For Quick Alerts
  ALLOW NOTIFICATIONS  
  For Daily Alerts

  ತ್ರಿಶಾ ರಾಜಕೀಯ ಪ್ರವೇಶದ ಬಗ್ಗೆ ಹೊಸ ಸುದ್ದಿ: ತಾಯಿ ಹೇಳಿದ ಸತ್ಯವೇನು?

  |

  ದಕ್ಷಿಣ ಭಾರತದ ಸ್ಟಾರ್ ನಟಿ ತ್ರಿಶಾ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಓಡಾಡುತ್ತಲೇ ಇತ್ತು. ಕೆಲವು ದಿನಗಳ ಹಿಂದಷ್ಟೇ ಕಾಲಿವುಡ್‌ನಲ್ಲಿ ತ್ರಿಶಾ ರಾಜಕೀಯ ಪ್ರವೇಶದ ಬಗ್ಗೆನೇ ಸುದ್ದಿಯೊಂದು ಗಿರಿಕಿ ಹೊಡೆಯುತ್ತಿತ್ತು.

  ತಮಿಳು ಸೂಪರ್‌ಸ್ಟಾರ್ ನಟ ಬೆಂಬಲ ವ್ಯಕ್ತಪಡಿಸಿದ್ದರಿಂದ ತ್ರಿಶಾ ರಾಜಕೀಯಕ್ಕೆ ಪವೇಶ ಮಾಡುತ್ತಾರೆ ಎನ್ನಲಾಗಿತ್ತು. ಚೆನ್ನೈನ ಈ ಚೆಲುವೆ ಸಿನಿಮಾಗೆ ಗುಡ್‌ ಬೈ ಹೇಳುತ್ತಾರಾ? ರಾಜಕೀಯ ಪ್ರವೇಶ ಅಂದ್ರೆ ಯಾವ ಪಕ್ಷ ಸೇರುತ್ತಾರೆ? ಈಗ ಹರಿದಾಡುತ್ತಿರುವ ಸುದ್ದಿ ನಿಜವೇ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ.

  ತ್ರಿಶಾ ರಾಜಕೀಯ ಎಂಟ್ರಿ ನಿಜವೇ?

  ತ್ರಿಶಾ ರಾಜಕೀಯ ಎಂಟ್ರಿ ನಿಜವೇ?

  ಚಿತ್ರರಂಗದಲ್ಲಿ ತ್ರಿಶಾ ಜನಪ್ರಿಯತೆ ಹೇಗಿದೆ ಅನ್ನೋದು ಗೊತ್ತಿದೆ. ಈ ಕಾರಣಕ್ಕಾಗಿಯೇ ತ್ರಿಶಾರನ್ನು ರಾಜಕೀಯಕ್ಕೆ ಕರೆದುಕೊಂಡು ಬರುವುದಕ್ಕೆ ಒಂದು ಪಕ್ಷ ತುದಿಗಾಲಲ್ಲಿ ನಿಂತಿದೆ ಎನ್ನಲಾಗಿತ್ತು. ತ್ರಿಶಾ ಅತೀ ಶೀಘ್ರದಲ್ಲಿಯೇ ರಾಜಕೀಯ ಪಕ್ಕ ಸೇರಲಿದ್ದಾರೆ ಅನ್ನೋ ಪುಕಾರು ಹಬ್ಬಿತ್ತು. ಆದರೂ ತ್ರಿಶಾ ಮಾತ್ರ ಪ್ರತಿಕ್ರಿಯೆ ನೀಡುವುದಕ್ಕೆ ಮುಂದಾಗಿರಲಿಲ್ಲ.

  ತ್ರಿಶಾ ರಾಜಕೀಯಕ್ಕೆ ಬರುವುದಕ್ಕೆ ಪ್ರಮುಖ ಕಾರಣ ದಳಪತಿ ವಿಜಯ್. ತಮಿಳಿನ ಈ ಸೂಪರ್‌ಸ್ಟಾರ್ ರಾಜಕೀಯಕ್ಕೆ ಪ್ರವೇಶ ಮಾಡುವಂತೆ ತ್ರಿಶಾಗೆ ಸೂಚನೆ ನೀಡಿದ್ದರಿಂದಲೇ ಅವರು ಈ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ಆ ಗಾಳಿಸುದ್ದಿಗಳು ನಿಜವೋ? ಇಲ್ಲಾ ಬರೀ ಗಾಳಿ ಸುದ್ದಿಯೋ ಅನ್ನೋದಕ್ಕೆ ತ್ರಿಶಾ ಅಮ್ಮ ಉತ್ತರ ಕೊಟ್ಟಿದ್ದಾರೆ.

  ನಟಿ ತ್ರಿಶಾ ಅಮ್ಮ ಹೇಳಿದ್ದೇನು?

  ನಟಿ ತ್ರಿಶಾ ಅಮ್ಮ ಹೇಳಿದ್ದೇನು?

  ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ಬಗ್ಗೆ ತ್ರಿಶಾ ಇದೂವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತ್ರಿಶಾ ತಾಯಿ ಮಗಳ ರಾಜಕೀಯ ಪ್ರವೇಶದ ಬಗ್ಗೆ ಸಂದೇಶ ರವಾನೆ ಮಾಡಿದ್ದಾರೆ. " ನನ್ನ ಮಗಳು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ. ತ್ರಿಶಾ ಸಿನಿಮಾಗಳಲ್ಲಿ ಅಭಿನಯ ಮುಂದುವರೆಸಲಿದ್ದಾರೆ. ತ್ರಿಶಾಗೆ ಯಾವುದೇ ರಾಜಕೀಯ ಹಂಬಲ ಇಲ್ಲ ಎಂದು ಹೇಳಿದ್ದಾರೆ." ಎಂದು ತ್ರಿಶಾ ತಾಯಿ ಉಮಾ ಕೃಷ್ಣನ್ ಹೇಳಿಕೆ ಕೊಟ್ಟಿದ್ದಾರೆ.

  ಮುಂದಿನ ವರ್ಷ ತ್ರಿಶಾ 40 ವರ್ಷಕ್ಕೆ ಕಾಲಿಡಲಿದ್ದಾರೆ. ನಾಯಕಿಯಾಗಿ ಅವರ ವೃತ್ತಿ ಬಹುತೇಕ ಮುಗಿದ ಅಧ್ಯಾಯ ಎಂದೇ ಹೇಳಲಾಗುತ್ತಿದ್ದು, ಈ ಕಾರಣಕ್ಕೆ ರಾಜಕೀಯ ಪ್ರವೇಶ ಮಾಡುವುದಕ್ಕೆ ಸಜ್ಜಾಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿತ್ತು. ಆದರೆ, ಆ ಎಲ್ಲಾ ಗಾಳಿ ಸುದ್ದಿಯನ್ನು ತ್ರಿಶಾ ತಾಯಿ ತಳ್ಳಿ ಹಾಕಿದ್ದಾರೆ.

  ಮಣಿರತ್ನಂ ಸಿನಿಮಾ ತ್ರಿಶಾ

  ಮಣಿರತ್ನಂ ಸಿನಿಮಾ ತ್ರಿಶಾ

  ಸದ್ಯ ತ್ರಿಶಾ ಕೈಯಲ್ಲಿ ಬಹು ನಿರೀಕ್ಷೆಯ ಸಿನಿಮಾ 'ಪೊನ್ನಿಯನ್ ಸೆಲ್ವನ್-1' ಇದೆ. ಈ ಮಲ್ಟಿಸ್ಟಾರರ್ ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಿದೆ.

  ತ್ರಿಶಾ ಈ ಸಿನಿಮಾ ಕುಂಡವೈ ಪಿರತ್ತಿಯರ್ ಅನ್ನೋ ಚೋಳಾ ಸಾಮ್ರಾಜ್ಯದ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಇದು ಸೆಪ್ಟೆಂಬರ್ 30 ರಂದು ವಿಶ್ವದಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ತ್ರಿಶಾ ರಾಜಕೀಯ ಪ್ರವೇಶ ಸುಳ್ಳು ಎಂಬುದು ಸಾಬೀತಾಗಿದ್ದು, ಸಿನಿಮಾದಲ್ಲಿಯೇ ಮುಂದುವರೆಯಲಿದ್ದಾರೆ.

  English summary
  South Actress Trisha Rejected Political Entry, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X