For Quick Alerts
  ALLOW NOTIFICATIONS  
  For Daily Alerts

  ತಮಿಳಿನ ಟಾಪ್‌ ನಿರ್ದೇಶಕನಿಗೆ ಆರು ತಿಂಗಳು ಜೈಲು!

  |

  ಇತ್ತೀಚೆಗಷ್ಟೇ ಈ ತಮಿಳು ನಿರ್ದೇಶಕ ಟಾಲಿವುಡ್‌ನಲ್ಲೊಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅದುವೇ 'ದಿ ವಾರಿಯರ್'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟೇ ಸದ್ದು ಮಾಡಿದೆ ಹೋದರೂ, ಹೇಳಿಕೊಳ್ಳುವಂತಹ ನಷ್ಟ ಅಂತೂ ಆಗಲಿಲ್ಲ. ಆದ್ರೀಗ ಇದೇ ನಿರ್ದೇಶಕನಿಗೆ ಸಂಕಷ್ಟ ಎದುರಾಗಿದೆ.

  ಅಂದ್ಹಾಗೆ ಸಂಕಷ್ಟಕ್ಕೆ ಸಿಲುಕಿರೋ ಆ ತಮಿಳು ನಿರ್ದೇಶಕನೇ ಲಿಂಗುಸಾಮಿ. ತಮಿಳಿನಲ್ಲಿ ಹಲವು ಸೂಪರ್‌ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಪೈಯ್ಯಾ', 'ಸಂಡಕೋಳಿ', 'ವೇಟ್ಟೈ', 'ಭೀಮ', 'ಅಂಜಾನ್' ಹಾಗೂ ಇತ್ತೀಚೆಗೆ 'ದಿ ವಾರಿಯರ್' ಅನ್ನೋ ಸಿನಿಮಾವನ್ನು ನಿರ್ದೇಶಿಸಿದ್ದರು. ಅದೇ ನಿರ್ದೇಶಕನಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

  ಸೇನಾಪತಿ ಈಸ್ ಬ್ಯಾಕ್: ರಾತ್ರೋರಾತ್ರಿ ಮತ್ತೆ ಅಖಾಡಕ್ಕಿಳಿದ 'ಇಂಡಿಯನ್' ತಾತ!ಸೇನಾಪತಿ ಈಸ್ ಬ್ಯಾಕ್: ರಾತ್ರೋರಾತ್ರಿ ಮತ್ತೆ ಅಖಾಡಕ್ಕಿಳಿದ 'ಇಂಡಿಯನ್' ತಾತ!

  ತಮಿಳು ನಿರ್ದೇಶಕನಿಗೆ 6 ತಿಂಗಳು ಜೈಲು

  ಕಾಲಿವುಡ್‌ನ ಟಾಪ್ ನಿರ್ದೇಶಕ ಲಿಂಗುಸ್ವಾಮಿ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಳಾಗಿದೆ. ಹಾಗಂತ ಕೇವಲ ಲಿಂಗುಸಾಮಿ ಅಷ್ಟೇ ಅಲ್ಲ. ಅವರ ಸಹೋದರ ಖ್ಯಾತ ನಿರ್ಮಾಪಕ ಸುಭಾಷ್ ಚಂದ್ರ ಬೋಸ್‌ ವಿರುದ್ಧ ಇದೇ ಕೇಸ್ ದಾಖಲಾಗಿದ್ದು, ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

  'ಎನ್ನಿ ಏಳು ನಾಲ್' ಸಿನಿಮಾ ಮಾಡಲು ನಿರ್ದೇಶಕ ಲಿಂಗುಸಾಮಿ ಹಾಗೂ ಅವರ ಸಹೋದರ ಸುಭಾಷ್ ಚಂದ್ರ ಬೋಸ್ ಸಾಲ ಪಡೆದಿದ್ದರು. ಆ ಸಾಲವನ್ನು ಇಂದಿಗೂ ತೀರಿಸಲಿಲ್ಲ. ಅಲ್ಲದೆ ಕೊಟ್ಟ ಚೆಕ್ ಬೇರೆ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿ ದೂರು ನೀಡಿತ್ತು.

  ಅಷ್ಟಕ್ಕೂ ಆಗಿದ್ದೇನು?

  ಪಿವಿಪಿ ಕ್ಯಾಪಿಟಲ್ ಎಂಬ ಕಂಪೆನಿಯಿಂದ ಸಿನಿಮಾ ಮಾಡುವ ಸಲುವಾಗಿ ಲಿಂಗುಸಾಮಿ ಮತ್ತು ಅವರ ಸಹೋದರ 1.03 ಕೋಟಿ ರೂ. ಸಾಲ ಪಡೆದಿದ್ದರು. ಆ ಸಾಲವನ್ನು ತೀರಿಸಲು 35 ಲಕ್ಷ ರೂಪಾಯಿಯ ಚೆಕ್ ಅನ್ನು ನೀಡಿದ್ದರು. ಆದರೆ, ಆ ಚೆಕ್ ಬೌನ್ಸ್ ಆಗಿತ್ತು. ಈ ಕಾರಣಕ್ಕೆ ಲಿಂಗುಸಾಮಿ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಾಗಿತ್ತು.

  ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಲಿಂಗುಸಾಮಿ ಹಾಗೂ ಸಹೋದರ ಸುಭಾಷ್ ಚಂದ್ರ ಬೋಸ್ ಇಬ್ಬರೂ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಜೈಲು ಶಿಕ್ಷೆಯ ಜೊತೆಗೆ 10 ಸಾವಿರ ದಂಡವನ್ನು ಕಟ್ಟಿದ್ದಾರೆ.

  Tamil Movie Director Linguswamy Sentenced To Six Months Jail By Court

  ಲಿಂಗುಸಾಮಿ ಇದೂವರೆಗೂ ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಾಲಿವುಡ್‌ನಲ್ಲಿ ಲಿಂಗುಸಾಮಿ ಸಿನಿಮಾಗಳಿಗೆ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ಸೂರ್ಯ, ವಿಶಾಲ್, ಅಜಿತ್, ವಿಕ್ರಂ, ಆರ್ಯರಂತಹ ಸ್ಟಾರ್ ಹೀರೊಗಳಿಗೆ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

  ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿರುವ ಲಿಂಗುಸಾಮಿಗೆ 'ದಿ ವಾರಿಯರ್' ಸಿನಿಮಾ ಕೈ ಹಿಡಿಯಲಿಲ್ಲ. ಇದೇ ವೇಳೆ ಕೋರ್ಟ್ ಚೆಕ್ ಬೌನ್ಸ್ ಕೇಸ್ ಅಡಿಯಲ್ಲಿ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿದೆ. ಸದ್ಯ ಲಿಂಗುಸಾಮಿ ಸಂಕಷ್ಟದಲ್ಲಿರೋದಂತೂ ನಿಜ.

  English summary
  Tamil Movie Director Linguswamy Sentenced To Six Months Jail By Court, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X