For Quick Alerts
  ALLOW NOTIFICATIONS  
  For Daily Alerts

  ಮತ್ತೆ ಜತೆಯಾದ ರಗಡ್ ಜೋಡಿ: ವಿಜಯ್-ಮುರುಗದಾಸ್ ಹೊಸ ಸಿನಿಮಾ

  |

  ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ತಮಿಳಿನ ಇಳಯದಳಪತಿ ವಿಜಯ್ ಮತ್ತು ನಿರ್ದೇಶಕ ಎ.ಆರ್ ಮುರುಗದಾಸ್ ಜೋಡಿ ಮತ್ತೆ ಒಂದಾಗುತ್ತಿದೆ. 'ತುಪಾಕಿ', 'ಕತ್ತಿ' ಮತ್ತು 'ಸರ್ಕಾರ್'ದಂತಹ ಸಾಮಾಜಿಕ-ರಾಜಕೀಯ ಸಂಗತಿಗಳನ್ನು ಬೆರೆತ ಆಕ್ಷನ್ ಸಿನಿಮಾಗಳನ್ನು ನೀಡಿದ್ದ ಈ ಜೋಡಿ, ನಾಲ್ಕನೆಯ ಸಿನಿಮಾಕ್ಕೆ ಅಣಿಯಾಗುತ್ತಿದೆ ಎನ್ನಲಾಗಿದೆ. ಹಾಗೆಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಜೋರಾಗಿ ಹರಿದಾಡುತ್ತಿದೆ.

  ದರ್ಶನ್ ಹಾಗು ವಿಜಯ್ ಆಗ್ತಾರೆ ಮುಖಾಮುಖಿ

  ವಿಜಯ್ ಅವರ ಮುಂದಿನ ಸಿನಿಮಾ 'ದಳಪತಿ 65' ಎಂಬ ಶೀರ್ಷಿಕೆಯ ಬಗ್ಗೆ ಹಲವು ತಿಂಗಳಿಂದ ಚರ್ಚೆ ನಡೆಯುತ್ತಿದೆ. ಅನೇಕ ನಿರ್ದೇಶಕರ ಹೆಸರು ಈ ಶೀರ್ಷಿಕೆಯ ಸಿನಿಮಾದಲ್ಲಿ ಕೇಳಿಬಂದಿದೆ. ಸುಧಾ ಕೊಂಗರ, ಮಾಗಿಳ್ ತಿರುಮೆನಿ, ಅಜಯ್ ಜ್ಞಾನಮುತ್ತು ಸೇರಿದಂತೆ ಹಲವರ ಹೆಸರು ಚಾಲ್ತಿಯಲ್ಲಿದೆ.

  ನಾಲ್ಕನೆಯ ಸಿನಿಮಾ

  ನಾಲ್ಕನೆಯ ಸಿನಿಮಾ

  ಆದರೆ ಇತ್ತೀಚಿನ ವರದಿಗಳ ಪ್ರಕಾರ ವಿಜಯ್ ಅವರ ಮುಂದಿನ ಸಿನಿಮಾವನ್ನು ಎಆರ್ ಮುರುಗದಾಸ್ ಅವರು ನಿರ್ದೇಶನ ಮಾಡಲಿದ್ದಾರೆ. ನಿರ್ದೇಶಕ ಮುರುಗದಾಸ್ ಅವರ ಆಪ್ತರಾಗಿರುವ ಕೆಲವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಇದರಿಂದ ಈ ಜೋಡಿ ನಾಲ್ಕನೆಯ ಬಾರಿ ಸೇರುವುದು ಖಾತರಿಯಾಗಿದೆ.

  ವಿಜಯ್ ಗೆ ಇಲ್ಲ ಕೊರೊನಾ ಭಯ: 'ರಾಬರ್ಟ್' ರಿಲೀಸ್ ದಿನವೇ 'ಮಾಸ್ಟರ್' ಎಂಟ್ರಿ?ವಿಜಯ್ ಗೆ ಇಲ್ಲ ಕೊರೊನಾ ಭಯ: 'ರಾಬರ್ಟ್' ರಿಲೀಸ್ ದಿನವೇ 'ಮಾಸ್ಟರ್' ಎಂಟ್ರಿ?

  ದರ್ಬಾರ್ ಚಿತ್ರದ ಸೋಲು

  ದರ್ಬಾರ್ ಚಿತ್ರದ ಸೋಲು

  ಮುರುಗದಾಸ್ ಅವರ ಕೊನೆಯ ಸಿನಿಮಾ ರಜನಿಕಾಂತ್ ನಟನೆಯ 'ದರ್ಬಾರ್'. ಭಾರಿ ಕುತೂಹಲ ಮೂಡಿಸಿದ್ದ ಈ ಚಿತ್ರ, ಬಾಕ್ಸಾಫೀಸ್‌ನಲ್ಲಿ ನೆಲಕಚ್ಚಿತ್ತು. ಮಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಕೋಪಿಷ್ಠ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದರು.

  ಮಾಸ್ಟರ್ ಬಿಡುಗಡೆಗೆ ಸಿದ್ಧ

  ಮಾಸ್ಟರ್ ಬಿಡುಗಡೆಗೆ ಸಿದ್ಧ

  ಇತ್ತ ಇಳಯದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ, ಲೋಕೇಶ್ ಕನಗರಾಜ್ ನಿರ್ದೇಶನದ 'ಮಾಸ್ಟರ್' ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲ ನಿಗದಿಯಾದಂತೆ ನಡೆದರೆ ಆ ಸಿನಿಮಾ ಏಪ್ರಿಲ್ 9ರಂದು ಬಿಡುಗಡೆಯಾಗಬೇಕಿದೆ.

  ವಿಜಯ್ ಸೇತುಪತಿ 'ಮಾಸ್ಟರ್' ಸಿನಿಮಾ ಒಪ್ಪಿಕೊಂಡ ಕಾರಣ ಬಹಿರಂಗ ಪಡಿಸಿದ ದಳಪತಿವಿಜಯ್ ಸೇತುಪತಿ 'ಮಾಸ್ಟರ್' ಸಿನಿಮಾ ಒಪ್ಪಿಕೊಂಡ ಕಾರಣ ಬಹಿರಂಗ ಪಡಿಸಿದ ದಳಪತಿ

  ಕಾಲೇಜು ಪ್ರೊಫಸೆರ್

  ಕಾಲೇಜು ಪ್ರೊಫಸೆರ್

  ವಿಜಯ್ ಈ ಚಿತ್ರದಲ್ಲಿ ಕಾಲೇಜ್ ಪ್ರೊಫೆಸರ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಹೆಚ್ಚಿನ ಭಾಗ ಕಾಲೇಜಿನ ಹಿನ್ನೆಲೆಯಲ್ಲಿಯೇ ಇರಲಿದೆಯಂತೆ. ಇದೇ ಮೊದಲ ಬಾರಿಗೆ ವಿಜಯ್ ಸೇತುಪತಿ ಜತೆಗೆ ಅವರು ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ.

  English summary
  Actor Vijay and director AR Murugadoss are likely to reunite for the fourth time for Thalapathy 65 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X