Don't Miss!
- News
ಕಡಿಮೆ ಬಡ್ಡಿದರದಲ್ಲಿ ರೈತರಿಗೆ 20 ಲಕ್ಷ ಸಾಲ ಘೋಷಿಸಿದ ಸಿದ್ದರಾಮಯ್ಯ
- Automobiles
ಮಂಗಳೂರಿನಲ್ಲಿ ಐಕಾನಿಕ್ ವಿಲ್ಲೀಸ್ ಜೀಪ್ನಂತೆ ಮಾಡಿಫೈಗೊಂಡ ಮಹೀಂದ್ರಾ ಥಾರ್
- Finance
ಬಜೆಟ್ 2023: ಗಣರಾಜ್ಯೋತ್ಸವ ದಿನದಂದೇ ಬಜೆಟ್ ಹಲ್ವಾ ಸಮಾರಂಭ
- Sports
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Vijay Vs Ajith:'ವಾರಿಸು','ಥುನಿವು' ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಏನಿದೆ ಲೆಕ್ಕಾಚಾರ?
2023ರ ಅತೀ ದೊಡ್ಡ ಬಾಕ್ಸಾಫೀಸ್ ಯುದ್ಧ ಇದೇ ಇರುಬಹುದೇನೋ. ಅದರೆ, ಈ ವರ್ಷದ ಮೊದಲ ದೊಡ್ಡ ಪೈಪೋಟಿ ಅನ್ನೋದನ್ನಂತೂ ಹೇಳಬಹುದು. ಇಂದು (ಜನವರಿ 11) ತಮಿಳು ಇಬ್ಬರು ಸೂಪರ್‌ಸ್ಟಾರ್‌ಗಳ ಸಿನಿಮಾ ರಿಲೀಸ್ ಆಗಿದೆ. ದಳಪತಿ ವಿಜಯ್ ಅಭಿನಯದ 'ವಾರಿಸು' ಇನ್ನೊಂದು ಅಜಿತ್ ಅಭಿನಯದ 'ಥುನಿವು'.
ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗ್ರ್ಯಾಂಡ್ ಆಗಿಯೇ ರಿಲೀಸ್ ಆಗಿದೆ. ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿವೆ. ಇನ್ನು ವಿಜಯ್ ಹಾಗೂ ಅಜಿತ್ ಸಿನಿಮಾ ಒಟ್ಟಿಗೆ ರಿಲೀಸ್ ಆಗಿದ್ದರಿಂದ ಈಗಾಗಲೇ ಮೊದಲ ದಿನ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಅನ್ನೋದ ಲೆಕ್ಕಾಚಾರ ಶುರುವಾಗಿದೆ.
ವಿಜಯ್
ಬಹುನಿರೀಕ್ಷಿತ
ಚಿತ್ರ
'ವಾರಸುಡು'
ಬಿಡುಗಡೆ
ಮುಂದೂಡಿಕೆ;
ಚಿರು,
ಬಾಲಯ್ಯ
ಕಾರಣ
ಎಂದ
ನಿರ್ಮಾಪಕ!
ಪೊಂಗಲ್ ವೇಳೆ ತಮಿಳು ಸಿನಿಮಾಗಳು ಬಿಡುಗಡೆಯಾದರೆ, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತವೆ. ಅದಕ್ಕೆ ದಿಗ್ಗಜರ ಸಿನಿಮಾ ಇದೇ ದಿನಕ್ಕಾಗಿ ಕಾದು ಕೂತಿರುತ್ತವೆ. ಹೀಗಾಗಿ 'ವಾರಿಸು' ಹಾಗೂ 'ಥುನಿವು' ಎರಡೂ ಸಿನಿಮಾ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಅನ್ನೋ ಲೆಕ್ಕಾಚಾರ ಹಾಕುತ್ತಿದ್ದಾರೆ. ಹಾಗಿದ್ರೆ, ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಈ ಎರಡೂ ಸಿನಿಮಾಗಳ ಗಳಿಕೆಯ ರಿಪೋರ್ಟ್ ಹೀಗಿದೆ.

'ವಾರಿಸು' Vs'ಥುನಿವು' ಅಡ್ವಾನ್ಸ್ ಬುಕಿಂಗ್(Worldwide)
ಬಾಕ್ಸಾಫೀಸ್‌ನಲ್ಲಿ ವಿಜಯ್ Vs ಅಜಿತ್ ಹೇಗೋ, ಹಾಗೇ ನಿರ್ದೇಶಕ ವಂಶಿ Vs ಹೆಚ್ ವಿನೋದ್ ಕೂಡ ಹೌದು. ವಂಶಿ ನಿರ್ದೇಶನದ 'ವಾರಿಸು' ಸಿನಿಮಾದ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ವಿಶ್ವದಾದ್ಯಂತ ಮೊದಲ ದಿನ ಸುಮಾರು 17.25 ಕೋಟಿ ರೂ. ಬ್ಯುಸಿನೆಸ್ ಆಗಿತ್ತು. ಅದೇ ವಿನೋದ್ ನಿರ್ದೇಶನದ 'ಥುನಿವು' ಸಿನಿಮಾದ ಅಡ್ವಾನ್ಸ್ ಬುಕಿಂಗ್ 16.25 ಕೋಟಿ ರೂ. ಅಡ್ವಾನ್ಸ್ ಬುಕಿಂಗ್‌ನಿಂದಲೇ ಕಲೆಕ್ಷನ್ ಮಾಡಿದೆ. ಎರಡೂ ಸಿನಿಮಾಗಳ ನಡುವೆ ಚಿಕ್ಕ ವ್ಯತ್ಯಾಸ ಅಷ್ಟೇ ಇದೆ.

ತಮಿಳುನಾಡಿನಲ್ಲಿ ಅಡ್ವಾನ್ಸ್ ಬುಕಿಂಗ್ ಹೇಗಿದೆ?
ತಮಿಳುನಾಡಿನಲ್ಲೂ ಈ ಎರಡೂ ಸಿನಿಮಾಗಳಿಗೆ ಅಡ್ವಾನ್ಸ್ ಬುಕಿಂಗ್ ಜೋರಾಗಿಯೇ ಇದೆ. ತಮಿಳುನಾಡಿನಲ್ಲಿ 'ವಾರಿಸು'ಗಿಂತ 'ಥುನಿವು' ಅಡ್ವಾನ್ಸ್ ಬುಕಿಂಗ್‌ನಲ್ಲಿ ಮೇಲುಗೈ ಸಾಧಿಸಿತ್ತು. ತಮಿಳುನಾಡಿನಾದ್ಯಂತ 'ಥುನಿವು' ಸಿನಿಮಾದ ಮೊದಲ ದಿನದ ಕಲೆಕ್ಷನ್ 8.75 ಕೋಟಿ ರೂ. ಎಂದು ವರದಿಯಾಗಿದೆ. ಸುಮಾರು 4.50 ಲಕ್ಷ ಟಿಕೆಟ್ ಸೇಲ್ ಆಗಿತ್ತು. ಹಾಗೇ 'ವಾರಿಸು' 8.45 ಕೋಟಿ ರೂ.ನಷ್ಟು ಅಡ್ವಾನ್ಸ್ ಬುಕಿಂಗ್‌ನಿಂದ ಬಂದಿದೆ ಎಂದು ವರದಿಯಾಗಿದೆ.

ಮೊದಲ ದಿನದ ಅಂದಾಜು ಕಲೆಕ್ಷನ್ ಎಷ್ಟು?
ದಳಪತಿ ವಿಜಯ್ ಸಿನಿಮಾ 'ವಾರಿಸು' ಮಾಸ್ ಜೊತೆ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಇತ್ತ ಅಜಿತ್ ಸಿನಿಮಾ ಪಕ್ಕಾ ಆಕ್ಷನ್, ಥ್ರಿಲ್ಲರ್ ಸಿನಿಮಾ. ಹೀಗಾಗಿ ಎರಡೂ ಬೇರೆ ಬೇರೆ ಪ್ರಕಾರದ ಸಿನಿಮಾಗಳಲ್ಲಿ ಪ್ರೇಕ್ಷಕರ ಒಲವು ಯಾರ ಕಡೆಗೆ ಅನ್ನೋದು ಕುತೂಹಲವಂತೂ ಇದ್ದೇ ಇದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ವಾರಿಸು' ವಿಶ್ವದಾದ್ಯಂತ ಸುಮಾರು 30 ರಿಂದ 35 ಕೋಟಿ ರೂ. ಕಲೆಕ್ಷನ್ ಮಾಡಬಹುದು. ಹಾಗೇ ಅಜಿತ್ 'ಥುನಿವು' 25 ರಿಂದ 30 ಕೋಟಿ ರೂ. ಒಳಗೆ ಗಳಿಸಬಹುದು ಎಂದು ಅಂದಾಜಿಸಲಾಗಿದೆ.

ವಿಜಯ್ Vs ಅಜಿತ್ ವಾರ್
1996ರಿಂದ ವಿಜಯ್ ಹಾಗೂ ಅಜಿತ್ ಇಬ್ಬರೂ ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ಸುಮಾರು 7 ಬಾರಿ ಬಾಕ್ಸಾಫೀಸ್‌ನಲ್ಲಿ ಯುದ್ಧಕ್ಕೆ ಇಳಿದಂತಾಗಿದೆ. ಒಮ್ಮೆ ಒಬ್ಬರು ಗೆದ್ದರೆ, ಮತ್ತೊಮ್ಮೆ ಇನ್ನೊಬ್ಬರಿಗೆ ಗೆಲುವು ಸಿಗುತ್ತಿತ್ತು. ಈ ಬಾರಿ ಯಾರು ಗೆಲ್ಲುತ್ತಾರೆ? ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ನಾಳೆ (ಜನವರಿ 12) ಮೊದಲ ದಿನದ ಅಧಿಕೃತ ಕಲೆಕ್ಷನ್ ಹೊರಬೀಳಲಿದೆ.