twitter
    For Quick Alerts
    ALLOW NOTIFICATIONS  
    For Daily Alerts

    ಜೈ ಭೀಮ್ ವಿವಾದ: 'ಸೂರ್ಯನಿಗೆ ಒದ್ದು ಬುದ್ದಿ ಕಲಿಸಿ' ಎಂದವನ ವಿರುದ್ಧ ಕೇಸ್

    |

    'ಜೈ ಭೀಮ್' ಬಿಡುಗಡೆಯಾದಲ್ಲಿಂದ ಮೆಚ್ಚುಗೆ ಮಾತುಗಳೇ ಕೇಳಿ ಬರುತ್ತಿತ್ತು. ಸಿನಿಮಾ ವಿಮರ್ಶಕರಂತೂ ಸೂರ್ಯ ನಟನೆಯ 'ಜೈ ಭೀಮ್' 2021ರಲ್ಲಿ ಬಿಡುಗಡೆಯಾದ ಭಾರತ ಅತ್ಯುತ್ತಮ ಸಿನಿಮಾ ಅಂತ ಹೇಳಿದ್ದಾರೆ. ದೇಶ ಮೂಲೆ ಮೂಲೆಯಲ್ಲೂ ಈ ತಮಿಳು ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ. ಈ ಮಧ್ಯೆ ಇದೇ ಸಿನಿಮಾ ವಿವಾದಕ್ಕೂ ಸಿಲುಕಿದೆ. ಸೂರ್ಯ ವಿರುದ್ಧ ಕೆಲ ರಾಜಕೀಯ ಮುಖಂಡರು ಕಿಡಿಕಾರುತ್ತಿದ್ದಾರೆ.

    'ಜೈ ಭೀಮ್' ಸಿನಿಮಾ ನವೆಂಬರ್ 2ರಂದು ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ನೋಡಿದವರೆಲ್ಲಾ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ವಿಚಾರವಂತರು ಈ ಸಿನಿಮಾ ನೋಡಿ ಮೆಚ್ಚಿದ್ದಾರೆ. ಕೆಲ ರಾಜಕೀಯ ಮುಖಂಡರು ಭೇಷ್ ಅಂದಿದ್ದಾರೆ. ಆದರೆ ತಮಿಳುನಾಡಿನ ಪಿಎಂಕೆ (ಪಟ್ಟಾಳಿ ಮಕ್ಕಳ್ ಕಟ್ಚಿ) ಪಕ್ಷದ ಮುಖಂಡ ಸೀತಾಮಲ್ಲಿ ಪಳನಿಸ್ವಾಮಿ ಮಾತ್ರ ತಿರುಗಿಬಿದ್ದರು. ಸೂರ್ಯನಿಗೆ ಯಾರಾದರೂ ಒದ್ದು ಬುದ್ದಿ ಕಲಿಸಿದರೆ, ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಆ ಮುಖಂಡನ ಮೇಲೆ ಈಗ ಕೇಸ್ ದಾಖಲಾಗಿದೆ.

    ಪಿಎಂಕೆ ಮುಖಂಡನ ವಿರುದ್ಧ ಕೇಸ್

    ಪಿಎಂಕೆ ಮುಖಂಡನ ವಿರುದ್ಧ ಕೇಸ್

    "ಸೂರ್ಯನಿಗೆ ಯಾರಾದರೂ ಒದ್ದು ಬುದ್ದಿ ಕಲಿಸಿದರೆ, ಅವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ." ಎಂದು ಘೋಷಿಸಿದ್ದ ಪಿಎಂಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿಗೆ ಬಂಧನದ ಭೀತಿ ಎದುರಾಗಿದೆ. ವಕೀಲರೊಬ್ಬರು ನೀಡಿದ ದೂರಿನಿಂದ ಇವರ ಮೇಲೆ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 153(ಎ), 188, 269, 505 ಹಾಗೂ 506 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಹೀಗಾಗಿ ಸೀತಾಮಲ್ಲಿ ಪಳಿಸ್ವಾಮಿಗೆ ಬಂಧನದ ಭೀತಿ ಎದುರಾಗಿದ್ದು, ಪೊಲೀಸರು ಯಾವಾಗ ಬೇಕಾದರೂ ಬಂಧಿಸುವ ಸಾಧ್ಯತೆಯಿದೆ.

    ಪಳನಿಸ್ವಾಮಿಗೆ ಸೂರ್ಯ ಮೇಲೆ ಕೋಪವೇಕೆ?

    ಪಳನಿಸ್ವಾಮಿಗೆ ಸೂರ್ಯ ಮೇಲೆ ಕೋಪವೇಕೆ?

    'ಜೈ ಭೀಮ್' ಸಿನಿಮಾದಲ್ಲಿ ತಮಿಳುನಾಡಿನ ವನ್ನಿಯಾರ್ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವಿಷಯವಾಗಿ ಪಿಎಂಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಸೀತಾಮಲ್ಲಿ ಪಳನಿಸ್ವಾಮಿ ಸಿಟ್ಟಿಗೆದ್ದಿದ್ದರು. ಕೋಪದಲ್ಲಿದ್ದ ಪಳನಿಸ್ವಾಮಿ, ಸೂರ್ಯ ಒದ್ದು ಬುದ್ದಿ ಕಲಿಸಿದರೆ, ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ವಕೀಲರು ದೂರು ದಾಖಲಿಸಿದ್ದು, ಬಂಧಿನ ಭೀತಿಯನ್ನು ಎದುರಿಸುತ್ತಿದ್ದಾರೆ.

    ಚಿತ್ರತಂಡಕ್ಕೆ 5 ಕೋಟಿ ರೂಪಾಯಿ ಬೇಡಿಕೆ

    ಚಿತ್ರತಂಡಕ್ಕೆ 5 ಕೋಟಿ ರೂಪಾಯಿ ಬೇಡಿಕೆ

    'ಜೈ ಭೀಮ್' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಚಿತ್ರತಂಡದ ವಿರುದ್ಧ ತಮಿಳುನಾಡಿನ ವನ್ನಿಯಾರ್ ಸಂಘ ಕೆಂಡಕಾರಿತ್ತು. ಸಿನಿಮಾ ತಮ್ಮ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ. ಹೀಗಾಗಿ ವನ್ನಿಯಾರ್ ಸಂಘಕ್ಕೆ 5 ಕೋಟಿ ರೂಪಾಯಿ ದಂಡ ಕಟ್ಟಬೇಕು. ಅಲ್ಲದೆ ಬಹಿರಂಗವಾಗಿ ಸೂರ್ಯ ಸೇರಿದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಬೇಕು ಎಂದು ಒತ್ತಡ ಹೇರಿತ್ತು. ಈ ಬೆನ್ನಲ್ಲೇ ಪಿಎಂಕೆ ಪಕ್ಷದ ಸೀತಾಮಲ್ಲಿ ಪಳನಿಸ್ವಾಮಿ ವಿವಾದಾತ್ಮಕ ಹೇಳಿಕೆ ಕೊಟ್ಟು ವಿವಾದವನ್ನು ಮೈ ಮೇಲೆ ಎಳೆದುಕೊಡಿದ್ದರು.

    ಸೂರ್ಯಗೆ ಜನರಿಂದ ಅಭಿನಂದನೆ

    ಸೂರ್ಯಗೆ ಜನರಿಂದ ಅಭಿನಂದನೆ

    'ಜೈ ಭೀಮ್' ವಿವಾದ ಸೃಷ್ಟಿಸಿದ್ದರೂ, ಸಿನಿಮಾ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೊಲೀಸರ ದೌರ್ಜನ್ಯ, ಸಾಮಾಜಿಕ ವ್ಯವಸ್ಥೆ, ನ್ಯಾಯಾಂಗ ಎಲ್ಲವನ್ನೂ ಕಟ್ಟಿಕೊಟ್ಟಿರುವ ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಲಾಯರ್ ಚಂದ್ರು ಪಾತ್ರದಲ್ಲಿ ಸೂರ್ಯ ನಟಿಸಿದ್ದು, ಪ್ರೇಕ್ಷಕರು ಭೇಷ್ ಅಂತಿದ್ದಾರೆ. ಸೂರ್ಯ ಪತ್ನಿ ಜ್ಯೋತಿಕಾ ಮಾಲೀಕತ್ವದ 2ಡಿ ಎಂಟರ್‌ಟೈನ್ಮೆಂಟ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

    English summary
    Surya acted tamil film 'Jai Bhim' unveiled the injustice faced by tribes, has been mired in controversy. Tamil nadu pmk leader Seethamalli Palaniswamy booked for threatening actor Surya.
    Friday, November 19, 2021, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X