡ್ ಮಾಡಲಾಗಿತ್ತು. 800 ಪ್ರಿಂಟ್ಸ್ ಹಾಕಿಸಿ, 4K ರೆಸಲ್ಯೂಷನ್‌ನಲ್ಲಿ ಕಲರ್ ಗ್ರೇಡ್ ಮಾಡಿದ ಮೊದಲ ತಮಿಳು ಸಿನಿಮಾ ಎನಿಸಿಕೊಂಡಿತ್ತು. 'ಶಿವಾಜಿ' ಬಿಡುಗಡೆ ವೇಳೆ ತಮಿಳು ಹಾಗೂ ತೆಲುಗಿನಲ್ಲಿ ಸುಮಾರು 800 ಪ್ರಿಂಟ್‌ಗಳನ್ನು ಹಾಕಿಸಲಾಗಿತ್ತು. ಇನ್ನು ತಮಿಳುನಾಡಿನಲ್ಲಿ 300 ಥಿಯೇಟರ್ ಹಾಗೂ ಆಂಧ್ರದಲ್ಲಿ 340 ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು.

    English summary
    Director Shankar Met Superstar Rajinikanth On Occasion Of 15 Years Of Sivaji Movie. Know More.
    Wednesday, June 15, 2022, 17:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X