For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿ, ವೆಟ್ರಿಮಾರನ್ ಕಾಂಬಿನೇಷನ್ ಸಿನಿಮಾ 'ವಿಡುದಲೈ' ಒಂದಲ್ಲ ಎರಡು!

  |

  ತಮಿಳು ಚಿತ್ರರಂಗದಲ್ಲಿ ವೆಟ್ರಿಮಾರನ್ ತನ್ನದೇ ಆದ ಡಿಮ್ಯಾಂಡ್ ಇದೆ. ವೆಟ್ರಿಮಾರನ್ ನಿರ್ದೇಶಿಸಿದ ಸಿನಿಮಾಗಳು ದೇಶಾದ್ಯಂತ ಸದ್ದು ಮಾಡುತ್ತವೆ. ಈ ಹಿಂದಿನ ಸಿನಿಮಾಗಳು ಕೂಡ ಹಾಗೇ ಸದ್ದು ಮಾಡಿದ್ದವು. ಕೆಲವು ದಿನಗಳ ಹಿಂದಷ್ಟೇ 'ವಿಡುದಲೈ' ಎಂಬ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಇಲ್ಲಿಂದ ಪ್ರೇಕ್ಷಕರನ್ನು 'ವಿಡುದಲೈ' ಸಿನಿಮಾ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ.

  ಇನ್ನು ವೆಟ್ರಿಮಾರನ್ ಸಿನಿಮಾದಲ್ಲಿ ತಮಿಳಿನ ದಿಗ್ಗಜರು ಹಾಗೂ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಅಂತ ಗೊತ್ತಾದ ಮೇಲಂತೂ ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. ರಿಯಲಿಸ್ಟಿಂಗ್ ಸಿನಿಮಾಗಳನ್ನು, ಸಮಸ್ಯೆಗಳನ್ನು ತೆರೆಮೇಲೆ ತರೋ ವೆಟ್ರಿಮಾರ್ ಮುಂದಾಗಿದ್ದಾರೆ.

  ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸಲು ಭಾರಿ ಸಂಭಾವನೆ ಪಡೆದ ವಿಜಯ್ ಸೇತುಪತಿಶಾರುಖ್ ಖಾನ್ ಸಿನಿಮಾದಲ್ಲಿ ನಟಿಸಲು ಭಾರಿ ಸಂಭಾವನೆ ಪಡೆದ ವಿಜಯ್ ಸೇತುಪತಿ

  'ವಿಡುದಲೈ' ಸಿನಿಮಾದಲ್ಲಿ ವಿಜಯ್​ ಸೇತುಪತಿ ಮತ್ತು ಸೂರಿ ನಟಿಸುತ್ತಿರೋದು ಗೊತ್ತೇ ಇದೆ. ಆದರೆ, ಈ ಸಿನಿಮಾ ಬಗ್ಗೆ ಹೊಸದೊಂದು ಸುದ್ದಿಯಿದೆ. 'ವಿಡುದಲೈ' ಸಿನಿಮಾ ಇದೀಗ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವನ್ನು ಉದಯ ನಿಧಿ ಸ್ಟಾಲಿನ್​ ಅರ್ಪಿಸುತ್ತಿದ್ದರೆ. ಅತ್ತ ಆರ್​.ಎಸ್​. ಇನ್ಫೋಟೈನ್​ಮೆಂಟ್​ನ ಎಲ್ರೆಡ್​ ಕುಮಾರ್​ ನಿರ್ಮಾಣ ಮಾಡುತ್ತಿದ್ದಾರೆ.

  ವೆಟ್ರಿಮಾರನ್ ಈಗಾಗಲೇ 'ವಿಡುದಲೈ' ಸಿನಿಮಾದ ಮೊದಲ ಭಾಗದ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟ್ ​ಪ್ರೊಡಕ್ಷನ್​ ಕೆಲಸಗಳು ಪ್ರಗತಿಯಲ್ಲಿವೆ. ಇನ್ನು ಎರಡನೆಯ ಭಾಗದ ಚಿತ್ರೀಕರಣ ಅತೀ ಶೀಘ್ರದಲ್ಲಿ ಆರಂಭ ಆಗಲಿದೆ. ಸಿರುಮಲೈ, ಕೊಡೈಕೆನಾಲ್​ ಸೇರಿದಂತೆ ತಮಿಳುನಾಡಿನ ಹಲವು ಪ್ರಮುಖ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲು ವೆಟ್ರಿಮಾರನ್ ಸ್ಕೆಚ್ ಹಾಕಿದ್ದಾರೆ.

  ತೆಲುಗು ಸಿನಿಮಾದಲ್ಲಿ ಸುದೀಪ್: ವಿಜಯ್ ಸೇತುಪತಿ ಜೊತೆ ಜುಗಲ್‌ಬಂಧಿತೆಲುಗು ಸಿನಿಮಾದಲ್ಲಿ ಸುದೀಪ್: ವಿಜಯ್ ಸೇತುಪತಿ ಜೊತೆ ಜುಗಲ್‌ಬಂಧಿ

  ವೆಟ್ರಿಮಾರನ್ 'ವಿಡುದಲೈ' ಸಿನಿಮಾ ದುಬಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದ ಎರಡೂ ಚಾಪ್ಟರ್‌ಗಳೂ ದೊಡ್ಡ ಬಜೆಟ್​ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ತಮಿಳು ಚಿತ್ರರಂಗದಲ್ಲಿ ನಿರ್ಮಾಣಗೊಂಡ ಪೈಕಿ ದುಬಾರಿ ಸಿನಿಮಾಗಳ ಪೈಕಿ ಒಂದು ಎನ್ನಲಾಗಿದೆ.

  ಕೋಟಿಯಷ್ಟು ಹಣ ಸುರಿದು ಅದ್ಧೂರಿಯಾಗಿ ನಿರ್ಮಿಸಲಾಗುತ್ತಿರುವ ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ವಿಶೇಷವಾಗಿ 10 ಕೋಟಿ ರೂ. ವೆಚ್ಚದಲ್ಲಿ ರೈಲು ಮತ್ತು ರೈಲ್ವೆ ಬ್ರಿಡ್ಜ್ ಸೆಟ್​ ಹಾಕಲಾಗುತ್ತಿದೆ. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ಹೇಗೆ ನಿರ್ಮಿಸಲಾಗುತ್ತೋ ಹಾಗೇ ಈ ಸಿನಿಮಾದಲ್ಲೂ ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ, ಸಿರುಮಲೈ ಬಳಿ ಜಾಕಿ ಆರ್ಟ್ ಡೈರೆಕ್ಷನ್‌ನಲ್ಲಿ ಒಂದು ಹಳ್ಳಿಯನ್ನು ನಿರ್ಮಿಸಲಾಗಿದೆ.

  Vijay Sethupathi Starrer Viduthalai Will Be Releasing In Two Parts

  ಪೀಟರ್ ಹೇನ್ಸ್ ಆಕ್ಷನ್ ಡೈರೆಕ್ಷನ್ ಮಾಡುತ್ತಿದ್ದಾರೆ ಅಂದ್ರೆ, ಆ ಸಿನಿಮಾ ಆಕ್ಷನ್ ಬಗ್ಗೆ ಎಲ್ಲರೂ ಒಂದು ಕಣ್ಣೀಟ್ಟಿರುತ್ತಾರೆ. ಸದ್ಯ ಈ ಸಿನಿಮಾಗೆ ಕೊಡೈಕೆನಾಲ್ ಸಮೀಪ ಸಾಹಸ ದೃಶ್ಯಗಳನ್ನು ಶೂಟಿಂಗ್ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ದುಬಾರಿ ಆಕ್ಷನ್ ದೃಶ್ಯಗಳಲ್ಲಿ ನಟಿಸಲು ಬಲ್ಗೇರಿಯಾದಿಂದ ಕಲಾವಿದರನ್ನು ಕರೆತರಲಾಗಿದೆ.

  'ವಿಡುದಲೈ' ಚಿತ್ರದಲ್ಲಿ ವಿಜಯ್​ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್​ ರಾಜ್​, ಗೌತಮ್​ ವಾಸುದೇವ ಮೆನನ್, ರಾಜೀವ್​ ಮೆನನ್​ ಮುಂತಾದವರು ನಟಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ ಸಂಗೀತ ನೀಡುತ್ತಿದ್ದಾರೆ. ಸದ್ಯದಲ್ಲೇ 'ವಿಡುದಲೈ' ಮೊದಲ ಭಾಗದ ಬಿಡುಗಡೆ ಸಜ್ಜಾಗಿದ್ದು, ಶೀಘ್ರದಲ್ಲಿಯೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.

  English summary
  Vijay Sethupathi Starrer Viduthalai Will Be Releasing In Two Parts, Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X