Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್‌ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Simbu Car Accident: ಸಿಂಬು ಕಾರು ಅಪಘಾತದಲ್ಲಿ 70 ವರ್ಷದ ವೃದ್ಧ ಸಾವು: ವಿಡಿಯೋ ವೈರಲ್
ತಮಿಳು ಚಿತ್ರರಂಗದ ಸ್ಟಾರ್ ನಟ ಸಿಂಬು ಅಲಿಯಾಸ್ ಸಿಲಂಬರಸನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಗಾಗ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ಈ ನಟನಿಗೆ ಮತ್ತೊಂದು ತಲೆ ನೋವು ಎದುರಾಗಿದೆ. ಕೆಲವೇ ದಿನಗಳ ಹಿಂದೆ ಸಿಂಬು ಹೆಸರಿನಲ್ಲಿ ನೋಂದಣಿಯಾಗಿರುವ ಕಾರು ಅಪಘಾತಕ್ಕೀಡಾಗಿದೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು, ಅಪಘಾತದಲ್ಲಿರುವು ಸಿಂಬು ಕಾರು ಎನ್ನಲಾದ ವಿಡಿಯೋ ವೈರಲ್ ಆಗಿದೆ.
Recommended Video

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಪಘಾತದ ಪ್ರಕರಣ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಸಿಂಬು ಕಾರು ಅಪಘಾತದಲ್ಲಿ 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತರಾದ ವ್ಯಕ್ತಿ ತಮಿಳುನಾಡಿನ ಮುನುಸ್ವಾಮಿ ಎಂದು ಗುರುತಿಸಲಾಗಿದೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದಾರೆ. ಸಿಂಬು ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮದುವೆ
ಡೇಟ್
ಹೇಳಲು
ನಟ
ಸಿಂಬು
ಸಜ್ಜು:
ನಿಧಿ
ಅಗರ್ವಾಲ್
ಡೇಟಿಂಗ್
ಲಿಸ್ಟ್
ಔಟ್!

ಅಪಘಾತ ನಡೆದಿದ್ದು ಯಾವಾಗ?
ಸಿಂಬು ಕಾರು ಅಪಘಾತ ಒಂದು ವಾರದ ಹಿಂದನೇ ನಡೆದಿದೆ. ಮಾರ್ಚ್ 18ಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಘಟನೆ ನಡೆದು ಐದಾರು ದಿನಗಳಾದ ಬಳಿಕ ಬೆಳಕಿಗೆ ಬಂದಿದ್ದು ತಮಿಳುನಾಡಿನಲ್ಲಿ ಬಿಸಿಬಿಸಿ ಚರ್ಚೆಯಾಗಿದೆ. ಸ್ಟಾರ್‌ಗಳು ಬಳಸುವ ಕಾರು ಅಪಘಾತ ಆಗುತ್ತಲೇ ಇರುತ್ತೆ. ಕೆಲವು ಚಿಕ್ಕ ಪುಟ್ಟ ಹಾನಿಯಾಗುತ್ತೆ. ಮತ್ತೆ ಕೆಲವೊಮ್ಮೆ ಜನಸಾಮಾನ್ಯರ ಪ್ರಾಣವೇ ಹೋಗುತ್ತೆ. ಈ ಬಾರಿ ಕೂಡ 70 ವರ್ಷದ ವೃದ್ಧನ ಪ್ರಾಣ ಕಳೆದುಕೊಂಡಿದ್ದಾರೆ.
ನಟ
ಸಿಂಬು
ಹೊಸ
ಲವ್
ಸ್ಟೋರಿ
ರಿವೀಲ್:
ನವ
ನಟಿ
ಜೊತೆ
ಒಂದೇ
ಮನೆಯಲ್ಲಿ
ಸಂಸಾರ!

ಮೃತಪಟ್ಟ ಮುನುಸ್ವಾಮಿ ಯಾರು?
70
ವರ್ಷದ
ಮುನುಸ್ವಾಮಿ
ರಸ್ತೆ
ದಾಟುತ್ತಿದ್ದರು.
ಈ
ವೇಳೆ
ಸಿಂಬು
ಕಾರು
ಈತನ
ಮೇಲೆ
ಹರಿದಿದೆ.
ಸಿಂಬು
ಒಡೆತನದ
ಕಾರು
ಅಪಘಾತದಲ್ಲಿ
ಮೃತಪಟ್ಟ
ಮುನುಸ್ವಾಮಿ
ತಮಿಳುನಾಡಿನ
ತೇನಂಪೇಟ್
ಎಂಬಲ್ಲಿ
ಕೂಲಿ
ಕೆಲಸ
ಮಾಡಿಕೊಂಡಿದ್ದ.
ಒಂದು
ವಾರದ
ಹಿಂದೆ
ಕೊಳಚೆ
ಚರಂಡಿ
ದುರಸ್ಥಿ
ಕೆಲಸ
ಮಾಡುವಾಗ
ಕಾಲಿಗೆ
ಪೆಟ್ಟಾಗಿತ್ತು.
ಹೀಗಾಗಿ
ನಿಧಾನವಾಗಿ
ರಸ್ತೆ
ದಾಟುತ್ತಿದ್ದ.
ಈ
ವೇಳೆ
ಕಾರು
ಗುದ್ದಿದ್ದು,
ಪರಿಣಾಮ
ತೀವ್ರ
ಗಾಯಕೊಂಡ
ವ್ಯಕ್ತಿ
ಆಸ್ಪತ್ರೆಯಲ್ಲಿ
ಸಾವನ್ನಪ್ಪಿದ್ದಾನೆ.
Aishwarya
Rajinikanth:
ತನ್ನಿಬ್ಬರು
ಮಕ್ಕಳ
ಬಗ್ಗೆ
ಭಾವನಾತ್ಮಕ
ಪತ್ರ
ಬರೆದ
ಐಶ್ವರ್ಯ
ರಜಿನಿಕಾಂತ್!
|
ಕಾರಿನಲ್ಲಿ ಸಿಂಬು ಇದ್ರಾ?
ಸಿಂಬು ಹೆಸರಲ್ಲಿ ನೋಂದಣಿಯಾಗಿರುವ ಕಾರನ್ನು ಅವರ ತಂದೆ ಟಿ ರಾಜೇಂದ್ರ ಬಳಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಚಾಲಕ ಸೆಲ್ವಂ ಅನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಆದರೆ, ಪೊಲೀಸರು ವಿಚಾರಣೆ ವೇಳೆ ಏನೇನು ಮಾಹಿತಿ ಕಲೆ ಹಾಕಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಅಪಘಾತ ನಡೆದ ಸ್ಥಳದಲ್ಲಿ ಸಿಂಬು ಇದ್ದರಾ? ಆ ಕಾರಿನಲ್ಲಿ ಸಿಂಬು ಪ್ರಯಾಣ ಮಾಡುತ್ತಿದ್ದರಾ? ಇಲ್ವಾ? ಸಿಂಬು ತಂದೆ ಟಿ. ರಾಜೇಂದ್ರ ಪ್ರಯಾಣ ಮಾಡುತ್ತಿದ್ದರಾ? ಇವೆಲ್ಲವೂ ವಿಚಾರಣೆಯಲ್ಲಿ ಹೊರಬೀಳಬೇಕಿದೆ.

ಯಶಸ್ಸಿನ ಖುಷಿಯಲ್ಲಿದ್ದ ಸಿಂಬು
ಇತ್ತೀಚೆಗೆಷ್ಟೇ ಸಿಂಬು ಅಭಿನಯದ ಮನಾಡು ಸಿನಿಮಾ ಬಿಡುಗಡೆಯಾಗಿತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಸಿನಿಮಾ ಗೆದ್ದ ಖುಷಿಯಲ್ಲಿದ್ದ ಸಿಂಬುಗೆ ಈ ಕಾರು ಅಪಘಾತ ಹೊಸ ಸಂಕಷ್ಟಕ್ಕೆ ಸಿಲುಕಿಸಿದೆ. ತಮಿಳು ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಸಿಂಬು ಹೆಸರು ಮಾಡಿದ್ದಾರೆ. ಇದರ ಜೊತೆಗೆ ಒಂದಿಷ್ಟು ವಿವಾದಗಳೂ ಕೂಡ ಇವರನ್ನು ಸುತ್ತಿಕೊಂಡಿದೆ. ಸದ್ಯ ಸಿಂಬು ಕೈಯಲ್ಲಿ ಹಲವು ಆಫರ್‌ಗಳಿವೆ.