Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಚ್ಛೇದನದ ಸುದ್ದಿ ಸದ್ದು ಮಾಡುತ್ತಿರುವಾಗಲೇ ಸದ್ದು ಮಾಡುತ್ತಿವೆ ಧನುಷ್ ಅಫೇರ್‌ಗಳು
ಧನುಷ್ ಹಾಗೂ ಪತಿ ಐಶ್ವರ್ಯಾ ರಜನಿಕಾಂತ್ ವಿಚ್ಛೇದನದ ತಮಿಳು ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದೆ. ಇಬ್ಬರೂ ಜಂಟಿಯಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ. ಆದರೆ, ಕೆಲವರು 18 ವರ್ಷದ ದಾಂಪತ್ಯಕ್ಕೆ ಧನುಷ್ ಹಾಗೂ ಐಶ್ವರ್ಯಾ ಗುಡ್ ಬೈ ಹೇಳಿದ್ದಕ್ಕೆ ಕಾರಣ ಹುಡುಕಲು ಆರಂಭಿಸಿದ್ದಾರೆ. ಈ ವೇಳೆ ಧನುಷ್ ಅಫೇರ್‌ಗಳ ಬಗ್ಗೆನೂ ಭಾರೀ ಚರ್ಚೆಯಾಗುತ್ತಿದೆ.
Recommended Video
ತಮಿಳು ಚಿತ್ರರಂಗದಲ್ಲಿ ಧನುಷ್ ಹೆಸರು ಮಾಡುತ್ತಿದ್ದಂತೆ ವಿವಾದಗಳೂ ಕೂಡ ಸುತ್ತಿಕೊಂಡಿದ್ದವು. ಕೆಲವು ತಮಿಳು ನಟಿಯರ ಹೆಸರುಗಳೂ ಕೂಡ ತಳುಕು ಹಾಕಿಕೊಂಡಿತ್ತು. ದಕ್ಷಿಣ ಭಾರತದ ಇಬ್ಬರು ಖ್ಯಾತ ನಟಿಯರಾದ ತ್ರಿಶಾ ಹಾಗೂ ಶೃತಿ ಹಾಸನ್ ಜೊತೆ ಧನುಷ್ ಹೆಸರು ತಳುಕು ಹಾಕಿಕೊಂಡಿತ್ತು. ಧನುಷ್ ಈ ಅಫೇರ್‌ಗಳೇ ವಿಚ್ಛೇದನಕ್ಕೆ ಕಾರಣ ಅನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಿದ್ದರೆ, ತ್ರಿಶಾ ಹಾಗೂ ಶೃತಿ ಹಾಸನ್ ಜೊತೆ ಧನುಷ್ ತಳು ಹಾಕಿಕೊಂಡಿದ್ದು ಯಾವಾಗ? ಆಗ ಐಶ್ವರ್ಯಾ ಏನು ಹೇಳಿದ್ದರು ಎಂದು ತಿಳಿಯಲು ಮುಂದೆ ಓದಿ...

ಧನುಷ್-ಶೃತಿ ಹಾಸನ್ ಡೇಟಿಂಗ್?
ಧನುಷ್ ಹಾಗೂ ಶೃತಿ ಹಾಸನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬೇಜಾನ್ ಸದ್ದು ಮಾಡಿತ್ತು. ಐಶ್ವರ್ಯಾ ಅದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದರು. ಪತಿ ಧನುಷ್ ನಟಿಸುತ್ತಿದ್ದ '3' ಸಿನಿಮಾಗೆ ಐಶ್ವರ್ಯಾ ನಿರ್ದೇಶಕಿಯಾಗಿದ್ದರು. ಈ ವೇಳೆ ಸ್ನೇಹಿತೆ ನಟಿ ಶೃತಿ ಹಾಸನ್‌ರನ್ನು ಐಶ್ವರ್ಯಾ ಪ್ರಮುಖ ಪಾತ್ರದಲ್ಲಿ ಆಯ್ಕೆ ಮಾಡಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ಶೃತಿ ಹಾಸನ್ ನಟ ಧನುಷ್‌ಗೆ ತೀರಾ ಹತ್ತಿರ ಆಗಿದ್ದರು ಎಂಬ ಸುದ್ದಿ ಹರಿದಾಡಲು ಶುರುವಾಗಿತ್ತು. ಸಿನಿಮಾಗಿಂತ ಹೆಚ್ಚಾಗಿ ಧನುಷ್ ಹಾಗೂ ಶೃತಿ ಹಾಸನ್ ಡೇಟಿಂಗ್ ವಿಚಾರವೇ ಹೆಚ್ಚು ಸದ್ದು ಮಾಡಲು ಶುರುಮಾಡಿತ್ತು. ಈ ಸುದ್ದಿ ಸದ್ದು ಮಾಡುತ್ತಿದ್ದಂತೆ, ಶೃತಿ ಹಾಸನ್ ಹಾಗೂ ಐಶ್ವರ್ಯಾ ಇಬ್ಬರೂ ಇದರಲ್ಲಿ ಸತ್ಯವಿಲ್ಲವೆಂದು ಹೇಳಿದ್ದರು.

ತ್ರಿಶಾ ಜೊತೆ ಧನುಷ್ ಅಫೇರ್?
ನಟ ಧನುಷ್ ಹಾಗೂ ತ್ರಿಶಾ ಜೊತೆಗೆ ಪಾರ್ಟಿ ಮಾಡುತ್ತಿರುವ ಹಲವು ಫೋಟೊಗಳು ವೈರಲ್ ಆಗಿದ್ದವು. ಈ ಫೋಟೊಗಳು ಲೀಕ್ ಆಗುತ್ತಿದ್ದಂತೆ ಇಬ್ಬರಿಗೂ ತೀರಾ ಹತ್ತಿರದ ಸಂಬಂಧವಿದೆಯೆಂದು ಕಾಲಿವುಡ್ ಮಾತಾಡಿಕೊಳ್ಳಲು ಶುರುವಿಟ್ಟುಕೊಂಡಿತ್ತು. ಕೆಲವೊಮ್ಮೆ ಧನುಷ್ ಹಾಗೂ ತ್ರಿಶಾ ಮಧ್ಯೆ ಅಫೇರ್ ಕೂಡ ನಡೆಯುತ್ತಿದೆ ಎನ್ನುವ ಸುದ್ದಿಗಳೂ ಹರಿದಾಡಿದ್ದವು, ಆದರೆ, ಈ ಬಗ್ಗೆ ತ್ರಿಶಾ ಪ್ರತಿಕ್ರಿಯೆ ನೀಡಲು ಹೋಗಲಿಲ್ಲ. 2015ರಲ್ಲಿ ತ್ರಿಶಾ ನಿಶ್ಚಿತಾರ್ಥ ಮುರಿದು ಬೀಳುವುದಕ್ಕೂ ಧನುಷ್ ಕಾರಣ ಎಂಬ ಮಾತು ಕೇಳಿ ಬಂದಿತ್ತು.

ನಟಿ ಅಮಲಾ ವಿಚ್ಛೇದನಕ್ಕೆ ಧನುಷ್ ಕಾರಣ?
ತಮಿಳು ನಿರ್ದೇಶಕ ಎ ಎಲ್ ವಿಜಯ್ ಹಾಗೂ ನಟಿ ಅಮಲಾ ಪೌಲ್ ವಿಚ್ಛೇದನಕ್ಕೂ ಧನುಷ್ ಕಾರಣ ಎಂಬ ಸುದ್ದಿಗಳು ಹರಿದಾಡಿದ್ದವು. ನಿರ್ದೇಶಕ ಎ ಎಲ್ ವಿಜಯ್ ಅವರ ತಂದೆ ತಮಿಳು ಸುದ್ದಿ ವಾಹಿನಿಯೊಂದರಲ್ಲಿ ತನ್ನ ಮಗನ ಸಂಸಾರ ಹಾಳಾಗುವುದಕ್ಕೆ ಧನುಷ್ ಕಾರಣವೆಂದು ಆರೋಪ ಮಾಡಿದ್ದರು. 2017ರಲ್ಲಿ ಎಎಲ್ ವಿಜಯ್ ವಿಚ್ಛೇದನ ನೀಡಿದ ಬಳಿಕ ಹೇಳಿಕೆ ನೀಡಿದ್ದರು. "ಅಮಲಾ ಸಿನಿಮಾದಲ್ಲಿ ನಟಿಸಲು ಇಷ್ಟ ಪಟ್ಟಿದ್ದರು. ನಾನು ಅವರಿಗೆ ಬೆಂಬಲ ನೀಡಿದ್ದೆ. ಅಲ್ಲಿ ಏನೂ ಅಡೆತಡೆಗಳಿರಲಿಲ್ಲ. ಮದುವೆಗೆ ದೊಡ್ಡ ಅಡಿಪಾಯವೆಂದರೆ ನಂಬಿಕೆ ಮತ್ತು ಪ್ರಾಮಾಣಿಕತೆ. ಇದು ಇಲ್ಲದೆ ಇದ್ದಾಗ ಸಂಬಂಧವನ್ನು ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ." ಎಂದು ಹೇಳಿದ್ದರು.

ದಾಂಪತ್ಯ ಉಳಿಸಲು ಮುಂದಾಗಿದ್ದ ರಜನಿಕಾಂತ್
ಧನುಷ್ ಒಂದೊಂದೇ ವಿವಾದಗಳಲ್ಲಿ ಹೆಸರು ಕೆಡಿಸಿಕೊಳ್ಳುತ್ತಿದ್ದರೂ ರಜನಿಕಾಂತ್ ಎಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಮಗಳ ದಾಂಪತ್ಯವನ್ನು ಉಳಿಸುವ ಪ್ರಯತ್ನ ಮಾಡಿದ್ದರು. ಎರಡೂ ಕುಟುಂಬಗಳೂ ಧನುಷ್ ಹಾಗೂ ಐಶ್ವರ್ಯಾ ಮತ್ತೆ ಜೊತೆಯಾಗಿ ಸಂಸಾರ ಮಾಡಲು ಯಶ ಪ್ರಯತ್ನ ಪಟ್ಟಿದ್ದರು. ಹೀಗಾಗಿ ಧನುಷ್ ವಿರುದ್ಧ ವಿವಾದಗಳು ಎದ್ದಾಗ, ಅದು ಅಲ್ಲಿಗೆ ಮುಗಿದು ಹೋಗುತ್ತಿತ್ತು. ಆದರೆ, ಈಗ ಇಬ್ಬರೂ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣವೇನು ಅನ್ನುವುದನ್ನು ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಬಹಿರಂಗ ಪಡಿಸಿಲ್ಲ.