Don't Miss!
- Sports
ನಮ್ಮೂರ ಪ್ರತಿಭೆ: 18 ಚಿನ್ನದ ಪದಕಗಳ ಸರದಾರ ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜ್
- Lifestyle
ಈ 16 ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿಸಬಹುದು: ಸದ್ಯದಲ್ಲಿಯೇ ಬರಲಿದೆ ಈ ನಿಯಮ
- Finance
ಮೇ 27ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ
- News
ಕಲಬುರ್ಗಿ ಯುವಕನ ಹತ್ಯೆ ಪ್ರಕರಣ: ಇಬ್ಬರ ಬಂಧನ
- Automobiles
ಹೊಸ ಟ್ರಯಂಫ್ ಟೈಗರ್ 1200 ಅಡ್ವೆಂಚರ್ ಬೈಕ್ ವಿಶೇಷತೆಗಳು
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Technology
ಸ್ಯಾಮ್ಸಂಗ್ನಿಂದ ಮತ್ತೆ ನೂತನ ಸ್ಮಾರ್ಟ್ಫೋನ್ ಅನಾವರಣ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕೆಜಿಎಫ್ 2' ನೋಡಿ ಲೋಪದೋಷಗಳಿವೆ ಎಂದ ದಳಪತಿ ವಿಜಯ್ ತಂದೆ: ನೆಟ್ಟಿಗರಿಂದ ತರಾಟೆ
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಹವಾ ಹೇಗಿದೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಾವಿರ ಕೋಟಿ ಲೂಟಿ ಮಾಡಿದ ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲೂ ಇನ್ನೂ ತನ್ನ ಆರ್ಭಟವನ್ನು ನಿಲ್ಲಿಸಿಲ್ಲ. ವರ್ಲ್ಡ್ ವೈಡ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಕೋಟಿ ಕೋಟಿ ಲೂಟಿ ಮಾಡುತ್ತಲೇ ಇದೆ.
ಈಗಾಗಲೇ 'ಕೆಜಿಎಫ್ 2' ಸಿನಿಮಾ ನೋಡಿ ಸಾಕಷ್ಟು ಮಂದಿ ಸ್ಟಾರ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಓಟದ ಬಗ್ಗೆ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದರು. ಈ ಮಧ್ಯೆ ದಳಪತಿ ವಿಜಯ್ ತಂದೆ ಚಂದ್ರಶೇಖರ್ ಕೂಡ ಸಿನಿಮಾ ವೀಕ್ಷಿಸಿ, ಮೆಚ್ಚಿಕೊಂಡಿದ್ದರೂ, ಲೋಷದೋಷಗಳಿವೆ ಎಂದು ಕಮೆಂಟ್ ಮಾಡಿದ್ದರು. ಆ ಕಮೆಂಟ್ ನೋಡಿದ ಬಳಿಕ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮಿಳಿನಲ್ಲೂ
ಸೆಂಚೂರಿ
ಬಾರಿಸಿದ
'KGF
2':
ತಮಿಳುನಾಡಿನಲ್ಲಿ
ಕನ್ನಡ
ಕಹಳೆ
|
'ಕೆಜಿಎಫ್ 2' ವೀಕ್ಷಿಸಿದ ವಿಜಯ್ ತಂದೆ
ದಳಪತಿ ವಿಜಯ್ ತಂದೆ ಚಂದ್ರಶೇಖರ್ ಯಶ್ ಸಿನಿಮಾ 'ಕೆಜಿಎಫ್ 2' ವೀಕ್ಷಿಸಿದ್ದರು. ಸಿನಿಮಾ ನೋಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದರು. "ಸಿನಿಮಾದಲ್ಲಿ ಅನೇಕ ಲೋಷದೋಷಗಳಿವೆ. ಆದರೂ ಪ್ರೇಕ್ಷಕರು ಅದೆಲ್ಲವನ್ನೂ ನಿರ್ಲಕ್ಷ ಮಾಡಿ, ಸಿನಿಮಾವನ್ನು ಗೆಲ್ಲಿಸಿದ್ದಾರೆ" ಎಂದಿದ್ದರು. ಈ ವಿಷಯವನ್ನು ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಟ್ವೀಟ್ ಮಾಡಿ ಬಹಿರಂಗ ಪಡಿಸಿದ್ದರು. ಇದೇ ಹೇಳಿಕೆ ಈಗ ನೆಟ್ಟಿಗರ ನಿದ್ದೆ ಕೆಡಿಸಿದೆ.
ತಮಿಳು-ತೆಲುಗು
ಚಿತ್ರರಂಗದ
ಮಧ್ಯೆ
ಕಿರಿಕ್:
ಬೆಂಕಿ
ಹಚ್ಚಿದ್ದು
ನಟಿ
ರೋಜಾ
ಪತಿ

ವಿಜಯ್ ತಂದೆ ಮಾತಿಗೆ ನೆಟ್ಟಿಗರ ಟಾಂಗ್
ದಳಪತಿ ವಿಜಯ್ ತಂದೆ ನೀಡಿದ ಹೇಳಿಕೆಗೆ ನೆಟ್ಟಿಗರು ತಿರುಗೇಟು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡುತ್ತಿದ್ದು, ವಿಜಯ್ ತಂದೆ ಚಂದ್ರಶೇಖರ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. " ಮೊದಲು ನಿಮ್ಮ ಮಗನ ಸಿನಿಮಾದ ಲೋಪದೋಷಗಳನ್ನು ನೋಡಿಕೊಳ್ಳಲಿ ." ಎಂದು ಒಬ್ಬರು, "ಯಾವುದೂ ಮುಖ್ಯವಲ್ಲ. ಹಿಟ್ ಅಂದ್ರೆ ಹಿಟ್. ಫ್ಲಾಪ್ ಅಂದ್ರೆ ಫ್ಲಾಪ್" ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. " ನನಗೆ ಲೂಪ್‌ಹೋಲ್ಸ್ ಇದೆ ಅಂತ ಅನಿಸುತ್ತಿಲ್ಲ. ಪ್ರತಿಯೊಂದಕ್ಕೂ ಪ್ರಶಾಂತ್ ನೀಲ್ ತಾರ್ಕಿಕ್ ಕಾರಣ ನೀಡಿದ್ದಾರೆ." ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.

ನಿರ್ದೇಶಕನ ವಿರುದ್ಧ ಕಿಡಿಕಾರಿದ್ದ ವಿಜಯ್ ತಂದೆ
ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ಮಖಾಡೆ ಮಲಗುತ್ತಿದ್ದಂತೆ ವಿಜಯ್ ತಂದೆ ಚಂದ್ರಶೇಖರ್ ಅಖಾಡಕ್ಕಿಳಿದಿದ್ದರು. 'ಬೀಸ್ಟ್' ಸಿನಿಮಾ ಸೋಲಿಗೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕಾರಣವೆಂದು ಆರೋಪಿಸಿದ್ದರು. ವಿಜಯ್ ನಟನೆ ಮತ್ತು ಆಕ್ಟಿಂಗ್ ಚೆನ್ನಾಗಿದೆ. ಆದರೆ, ಸಿನಿಮಾದ ಸ್ಕ್ರೀನ್ ಪ್ಲೇ ಹಾಗೂ ಪ್ರಸೆಂಟೇಷನ್ ಚೆನ್ನಾಗಿರಲಿಲ್ಲವೆಂದು ಹೇಳಿದ್ದರು. ಈ ಹೇಳಿಕೆ ಬಗ್ಗೆನ್ನೂ ನೆಟ್ಟಿಗರು ಕಮೆಂಟ್ ಮಾಡಿದ್ದರು.
ಎ.ಆರ್
ರೆಹಮಾನ್
ಪುತ್ರಿ
ವಿವಾಹ
ಸಂಭ್ರಮ,
ಅಭಿಮಾನಿಗಳಿಂದ
ಶುಭ
ಹಾರೈಕೆ

'ಕೆಜಿಎಫ್ 2' ಅಬ್ಬರ ನಿಂತಿಲ್ಲ
'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಿ ನಾಲ್ಕು ವಾರಗಳಾಗಿವೆ. ಆದರೂ, ಇನ್ನೂ ಸಿನಿಮಾ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. 'ಬೀಸ್ಟ್'ಗೆ ಹೋಲಿಸಿದೆ 'ಕೆಜಿಎಫ್ 2' ಕಲೆಕ್ಷನ್ ಚೆನ್ನಾಗಿದೆ. ಮೇ 6 ಕಲೆಕ್ಷನ್ 'ಕೆಜಿಎಫ್ 2' ಕಲೆಕ್ಷನ್ 96 ಲಕ್ಷ ಇದ್ದರೆ, 'ಬೀಸ್ಟ್' ಕಲೆಕ್ಷನ್ 2.5 ಲಕ್ಷವಿತ್ತು. ಹೀಗಾಗಿ 'ಕೆಜಿಎಫ್ 2' ರಿಲೀಸ್ ಕಡೆಗಳಲ್ಲೆಲ್ಲಾ ಮಸ್ತ್ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗಿದೆ.