For Quick Alerts
  ALLOW NOTIFICATIONS  
  For Daily Alerts

  ನಟಿ ಯಶಿಕಾ ಕಾರು ಅಪಘಾತ: ಸ್ನೇಹಿತೆ ಸಾವು, ನಟಿಗೆ ಗಂಭೀರ ಗಾಯ

  |

  ಬಿಗ್ ಬಾಸ್ ಮಾಜಿ ಸ್ಪರ್ಧಿ, ತಮಿಳು ನಟಿ ಯಶಿಕಾ ಆನಂದ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ನಟಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

  ಚೆನ್ನೈನ ಮಹಾಬಲಿಪುರಂ ಬಳಿಯ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಶನಿವಾರ (ಜುಲೈ 24, 2021) ರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಯಶಿಕಾ ಆನಂದ್ ಅವರನ್ನು ಪ್ರಸ್ತುತ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಜಗ್ಗೇಶ್ ಪುತ್ರನ ಕಾರು ಅಪಘಾತ: ವೈರಲ್ ಆಗುತ್ತಿದೆ ವಿಡಿಯೋಜಗ್ಗೇಶ್ ಪುತ್ರನ ಕಾರು ಅಪಘಾತ: ವೈರಲ್ ಆಗುತ್ತಿದೆ ವಿಡಿಯೋ

  ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಯಶಿಕಾ ಮತ್ತು ಅವರ ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ದುರದೃಷ್ಟವಶಾತ್, ನಟಿಯ ಸ್ನೇಹಿತೆ ವಲ್ಲಿ ಚೆಟ್ಟಿ ಭವಾನಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕಾರಿನಲ್ಲಿದ್ದ ಯಶಿಕಾ ಆನಂದ್ ಮತ್ತು ಇತರೆ ಸ್ನೇಹಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಮಹಾಬಲಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಸ್ತುತ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  ದೆಹಲಿಯಲ್ಲಿದ್ದ ಯಶಿಕಾ ಆನಂದ್ ಅವರ ತಂದೆ ಅಪಘಾತದ ಬಗ್ಗೆ ತಿಳಿದ ನಂತರ ಚೆನ್ನೈಗೆ ಆಗಮಿಸಿದ್ದಾರೆ. ನಟಿಯ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಸಿಗಬೇಕಿದೆ.

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ

  2016 ರಲ್ಲಿ ಬಿಡುಗಡೆಯಾದ 'ಕವಲೈ ವೆಂಡಮ್' ಚಿತ್ರದ ಮೂಲಕ ಯಶಿಕಾ ಆನಂದ್ ನಟನೆ ಆರಂಭಿಸಿದರು. ಕಾರ್ತಿಕ್ ನರೇನ್ ನಿರ್ದೇಶನದಲ್ಲಿ ಬಂದ 'ಧುರುವಾಂಗಳ್ ಪಾಥಿನಾರ್' ಚಿತ್ರ ಯಶಿಕಾ ಅವರಿಗೆ ಬ್ರೇಕ್ ಕೊಟ್ಟಿತ್ತು. ಈ ನಡುವೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.

  English summary
  Actress Yashika Anand has reportedly met with a car accident on Saturday night on ECR near Mahabalipuram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X