For Quick Alerts
  ALLOW NOTIFICATIONS  
  For Daily Alerts

  The Artist 2023 Calendars : 2023ರ 'ದಿ ಆರ್ಟಿಸ್ಟ್' ಕ್ಯಾಲೆಂಡರ್‌ ರಿಲೀಸ್ ಮಾಡಿದ ವಿಜಯ್ ಸೇತುಪತಿ!

  |

  ಅಂತರಾಷ್ಟ್ರೀಯ ಮಟ್ಟದ ಕ್ಯಾಮರಾಮ್ಯಾನ್ ಎಲ್. ರಾಮಚಂದ್ರನ್ 'ದಿ ಆರ್ಟಿಸ್ಟ್' ಅನ್ನೋ ವಿಶಿಷ್ಟ ಕ್ಯಾಲೆಂಡರ್ ಅನ್ನು ಹೊರತಂದಿದ್ದಾರೆ. ಇವರು ಪ್ರತಿವರ್ಷ ವಿಭಿನ್ನ ಪರಿಕಲ್ಪನೆಯ ಕ್ಯಾಲೆಂಡರ್ ಮೂಲಕ ಇವರು ಗಮನ ಸೆಳೆಯುತ್ತಾರೆ.

  ತಮ್ಮದೇ ವಿಶಿಷ್ಠ ಪರಿಕಲ್ಪನೆಯಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿ ಬೆರಗುಗೊಳಿಸಿದ್ದಾರೆ. ಆ ಫೋಟೊಗಳಿಗೆ ಕ್ಯಾಲೆಂಡರ್ ರೂಪ ನೀಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಕ್ಯಾಮರಾಮ್ಯಾನ್ ಎಲ್. ರಾಮಚಂದ್ರನ್ ಅವರ 'ದಿ ಆರ್ಟಿಸ್ಟ್' ಕ್ಯಾಲೆಂಡರ್ ಅನ್ನು ನಟ ವಿಜಯ್ ಸೇತುಪತಿ ಹೊರತಂದಿದ್ದಾರೆ.


  ಕಳೆದ ಎರಡು ವರ್ಷಗಳಿಂದ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಹಾಗೂ ಎಲ್. ರಾಮಚಂದ್ರನ್ ಇಬ್ಬರೂ ಹೊಸ ಪರಿಕಲ್ಪನೆಯಡಿ ಕ್ಯಾಲೆಂಡರ್ ರೆಡಿ ಮಾಡಿ ರಿಲೀಸ್ ಮಾಡುತ್ತಿದ್ದಾರೆ. ಈ ಹಿಂದೆ 'ಹ್ಯೂಮನ್' ಮತ್ತು 'ಕಲೈಜ್ಞಾನ್' ಎಂಬ ಟೈಟಲ್‌ ಅನ್ನು ಎರಡು ಕ್ಯಾಲೆಂಡರ್‌ಗಳನ್ನು ರಿಲೀಸ್ ಮಾಡಿದ್ದಾರೆ. ಇದೀಗ ಸತತ ಮೂರನೇ ಬಾರಿ ಈ ಜೋಡಿ 2023ಕ್ಕೆ ಹೊಸ ಥೀಮ್‌ನಲ್ಲಿ ಕ್ಯಾಲೆಂಡರ್ ರಿಲೀಸ್ ಮಾಡುತ್ತಿದ್ದಾರೆ.

  ಚಿತ್ರಕಲೆ ಕಲಾವಿದ, ಶಿಲ್ಪಿ, ಗ್ರಾಫಿಟಿ ಕಲಾವಿದ ಹೀಗೆ ಹಲವು ಆಯಾಮದಲ್ಲಿ ವಿಜಯ್ ಸೇತುಪತಿ ಫೋಟೊಗಳನ್ನು ಸೆರೆಹಿಡಿಯಲಾಗಿದೆ. ಈ ಎಲ್ಲಾ ಫೋಟೊಗಳೂ 2023ಕ್ಕೆ ಕಲರ್ ಫುಲ್ ಕ್ಯಾಲೆಂಡರ್‌ನಲ್ಲಿ ಸುಂದರ ರೂಪ ಪಡೆದುಕೊಂಡಿದೆ. ಈ ಫೋಟೊಗಳಿಗಾಗಿ 12 ವಿಭಿನ್ನ ಸೆಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ನೂರಕ್ಕೂ ಹೆಚ್ಚು ಜನರು ಈ ಹತ್ತು ದಿನಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ.

  ಅಂತರಾಷ್ಟ್ರೀಯ ಖ್ಯಾತಿಯ ಎಲ್. ರಾಮಚಂದ್ರನ್ "ಈ ಕ್ಯಾಲೆಂಡರ್ ಒಂದೊಳ್ಳೆ ಕಾರ್ಯಕ್ಕೆ ಅಡಿಪಾಯ. ಹಲವು ಜನರ ಸಂತೋಷಕ್ಕೂ ಇದು ಕಾರಣವಾಗಿದೆ. 'ದಿ ಆರ್ಟಿಸ್ಟ್' ಕ್ಯಾಲೆಂಡರ್ ಪ್ರತಿಯೊಬ್ಬ ಕಲಾವಿದನಿಗೂ ಅರ್ಪಣೆ" ಎಂದಿದ್ದಾರೆ.

  Vijay Sethupathi Released The Artisit 2023 Calender

  2021ರ ಲಾಕ್ ಡೌನ್ ವೇಳೆ 'ಹ್ಯೂಮನ್', 2022ರಲ್ಲಿ 'ಕಲೈಜ್ಞಾನ್' ಟೈಟಲ್ ಕ್ಯಾಲೆಂಡರ್ ರಿಲೀಸ್ ಆಗಿತ್ತು. ಇವೆರಡಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. 2023ರ 'ದಿ ಆರ್ಟಿಸ್ಟ್' ಟೈಟಲ್ ಹೊಸ ಕ್ಯಾಲೆಂಡರ್ ಮಾರ್ಕೆಟ್‌ನಲ್ಲಿ ಲಭ್ಯವಿದೆ. ಈ ಕ್ಯಾಲೆಂಡರ್‌ನಿಂದ ಮಾರಾಟವಾದ ಸಂಗ್ರಹವಾದ ಹಣದಿಂದ ವಿಜಯ್ ಸೇತುಪತಿ ಚಾರಿಟೇಬಲ್ ಟ್ರಸ್ಟ್‌ಗೆ ಸೇರಲಿದೆ. ಇದನ್ನು ಸಾಮಾಜಿಕ ಕಲ್ಯಾಣಕ್ಕಾಗಿ ಈ ಆದಾಯವನ್ನು ಬಳಕೆಯಾಗಲಿದೆ. 'ದಿ ಆರ್ಟಿಸ್ಟ್' ಕ್ಯಾಲೆಂಡರ್ ಬಹಳ ವಿಭಿನ್ನವಾಗಿ ಮೂಡಿ ಬಂದಿದೆ. ತಿಂಗಳಿಗೆ ಎರಡು ಫೋಟೊ ಒಳಗೊಂಡಂತೆ ಒಟ್ಟು 24 ಫೋಟೊಗಳಿವೆ.

  English summary
  Vijay Sethupathi Released The Artist 2023 Calendar, Know More.
  Thursday, December 22, 2022, 23:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X