Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೊನೆಗೂ ರಜನಿಕಾಂತ್ ಮುಖದಲ್ಲಿ ಮೂಡಿತು ನಗು: 169ನೇ ಸಿನಿಮಾ ಅಧಿಕೃತ ಘೋಷಣೆ
ಕಳೆದ ಕೆಲವು ದಿನಗಳಿಂದ ತಲೈವಾ ರಜನಿಕಾಂತ್ ಹೊಸ ಸಿನಿಮಾ ಬಗ್ಗೆ ಗುಲ್ಲೆದ್ದಿತ್ತು. ಸೂಪರ್‌ಸ್ಟಾರ್ ಶೀಘ್ರದಲ್ಲಿಯೇ 169ನೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅದು ಈಗ ನಿಜವಾಗಿದೆ. ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ನಿರ್ದೇಶಿಸಿರುವ ನೆಲ್ಸನ್ ದಿಲೀಪ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟು ದಿನ ಕೇವಲ ಗಾಳಿ ಸುದ್ದಿಯಾಗಿದ್ದ ರಜನಿಕಾಂತ್ ಹಾಗೂ ದಿಲೀಪ್ ಕುಮಾರ್ ಸಿನಿಮಾ ಕೊನೆಗೂ ಸೆಟ್ಟೇರಿದೆ.
Recommended Video
ಮೊದಲ ಪುತ್ರಿ ಐಶ್ವರ್ಯಾ ದಾಂಪತ್ಯಕ್ಕೆ ಅಂತ್ಯ ಹಾಡಿದ ದಿನದಿಂದ್ಲೂ ರಜನಿಕಾಂತ್ ಮೂಡು ಸರಿಯಿಲ್ಲ. ಮಗಳ ಸಂಸಾರದ ಬಗ್ಗೆನೇ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಕೂಡ ಹಡಿದಾಡುತ್ತಿವೆ. ಇದರ ಮಧ್ಯೆಯೇ ಸೂಪರ್‌ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸೂಪರ್‌ಸ್ಟಾರ್ ಸಿನಿಮಾವನ್ನು ತನ್ನದೇ ಸೈಲ್‌ನಲ್ಲಿ ಅನೌನ್ಸ್ ಮಾಡಿದ್ದಾರೆ.
ಮಗಳ
ವಿಚ್ಛೇದನದ
ತಲೆಬಿಸಿ
ನಡುವೆ
ಹೊಸ
ಸಿನಿಮಾ
ಘೋಷಿಸಿದ್ರಾ
ರಜನಿಕಾಂತ್:
ಈ
ಸುದ್ದಿ
ನಿಜವೇ?

ರಜನಿ 169ನೇ ಸಿನಿಮಾ ಶುರು
ರಜನಿಕಾಂತ್ ಅಭಿಮಾನಿಗಳಿಗೆ ಇಂದು ಖುಷಿ ವಿಷಯ. ಇಷ್ಟು ದಿನ ರಜನಿ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದ ತಲೈವಾ ಫ್ಯಾನ್ಸ್ ಕೊಂಚ ನಿರಾಳರಾಗಿದ್ದಾರೆ. ರಜನಿಕಾಂತ್ 169ನೇ ಸಿನಿಮಾಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಪುಟ್ಟ ಟೀಸರ್ ಮೂಲಕ ದಿಲೀಪ್ ಕುಮಾರ್ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅನಿರುದ್ಧ್, ನೆಲ್ಸನ್ ದಿಲೀಪ್ ಕುಮಾರ್ ಹಾಗೂ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಈ ಪುಟ್ಟ ಟೀಸರ್ ಥ್ರಿಲ್ಲಿಂಗ್ ಆಗಿದ್ದು ಅಭಿಮಾನಿಗಳನ್ನು ಖುಷಿಯಲ್ಲಿ ಅಲೆಯಲ್ಲಿ ತೇಲಿಸುತ್ತಿದೆ.
|
ರಜನಿ ಮೂಖದಲ್ಲಿ ಮೂಡಿದ ನಗು
ವೈಯಕ್ತಿಕ ಬದುಕಿನಲ್ಲಿ ರಜನಿಕಾಂತ್ ಈಗ ನೆಮ್ಮದಿ ಕಳೆದುಕೊಂಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ವಿಚ್ಛೇದನ ಪಡೆದಿರುವುದನ್ನು ಸೂಪರ್‌ಸ್ಟಾರ್‌ಗೆ ನೋವುಂಟು ಮಾಡಿದೆ ಎಂದೇ ಹೇಳಲಾಗಿತ್ತು. ಇದರ ಜೊತೆ 'ಅಣ್ಣಾತ್ತೆ' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದ್ದರೂ, ವಿಮರ್ಶೆಗಳು ಚೆನ್ನಾಗಿರಲಿಲ್ಲ. ಹೀಗಾಗಿ ರಜನಿಕಾಂತ್ ಮಾನಸಿಕವಾಗಿ ಕುಗ್ಗಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೀಗ 169ನೇ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಟೀಸರ್‌ನಲ್ಲಿ ರಜನಿ ನಗು ಕಂಡು ಫ್ಯಾನ್ಸ್ ಮುಖದಲ್ಲೂ ನಗು ಮೂಡಿದೆ.

ನೆಲ್ಸನ್ ಕಥೆ ಒಪ್ಪಿದ ರಜನಿ
ರಜನಿಕಾಂತ್‌ಗೆ ಕೆಲವು ದಿನಗಳ ಹಿಂದೆನೇ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕಥೆಯೊಂದನ್ನು ಒಪ್ಪಿಸಿದ್ದರು. ಆ ವೇಳೆ ರಜನಿಗೆ ಕಥೆ ಇಷ್ಟ ಆಗಿರಲಿಲ್ಲ. ಸಿನಿಮಾ ನಿರೂಪಣೆ ತಮ್ಮ ಮ್ಯಾನರಿಸಂಗೆ ಹೊಂದಾಣಿಕೆ ಆಗುವುದಿಲ್ಲವೆಂದು ರಜನಿ ಭಾವಿಸಿದ್ದರಂತೆ. ಹೀಗಾಗಿ ನೆಲ್ಸನ್ ಕಥೆಯನ್ನು ಪಕ್ಕಕ್ಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ನೆಲ್ಸನ್ ದಿಲೀಪ್ ಕುಮಾರ್ ಕೂಡ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಮತ್ತೆ ರಜನಿಗೆ ಕಥೆ ಹೇಳಿದ್ದರು. ಇದು ಸೂಪರ್‌ಸ್ಟಾರ್‌ಗೆ ಹಿಡಿಸಿತ್ತು. ಹೀಗಾಗಿ ಸಿನಿಮಾ ಮಾಡಲು ಒಪ್ಪಿದ್ದಾರೆ ಎನ್ನಲಾಗಿದೆ. ನಿರ್ದೇಶಕ ನೆಲ್ಸನ್ ಟ್ವೀಟ್ ಮಾಡಿ " ನನ್ನ ಮುಂದಿನ ಸಿನಿಮಾ ಲೆಜೆಂಡರಿ ಸೂಪರ್‌ಸ್ಟಾರ್ ಜೊತೆ ಎಂದು ಹೇಳುವುದಕ್ಕೆ ಖುಷಿಯಾಗುತ್ತಿದೆ. ಸನ್ ಪಿಕ್ಚರ್ಸ್ ಜೊತೆ ಹಾಗೂ ಸ್ನೇಹಿತ ಅನಿರುದ್ಧ್ ಜೊತೆ ಮತ್ತೆ ಸಿನಿಮಾ ಕೆಲಸ ಮಾಡುತ್ತಿದ್ದೇನೆ." ಎಂದು ಟ್ವೀಟ್ ಮಾಡಿದ್ದಾರೆ.

ರಜನಿ ಸಿನಿಮಾ ಅನಿರುದ್ಧ್ ಮ್ಯೂಸಿಕ್
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾಗೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ನಿರಂತರವಾಗಿ ಸೂಪರ್ ಸ್ಟಾರ್ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದಾರೆ. "ರಜನಿಯ 169ನೇ ಸಿನಿಮಾಗಾಗಿ ನಾವು ಮತ್ತೆ ಬಂದಿದ್ದೇವೆ. ಒನ್ ಅಂಡ್ ಓನ್ಲಿ ಸೂಪರ್‌ಸ್ಟಾರ್ ರಜನಿಕಾಂತ್, ನೆಲ್ಸನ್ ದಿಲೀಪ್ ಕುಮಾರ್ ಜೊತೆಯಾಗಿದ್ದೇವೆ." ಎಂದು ಅನಿರುದ್ಧ್ ಟ್ವೀಟ್ ಮಾಡಿದ್ದಾರೆ. ಈ ಕಾಂಬಿನೇಷನ್ ಬಗ್ಗೆ ಆರಂಭದಲ್ಲಿ ಕುತೂಹಲ ಕೆರಳಿಸಿದ್ದು, ರಜನಿ ಫ್ಯಾನ್ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.