For Quick Alerts
  ALLOW NOTIFICATIONS  
  For Daily Alerts

  'ಜೈಲರ್'ನಲ್ಲಿ ಸೂಪರ್‌ಸ್ಟಾರ್ ರಜನಿ ಮುಂದೆ ನಿಲ್ಲೋ 4 ಭಾಷೆಯ 4 ಸ್ಟಾರ್ ನಟರು ಇವರೇ!

  |

  ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾ ನೋಡುವುದಕ್ಕೆ ತಮಿಳುನಾಡಿನ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ರಜನಿ ಹುಟ್ಟುಹಬ್ಬಕ್ಕೆ ಚಿಕ್ಕದೊಂದು ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ.

  ಒಂದ್ಕಡೆ ಟೀಸರ್ ಕಿಕ್ ಕೊಟ್ಟಿದ್ದರೆ. ಇನ್ನೊಂದು ಕಡೆ ರಜನಿಕಾಂತ್ ಜೊತೆ ಕಾಣಿಸಿಕೊಳ್ಳಲಿರೋ ನಾಲ್ಕು ಮಂದಿ ಸ್ಟಾರ್ ನಟರ ಮೇಲೂ ಪ್ರೇಕ್ಷಕರು ಕಣ್ಣಿಟ್ಟಿದ್ದಾರೆ. ಅವರ ಪಾತ್ರಗಳೇನು? ಅವರು ಹೇಗೆ ಕಾಣಿಸಿಕೊಳ್ಳಬಹುದು? ಅನ್ನೋದು ಕುತೂಹಲದಿಂದಲೇ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ.

  ಬಸ್ಸಲ್ಲಿ ಟಿಕೆಟ್ ಇಲ್ದೆ ಓಡಾಡ್ತಿದ್ದ ರಾಮಕೃಷ್ಣ.. ತಪ್ಪಿಸಿಕೊಳ್ಳಲು ಕಂಡೆಕ್ಟರ್ ಶಿವಾಜಿ ಹೇಳಿದ್ದ ಟೆಕ್ನಿಕ್ ಏನು?ಬಸ್ಸಲ್ಲಿ ಟಿಕೆಟ್ ಇಲ್ದೆ ಓಡಾಡ್ತಿದ್ದ ರಾಮಕೃಷ್ಣ.. ತಪ್ಪಿಸಿಕೊಳ್ಳಲು ಕಂಡೆಕ್ಟರ್ ಶಿವಾಜಿ ಹೇಳಿದ್ದ ಟೆಕ್ನಿಕ್ ಏನು?

  ರಜನಿಕಾಂತ್ ಹಿಂದೆಂದಿಗಿಂತಲೂ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಟೀಸರ್ ನೋಡಿದ ಕೂಡಲೇ ರಜನಿ ಅಭಿಮಾನಿಗಳಿಗೆ ಮನವರಿಕೆಯಾಗಿದೆ. ಆದರೆ, ಸೂಪರ್‌ಸ್ಟಾರ್ ಜೊತೆ ಬೇರೆ ಬೇರೆ ಭಾಷೆಯ ಸೂಪರ್‌ಸ್ಟಾರ್‌ಗಳು ಹೇಗೆ ಕಾಣಿಸಿಕೊಳ್ಳಬಹುದು ಅನ್ನೋದನ್ನು ನೋಡುವ ಕಾತುರದಲ್ಲಿಯೇ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ.

  ರಜನಿಕಾಂತ್ – ಮುತ್ತುವೇಲು ಪಾಂಡಿಯನ್

  ರಜನಿಕಾಂತ್ – ಮುತ್ತುವೇಲು ಪಾಂಡಿಯನ್

  ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರೋ 'ಜೈಲರ್' ಸಿನಿಮಾದ ಟೀಸರ್‌ನಲ್ಲೇ ಕೆಲವೊಂದು ಹಿಂಟ್‌ಗಳು ಸಿಕ್ಕಿವೆ. ಹೆಸರೇ ಹೇಳುವಂತೆ ಈ ಸಿನಿಮಾದಲ್ಲಿ ರಜನಿಕಾಂತ್ ಜೈಲರ್ ಅವತಾರದಲ್ಲಿ ಮುತ್ತುವೇಲು ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ವಯಸ್ಸಾಗಿದೆ ಅಂತ ಅನಿಸಿದ್ದರೂ, ಯಾವುದೋ ದೊಡ್ಡ ಯುದ್ಧಕ್ಕೆ ಸಜ್ಜಾಗುತ್ತಿದ್ದಾರೆ ಅನ್ನೋ ಸುಳಿವು ಟೀಸರ್‌ನಲ್ಲೇ ಸಿಕ್ಕಿತ್ತು. ಈ ಮಧ್ಯೆ ದಕ್ಷಿಣ ಭಾರತದ ನಾಲ್ಕು ಜನಪ್ರಿಯ ನಟರು 'ಜೈಲರ್‌'ಗೆ ಏನಾಗಬೇಕು? ಅನ್ನೋದು ಸದ್ಯಕ್ಕೆ ಕುತೂಹಲ.

  ಜೈಲರ್‌ನಲ್ಲಿ ಮೋಹನ್ ಲಾಲ್

  ಜೈಲರ್‌ನಲ್ಲಿ ಮೋಹನ್ ಲಾಲ್

  ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಜೈಲರ್‌ ಸಿನಿಮಾದಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುಳಿವು ಫಸ್ಟ್ ಲುಕ್ ಕೊಟ್ಟಾಗಿದೆ. ಈಗಾಗಲೇ ಚಿತ್ರತಂಡ ರಿಲೀಸ್ ಮಾಡಿರೋ ಫಸ್ಟ್ ಲುಕ್ ರೆಟ್ರೋ ಕಥೆಯನ್ನು ಹೇಳುವುದಕ್ಕೆ ಶುರುಮಾಡಿದೆ. ಆದರೆ, ಮೋಹನ್ ಲಾಲ್ ಇಲ್ಲಿ ಕೇವಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಮಾತು ಕೂಡ ಇದೆ.

  ಕಾಲಿವುಡ್‌ಗೆ ಎಂಟ್ರಿ ಕೊಟ್ಟ ಶಿವಣ್ಣ

  ಕಾಲಿವುಡ್‌ಗೆ ಎಂಟ್ರಿ ಕೊಟ್ಟ ಶಿವಣ್ಣ

  ಶಿವಣ್ಣ 'ಜೈಲರ್' ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿರೋದು ಗೊತ್ತೇ ಇದೆ. ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ ನಟಿಸುತ್ತಿರೋ ಮೊದಲ ಸಿನಿಮಾವಿದು. ಸದ್ಯ ಶಿವಣ್ಣನ ಫಸ್ಟ್ ಲುಕ್ ರಿಲೀಸ್ ಆಗಿದೆಯಷ್ಟೇ. ಆದರೆ, ಶಿವಣ್ಣನ ಪಾತ್ರವೇನು ಅನ್ನೋದು ನಿರ್ದೇಶಕ ನೆಲ್ಸನ್ ಇನ್ನೂ ರಿವೀಲ್ ಮಾಡಿಲ್ಲ.

  'ಜೈಲರ್' ಸೆಟ್‌ನಲ್ಲಿ ಶಿವಕಾರ್ತಿಕೇಯನ್

  'ಜೈಲರ್' ಸೆಟ್‌ನಲ್ಲಿ ಶಿವಕಾರ್ತಿಕೇಯನ್

  ಇತ್ತೀಚೆಗೆ 'ಜೈಲರ್' ಸೆಟ್ಟಿನಲ್ಲಿ ಶಿವಕಾರ್ತಿಕೇಯನ್ ಕಾಣಿಸಿಕೊಂಡಿದ್ದರು. ಶಿವಣ್ಣ ಹಾಗೂ ಶಿವಕಾರ್ತಿಕೇಯನ್ ಜೊತೆಯಲ್ಲಿರುವ ಫೋಟೊಗಳು ಹರಿದಾಡಿದ್ದವು. ಹೀಗಾಗಿ ಶಿವಕಾರ್ತಿಯೇನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

  ತೆಲುಗು ನಟ ಸುನೀಲ್ ಎಂಟ್ರಿ

  ತೆಲುಗು ನಟ ಸುನೀಲ್ ಎಂಟ್ರಿ

  'ಪುಷ್ಪ' ಸಿನಿಮಾದಲ್ಲಿ ವಿಲನ್ ಲುಕ್ ಕೊಟ್ಟಿದ್ದ ಟಾಲಿವುಡ್ ನಟ ಸುನೀಲ್ 'ಜೈಲರ್‌'ನಲ್ಲೂ ನಟಿಸುತ್ತಿದ್ದಾರೆ. ಕಾಲಿವುಡ್ ಮೂಲಗಳ ಪ್ರಕಾರ, ಪ್ರಮುಖ ಪಾತ್ರದಲ್ಲಿ ಸುನೀಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಸುನೀಲ್ ಕೊಡ ರೆಟ್ರೋ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರಜನಿಕಾಂತ್ 'ಜೈಲರ್' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡೋದು ಪಕ್ಕಾ ಅಂತಲೇ ಭವಿಷ್ಯ ನುಡಿಯುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್.

  English summary
  Shivarajkumar, Mohanlal,Sivakarthikeyan,Sunil Top 4 stars In Rajinikanth’s Jailer Movie, Know More.
  Friday, January 20, 2023, 22:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X