For Quick Alerts
  ALLOW NOTIFICATIONS  
  For Daily Alerts

  ವಿಜಯ್ ದಳಪತಿಗೆ ವಿಜಯ್ ಸೇತುಪತಿ ಕಿಸ್: ವೈರಲ್ ಆಯ್ತು ಫೋಟೊ

  |

  ಕಾಲಿವುಡ್‌ನಲ್ಲಿ ಈಗ ವಿಜಯ್ ದಳಪತಿ ಮತ್ತು ವಿಜಯ್ ಸೇತುಪತಿ ನಟನೆಯ 'ಮಾಸ್ಟರ್' ಚಿತ್ರದ್ದೇ ಮಾತು. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ತಮಿಳಿನ ತಾರಾನಟರಾದ 'ವಿಜಯದ್ವಯ'ರು ಒಟ್ಟಿಗೆ ನಟಿಸಿರುವುದು ವಿಶೇಷ.

  ಈ ನಟ ಈ ತರ ಕಿಸ್ ಮಾಡೋದು ಯಾಕೆ ಗೊತ್ತಾ..? | Vijay Sethupathy | Vijay Filmibeat Kannada

  'ಮಾಸ್ಟರ್' ಚಿತ್ರದ ಚಿತ್ರೀಕರಣ ಫೆ. 29ರಂದು ಮುಕ್ತಾಯವಾಗಿದೆ. ಈ ಚಿತ್ರೀಕರಣದ ಕೊನೆಯ ಕ್ಷಣದ ಅಪರೂಪದ ಚಿತ್ರವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದು ಸಾಕಷ್ಟು ವೈರಲ್ ಆಗಿದೆ.

  ತಮಿಳಿನ ರ್ಯಾಪ್ ಸಾಂಗ್ ನಲ್ಲಿ ಯಶ್ 'ಕೆಜಿಎಫ್' ಅಬ್ಬರತಮಿಳಿನ ರ್ಯಾಪ್ ಸಾಂಗ್ ನಲ್ಲಿ ಯಶ್ 'ಕೆಜಿಎಫ್' ಅಬ್ಬರ

  ಚಿತ್ರೀಕರಣ ಮುಕ್ತಾಯವಾದ ಬಳಿಕ ವಿಜಯ್ ಸೇತುಪತಿ, ವಿಜಯ್ ದಳಪತಿ ಅವರ ಕೆನ್ನೆಗೆ ಮುತ್ತು ನೀಡುವ ಚಿತ್ರ ವೈರಲ್ ಆಗಿದೆ. ಈ ಚಿತ್ರ ಕಂಡು ಪುಳಕಗೊಂಡಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರೂ 'ವಿಜಯ್‌'ಗಳು ತಮ್ಮದೇ ಬೃಹತ್ ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ 'ಮಾಸ್ಟರ್' ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ.

  ವಿಜಯ್ ಸೇತುಪತಿಯ ಟ್ರೇಟ್ ಮಾರ್ಕ್

  ವಿಜಯ್ ಸೇತುಪತಿಯ ಟ್ರೇಟ್ ಮಾರ್ಕ್

  ವಿಜಯ್ ಸೇತುಪತಿ ತಮ್ಮ ಅಭಿಮಾನಿಗಳು ಹಾಗೂ ಸ್ನೇಹಿತರ ಮೇಲಿನ ಪ್ರೀತಿಯನ್ನು ಮುಕ್ತವಾಗಿ ಪ್ರದರ್ಶಿಸುವುದರಲ್ಲಿ ಹೆಸರುವಾಸಿ. ಸ್ನೇಹಿತರೇ ಇರಲಿ, ಅಭಿಮಾನಿಗಳೇ ಇರಲಿ, ಅವರ ಕೆನ್ನೆಗೆ ಮುತ್ತುಕೊಟ್ಟು ಅವರಿಗೆ ಖುಷಿಪಡಿಸುತ್ತಾರೆ. ಈಗ ವಿಜಯ್ ದಳಪತಿ ಕೆನ್ನೆಗೂ ಮುತ್ತು ನೀಡಿ ಸುದ್ದಿಯಾಗಿದ್ದಾರೆ.

  ಸ್ವತಃ ವಿಜಯ್ ಕೇಳಿದ್ದರು

  ಕೆಲವು ವಾರಗಳ ಹಿಂದೆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ವಿಜಯ್ ದಳಪತಿ, ನನ್ನೊಂದಿಗೆ ನಿಮ್ಮ 'ಟ್ರೇಡ್‌ಮಾರ್ಕ್' ಪೋಸ್ ನೀಡುತ್ತೀರಾ ಎಂದು ಕೇಳಿದ್ದರಂತೆ. ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ 'ಮಾಸ್ಟರ್' ಚಿತ್ರತಂಡ ಈ ವಿಶಿಷ್ಟ ಫೋಟೊವನ್ನು ಬಿಡುಗಡೆ ಮಾಡಿದೆ.

  ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

  ಖುಷಿ ಹಂಚಿಕೊಂಡ ಜಗದೀಶ್

  ಈ ಇಬ್ಬರು ತಾರೆಯರ ಸ್ಮರಣೀಯ ಚಿತ್ರವನ್ನು 'ಮಾಸ್ಟರ್' ಸಿನಿಮಾದ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಜಗದೀಶ್, ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಕೆಲವು ಅದ್ಭುತ ವಾರಗಳ ಬಳಿಕ ಅಂತ್ಯಗೊಳ್ಳುವ ಸಮಯ ಬಂದಿದೆ. ಮಾಸ್ಟರ್ ಶೂಟಿಂಗ್ ಮುಕ್ತಾಯಗೊಂಡಿದೆ. ದಳಪತಿ ವಿಜಯ್, ವಿಜಯ್ ಸೇತುಪತಿ ಹಾಗೂ ನಿರ್ದೇಶಕ ಲೋಕೇಶ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಮಾಸ್ಟರ್ ಸಂಭ್ರಮಾಚರಣೆಗೆ ಕಾಯುತ್ತಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

  ಅಭಿಮಾನಿಗಳಲ್ಲಿ ರೋಮಾಂಚನ

  ಅಭಿಮಾನಿಗಳಲ್ಲಿ ರೋಮಾಂಚನ

  ಮಾಸ್ಟರ್ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಕೊನೆಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಚುರುಕುಗೊಂಡಿದೆ. 'ಮಾಸ್ಟರ್' ಚಿತ್ರವು ತನ್ನ ಅಪರೂಪದ ಚಿತ್ರತಂಡದ ಕಾರಣದಿಂದಲೇ ಗಮನ ಸೆಳೆದಿದೆ. ವಿಜಯ್ ಸೇತುಪತಿ ಮತ್ತು ವಿಜಯ್ ದಳಪತಿ ಒಂದೇ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

  'ತಲೈವಿ' ಸಿನಿಮಾದಿಂದ ಪ್ರಿಯಾಮಣಿ ಔಟ್: ಶಶಿಕಲಾ ಪಾತ್ರಕ್ಕೆ ಬಂದ್ರು 'ಜೋಶ್' ನಟಿ'ತಲೈವಿ' ಸಿನಿಮಾದಿಂದ ಪ್ರಿಯಾಮಣಿ ಔಟ್: ಶಶಿಕಲಾ ಪಾತ್ರಕ್ಕೆ ಬಂದ್ರು 'ಜೋಶ್' ನಟಿ

  ಏಪ್ರಿಲ್ 9ರಂದು ಬಿಡುಗಡೆ

  ಏಪ್ರಿಲ್ 9ರಂದು ಬಿಡುಗಡೆ

  ಮಾಳವಿಕಾ ಮೋಹನನ್, ವಿಜಯ್ ಜತೆ ರೊಮ್ಯಾನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಶಂತನು ಭಾಗ್ಯರಾಜ್, ಅರ್ಜುನ್ ದಾಸ್ ಮತ್ತು ಆಂಡ್ರಿಯಾ ಜೆರೆಮಯ್ಯ, ಗೌರಿ ಕಿಶನ್, ಇತರೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಈ ಬಹು ನಿರೀಕ್ಷೆಯ ಸಿನಿಮಾ ಏಪ್ರಿಲ್ 9ರಂದು ತೆರೆಕಾಣಲಿದೆ.

  English summary
  Master movie team shared a picture of Tamil star Vijay Sethupathi trademark kiss to Thalapathy Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X