For Quick Alerts
ALLOW NOTIFICATIONS  
For Daily Alerts

ಸೂಪರ್ ಸ್ಟಾರ್ ರಜನೀಕಾಂತ್ 'ಕಾಲ್ ಶೀಟ್' ನೀಡುತ್ತಿರುವ ಹಿಂದಿನ ರಹಸ್ಯ ಬಯಲು?

|

ತಮಿಳು ಚಿತ್ರರಸಿಕರಲ್ಲಿ ಎಂಜಿಆರ್, ಶಿವಾಜಿ ಗಣೇಶನ್ ಮೂಡಿಸಿದ್ದ ಛಾಪನ್ನು ಮುಂದುವರಿಸಿಕೊಂಡು ಹೋದವರು ರಜನೀಕಾಂತ್. ವಿಶ್ವಾದ್ಯಂತ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಅಭಿಮಾನಿಗಳನ್ನು ಹೊಂದಿರುವವರು ತಲೈವಾ. ಅವರ ಸಿನಿಮಾ ಬಿಡುಗಡೆಯಾದರೆ ಅಭಿಮಾನಿಗಳಿಗಂತೂ ಹಬ್ಬ.

ಈ ಪೀಠಿಕೆ ಏನಕ್ಕಂದರೆ, ರಜನೀಕಾಂತ್ ಸಿನಿಮಾದ ಜೊತೆಜೊತೆಗೆ ರಾಜಕೀಯದಲ್ಲೂ ಆಸಕ್ತಿಯನ್ನು ತೋರಿಸಿದರು. ಸಕ್ರಿಯ ರಾಜಕಾರಣಕ್ಕೆ ಇಳಿಯುವ ಬಗ್ಗೆ ಅಭಿಮಾನಿಗಳ ಸಭೆ ಕರೆದರು. 2021ರಲ್ಲಿನ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದುರು. ಇದು, ಒಂದು ಕಡೆ.

ಕನ್ನಡ ಚಿತ್ರ ನಿರ್ದೇಶಿಸಲು ಪಿ.ವಾಸು 15ವರ್ಷ ಗ್ಯಾಪ್ ತೆಗೆದುಕೊಂಡಿದ್ದೇಕೆ?

ತಮಿಳುನಾಡು ರಾಜಕಾರಣದ ಹಿನ್ನೆಲೆ ಗಮನಿಸಿದರೆ ಸಿನೆಮಾ ನಟರು ರಾಜಕೀಯ ಅಧಿಕಾರಕ್ಕೇರುವುದು ಅಸಹಜವೇನಲ್ಲ. ಇಲ್ಲಿನ ಮೇರು ರಾಜಕಾರಣಿಗಳು ಒಂದು ಕಾಲದಲ್ಲಿ ಬೆಳ್ಳಿ ತೆರೆಯನ್ನು ಆಳಿದವರೇ ಆಗಿದ್ದರು. ಹೀಗಾಗಿ ರಜನಿಕಾಂತ್ ರಾಜಕೀಯ ಪ್ರವೇಶ ಸುಲಭ ಎಂದು ಮೇಲ್ನೋಟಕ್ಕೇ ಕಾಣಿಸುತ್ತಿದೆ.

ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವಿವಾದದ ಸರಮಾಲೆಗೆ ಮತ್ತೊಂದು ಸೇರ್ಪಡೆ

ಯಾವಾಗ, ರಜನೀಕಾಂತ್ ಬಹಿರಂಗವಾಗಿಯೇ ಪ್ರಧಾನಿ ಮೋದಿಯನ್ನು ಹೊಗಳಿದರೋ, ಅಮಿತ್ ಶಾಗೆ ಮರುಭೂಮಿಯಲ್ಲಿ ನೀರು ಸಿಕ್ಕಂತಾಯಿತು. ಕಮಲವನ್ನು ದ್ರಾವಿಡ ನಾಡಿನಲ್ಲಿ ಅರಳಿಸಲು ರಜನಿ ಗೇಟ್‌ವೇ ತರಹ ಕಂಡಿದ್ದರೆ ಅದರಲ್ಲಿ ಅಚ್ಚರಿ ಏನಿಲ್ಲ.

 ಮೋದಿ ಕೃಪಾಕಟಾಕ್ಷದಿಂದಲೇ ಅಲ್ಲಿ ಎಐಎಡಿಎಂಕೆ ಸರಕಾರ ಅಧಿಕಾರದಲ್ಲಿರುವುದು

ಮೋದಿ ಕೃಪಾಕಟಾಕ್ಷದಿಂದಲೇ ಅಲ್ಲಿ ಎಐಎಡಿಎಂಕೆ ಸರಕಾರ ಅಧಿಕಾರದಲ್ಲಿರುವುದು

ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕೃಪಾಕಟಾಕ್ಷದಿಂದಲೇ ಇವತ್ತು ತಮಿಳುನಾಡಿನಲ್ಲಿ ಎಐಎಡಿಎಂಕೆ ಸರಕಾರ ಅಧಿಕಾರ ನಡೆಸುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ. ಇಲ್ಲದಿದ್ದರೆ, ಜಯಲಲಿತಾ ನಿಧನದ ನಂತರ ಅಲ್ಲಿ ನಡೆದ ಹೇಸಿಗೆ ರಾಜಕಾರಣದ ಪರಿಣಾಮ ಇಷ್ಟೊತ್ತಿಗೆ ಸರಕಾರ ಪತನಗೊಳ್ಳುತ್ತಿತ್ತು.

 ಮೋದಿ ಕೂಡಾ ವರ್ಚಸ್ವೀ ನಾಯಕ

ಮೋದಿ ಕೂಡಾ ವರ್ಚಸ್ವೀ ನಾಯಕ

"ನೆಹರೂ, ಇಂದಿರಾ, ರಾಜೀವ್ ಗಾಂಧಿ, ವಾಜಪೇಯಿಯಂತೆ, ಮೋದಿ ಕೂಡಾ ವರ್ಚಸ್ವೀ ನಾಯಕ. ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ನಾನು ಹೋಗುತ್ತೇನೆ. ದೇಶದೆಲ್ಲಡೆ ಮೋದಿ ಪರ ಅಲೆಯಿದ್ದರೆ, ತಮಿಳುನಾಡಿನಲ್ಲಿ ಮೋದಿ ವಿರುದ್ದ ಅಲೆಯಿದೆ. ಆದರೂ, ಬಿಜೆಪಿ ಗೆದ್ದಿದೆ ಅಂದರೆ, ಅದು ಮೋದಿಯ ವರ್ಚಸ್ಸಿನಿಂದ" ಎಂದು ರಜನೀಕಾಂತ್ ಹೇಳಿದ್ದರು. ಹೀಗೆ ಹೇಳುವ ಮೂಲಕ ತಮಿಳುನಾಡಿನಲ್ಲಿ ರಜನಿ ಬಿಜೆಪಿ ಸೇರಿ ಕಟ್ಟಿ ಬೆಳೆಸುತ್ತಾರೆ ಎಂಬ ಊಹಾಪೋಹಗಳಿಗೆ ಆಹಾರವಾಗಿದ್ದರು.

 ಹಲವು ಕಾರ್ಯಕ್ರಮಗಳಲ್ಲಿ ರಜನೀಕಾಂತ್, ಮೋದಿಯನ್ನು ಹೊಗಳಿದ್ದರು

ಹಲವು ಕಾರ್ಯಕ್ರಮಗಳಲ್ಲಿ ರಜನೀಕಾಂತ್, ಮೋದಿಯನ್ನು ಹೊಗಳಿದ್ದರು

ಇದಾದ ನಂತರ, ಹಲವು ಕಾರ್ಯಕ್ರಮಗಳಲ್ಲಿ ರಜನೀಕಾಂತ್, ಮೋದಿಯನ್ನು ಜೊತೆಗೆ ಅಮಿತ್ ಶಾ ಅವರನ್ನೂ ಹೊಗಳಿದ್ದರು. ಇವರಿಬ್ಬರನ್ನು 'ಕೃಷ್ಣಾರ್ಜುನರಿಗೆ' ರಜನಿ ಹೋಲಿಸಿದ್ದರು. ರಜನೀಕಾಂತ್, ಬಿಜೆಪಿ ಪರ ಒಲವು ತೋರುತ್ತಿರುವುದನ್ನೇ, ಅಸ್ತ್ರಮಾಡಿಕೊಂಡ ಅಮಿತ್ ಶಾ, ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನವನ್ನು ಮಾಡಲಾರಂಭಿಸಿದರು.

 ರಜನೀಕಾಂತ್ ಸ್ಪಷ್ಟನೆ

ರಜನೀಕಾಂತ್ ಸ್ಪಷ್ಟನೆ

ಆದರೆ, ಈಗಾಗಲೇ ಹೇಳಿದಂತೆ ತಮಿಳುನಾಡು ರಾಜಕೀಯವೇ ಬೇರೆ. ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿಗೆ ಹಲವು ಬಾರಿ ರಜನೀಕಾಂತ್ ಸ್ಪಷ್ಟನೆಯನ್ನು ನೀಡಿದ್ದಾಗಿತ್ತು. ಬಿಜೆಪಿ ಸೇರುವುದಿಲ್ಲ, ಮುಂಬರುವ ಚುನಾವಣೆಗೆ ಸಜ್ಜಾಗಲು, ಏಪ್ರಿಲ್ 2020ರೊಳಗೆ ಹೊಸ ಪಾರ್ಟಿ ಕಟ್ಟುವುದಾಗಿ ರಜನೀಕಾಂತ್ ಘೋಷಿಸಿದರು. ಆದರೂ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಿಜೆಪಿ ಮುಖಂಡರು, ಅವರ ಹಿಂದೆ ದಂಬಾಲು ಬೀಳುತ್ತಲೇ ಇದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ರಜನೀಕಾಂತ್ ಕಂಡುಕೊಂಡ ಪರಿಹಾರ, ನಟನೆ.

 ರಜನೀಕಾಂತ್ ಗೆ ಈಗ 69 ವರ್ಷ

ರಜನೀಕಾಂತ್ ಗೆ ಈಗ 69 ವರ್ಷ

ರಜನೀಕಾಂತ್ ಗೆ ಈಗ 69 ವರ್ಷ. ಜೊತೆಗೆ, ಕೆಲವು ವರ್ಷಗಳ ಹಿಂದೆ, ಸಿಂಗಾಪುರ್ ನಲ್ಲಿ ಚಿಕಿತ್ಸೆ ಬೇರೆ ಪಡೆದು ಬಂದಿದ್ದರು. ಈ ಎಲ್ಲಾ ಕಾರಣಕ್ಕಾಗಿ, ಸಿನಿಮಾ ಕಾಲ್ಶೀಟ್ ನೀಡಲು ತುಂಬಾ ಚ್ಯೂಸಿಯಾಗಿದ್ದರು. ಕಳೆದ ಒಂದೆರಡು ವರ್ಷಗಳಲ್ಲಿ ಹೆಚ್ಚೆಚ್ಚು ಸಿನಿಮಾ ಮಾಡುತ್ತಿದ್ದಾರೆ. ಎಲ್ಲದಕ್ಕೂ ಡ್ಯೂಪ್ ತೆಗೆದುಕೊಳ್ಳುವ ಅವರಲ್ಲಿ ಹಿಂದಿನ ಲವಲವಿಕೆಯಿಲ್ಲ. ಅದು ಮುಖದಲ್ಲೇ ಕಾಣುತ್ತೆ, ನಟನೆಯಲ್ಲೂ ಎದ್ದು ತೋರುತ್ತದೆ. ಆದರೂ ಅವರೀಗ ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಿದ್ದಾರೆ.

 ಬಿಜೆಪಿಯ ಒತ್ತಡ ಜಾಸ್ತಿ

ಬಿಜೆಪಿಯ ಒತ್ತಡ ಜಾಸ್ತಿ

2010-2017ರ ಅವಧಿಯಲ್ಲಿ ಅವರು ನಟಿಸಿದ ಸಿನಿಮಾ ಬರೀ ಏಳು. ಆದರೆ, ಕಳೆದೆರಡು ವರ್ಷಗಳಲ್ಲಿ ಅವರ ಮೂರು ಸಿನಿಮಾಗಳು ಬಂದು ಹೋಗಿವೆ. ಇನ್ನೊಂದು ಹೊಸ ಚಿತ್ರ ಸೆಟ್ಟೇರಿದೆ. ಸಿನಿಮಾ ಜಗತ್ತಿನಿಂದ ದೂರವಿದ್ದರೆ, ರಾಜಕೀಯ ಒತ್ತಡ ಜಾಸ್ತಿಯಾಗಬಹುದು ಎನ್ನುವುದಕ್ಕಾಗಿ, ರಜನೀಕಾಂತ್ ಹೆಚ್ಚು ಸಿನಿಮಾಗಳಲ್ಲಿ ನಟಿಸಲಾರಂಭಿಸಿದ್ದಾರೆ ಎನ್ನುವ ಮಾತು ಕಾಲಿವುಡ್ ವಲಯದಲ್ಲಿ ಕೇಳಿಬರುತ್ತಿದೆ. ಅದೆಷ್ಟು ನಿಜವೋ ಅಥವಾ ಚಿತ್ರೋದ್ಯಮದ ಉಸಿರಂತಿರುವ ಗಾಳಿಸುದ್ದಿಯೋ?

English summary
Why Superstar Rajinikanth Busy In Shooting In Recent Days, Is It To Avoid BJP?

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more