For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಹುಟ್ಟುಹಬ್ಬ; ಪ್ರೀತಿಯ ಅಪ್ಪನಿಗೆ ಶ್ರುತಿ ಹಾಸನ್ ವಿಶ್ ಮಾಡಿದ್ದು ಹೀಗೆ

  |

  ಲೆಜೆಂಡರಿ ನಟ ಕಮಲ್ ಹಾಸನ್ ಗೆ ಇಂದು (ನ.7) ಹುಟ್ಟುಹ್ಬಬದ ಸಂಭ್ರಮ. 66ನೇ ವಸಂತಕ್ಕೆ ಕಾಲಿಟ್ಟಿರುವ ನಟ ಕಮಲ್ ಹಾಸನ್ ಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಭಾರತೀಯ ಸಿನಿಮಾರಂಗದ ಪ್ರತಿಭಾವಂತ ನಟ, ಸಕಲಕಲಾವಲ್ಲಭ ಕಮಲ್ ಹಾಸನ್ ತಮಿಳು ಸಿನಿಮಾರಂಗಲ್ಲಿ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ಎಲ್ಲಾ ಭಾಷೆಯ ಅಭಿಮಾನಿಗಳು ಸಹ ಇಂದು ವಿಶ್ ಮಾಡಿ ಸಂತೋಷ ಪಡುತ್ತಿದ್ದಾರೆ.

  ವಿಶೇಷ ಅಂದರೆ ಕಮಲ್ ಹಾಸನ್ ಪ್ರೀತಿಯ ಪುತ್ರಿ ಶ್ರುತಿ ಹಾಸನ್ ತಂದೆ ಜೊತೆ ಇರುವ ಮುದ್ದಾದ ಹಳೆಯ ಫೋಟೋವನ್ನು ಶೇರ್ ಮಾಡಿ ಪ್ರೀತಿಯ ಸಂದೇಶ ರವಾನಿಸಿದ್ದಾರೆ. ಬಾಪುಜಿ, ಅಪ್ಪಾ, ಡ್ಯಾಡಿ ಎಂದು ಪ್ರೀತಿಯಿಂದ ಕರೆದು ಅಪ್ಪನಿಗೆ ಶುಭಾಶಯ ತಿಳಿಸಿದ್ದಾರೆ.

  2021ರಲ್ಲಿ ತಮಿಳುನಾಡು ಚುನಾವಣೆ: ಚುರುಕುಗೊಂಡ ಕಮಲ್ ಹಾಸನ್

  'ನನ್ನ ನನ್ನ ಪ್ರೀತಿಯ ಬಾಪುಜಿ, ಅಪ್ಪಾ, ಡ್ಯಾಡಿ ಜನ್ಮ ದಿನದ ಶುಭಾಶಯಗಳು. ಈ ವರ್ಷ ನಿಮ್ಮ ಭವ್ಯವಾದ ವರ್ಷಗಳ ಗ್ರಂಥಾಲಯದಲ್ಲಿ ಮತ್ತೊಂದು ಸ್ಮರಣೀಯ ವರ್ಷವಾಗಿರಲಿ. ಜಗತ್ತಿಗೆ ನೀವು ಏನೆಲ್ಲ ಕೊಡುಬೇಕು ಎಂದು ಸಂಗ್ರಹಿಸಿದ್ದೀರೋ ಎಲ್ಲವನ್ನೂ ನೋಡಲು ಕಾತರಳಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

  ಕಮಲ್ ಹಾಸನ್ ಸದ್ಯ ಸಿನಿಮಾಗಳ ಜೊತೆಗೆ ರಾಜಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಕಮಲ್ ಹಾಸನ್ ಮಕ್ಕಳ್ ನೀಧಿ ಮೈಯಂ ಪಕ್ಷವನ್ನು ಸ್ಥಾಪಿಸಿದ್ದಾರೆ. ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಕಮಲ್ ರಾಜಕೀಯರಂಗದಲ್ಲಿ ಸಕ್ರೀಯರಾಗಿದ್ದಾರೆ. ಇದೀಗ ಸದ್ಯ ತಮಿಳು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ.

  ಇಂಡಿಯನ್-2 ಸಿನಿಮಾದಲ್ಲಿ ನಟಿಸುತ್ತಿದ್ದ ಕಮಲ್ ಲಾಕ್ ಡೌನ್ ಬಳಿಕ ಇನ್ನೂ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಕಮಲ್ ಹಾಸನ್ ಕೊನೆಯದಾಗಿ 2018ರಲ್ಲಿ ವಿಶ್ವರೂಪಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಇಂಡಿಯನ್-2 ಯಾವಾಗ ರಿಲೀಸ್ ಆಗುತ್ತೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

  English summary
  Kamal Haasan celebrating his 66 birthday. shruti haasan birthday wishes to her Father.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X