For Quick Alerts
  ALLOW NOTIFICATIONS  
  For Daily Alerts

  ಗ್ಯಾಪ್ ಕೊಟ್ಟು ನಟನೆಗೆ ಮರಳಿದ 'ಬೊಮ್ಮರಿಲ್ಲು' ಸಿದ್ಧಾರ್ಥ್!

  |

  'ಬೊಮ್ಮರಿಲ್ಲು' ದಕ್ಷಿಣ ಭಾರತದ ಸಿನಿಪ್ರಿಯರಿಗೆ ಈ ಸಿನಿಮಾ ಇಂದಿಗೂ ಅಚ್ಚು ಮೆಚ್ಚು. ಅದರಲ್ಲೂ ಸಿದ್ಧಾರ್ಥ್ ಹಾಗೂ ಜೆನಿಲಿಯಾ ಜೋಡಿಯನ್ನು ಮರೆಯುವುದು ಉಂಟೇ? ಆದರೆ, ಮತ್ತೆ ಇಂತಹದ್ದೊಂದು ಸಿನಿಮಾವನ್ನು ಸಿದ್ಧಾರ್ಥ್ ನೀಡಲೇ ಇಲ್ಲ. ಇತ್ತೀಚೆಗೆ ಹೆಚ್ಚು ಫ್ಲಾಪ್ ಸಿನಿಮಾಗಳನ್ನೇ ನೀಡಿರುವ ನಟ ಮತ್ತೆ ಪ್ರತ್ಯಕ್ಷ ಆಗಿದ್ದಾರೆ.

  ಯುವ ನಿರ್ದೇಶಕ ತರುಣ್ ಭಾಸ್ಕರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ ಈ ಜೋಡಿಯ ಹೊಸ ಸಿನಿಮಾದ ಹೆಸರು ' ಕೀಡಾ ಕೋಲಾ'. ಸದಾ ವಿಭಿನ್ನ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿರೋ ತರುಣ್ ಭಾಸ್ಕರ್ ಈ ಬಾರಿ ಕ್ರೈಂ ಕಾಮಿಡಿ ಸಿನಿಮಾವನ್ನು ನೀಡುವುದಕ್ಕೆ ಮುಂದಾಗಿದ್ದಾರೆ.

  Exclusive: ದರ್ಶನ್ ಬೇರೆ ಸಿನಿಮಾದಲ್ಲಿ ತರುಣ್ ಬ್ಯುಸಿ: 'ಸಿಂಧೂರ ಲಕ್ಷಣ'ದ ಕಥೆಯೇನು?Exclusive: ದರ್ಶನ್ ಬೇರೆ ಸಿನಿಮಾದಲ್ಲಿ ತರುಣ್ ಬ್ಯುಸಿ: 'ಸಿಂಧೂರ ಲಕ್ಷಣ'ದ ಕಥೆಯೇನು?

  ಬೊಮ್ಮರಿಲ್ಲು ಸಿದ್ಧಾರ್ಥ್ ಹೊಸ ಸಿನಿಮಾ ಶುರು

  ಸಿದ್ಧಾರ್ಥ್ ಅಭಿನಯದ 'ಕೀಡಾ ಕೋಲಾ' ಸಿನಿಮಾ ಹೈದರಾಬಾದ್‌ನಲ್ಲಿ ಗ್ರ್ಯಾಂಡ್ ಆಗಿ ಸೆಟ್ಟೇರಿದೆ. 2021ರಲ್ಲಿ ತೆಲುಗಿನಲ್ಲಿಯೇ 'ಮಹಾ ಸಮುದ್ರಂ' ಅನ್ನೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಬಳಿಕ ಮತ್ಯಾವುದೇ ಸಿನಿಮಾವನ್ನು ಸಿದ್ಧಾರ್ಥ್ ಅನೌನ್ಸ್ ಮಾಡಿರಲಿಲ್ಲ. ಈ ವರ್ಷದಲ್ಲಿ ಮೊದಲ ಸಿನಿಮಾ ಸೆಟ್ಟೇರಿದೆ.

  ಆದರೆ, 2022ರಲ್ಲಿ ಸಿದ್ಧಾರ್ಥ್ ಅಭಿನಯದ ವೆಬ್‌ ಸೀರಿಸ್ ಗಮನ ಸೆಳೆದಿತ್ತು. 'ಎಸ್ಕೇಪ್ ಲೈವ್' ಅನ್ನೋ ಸೀರಿಸ್‌ನಲ್ಲಿ ಡಿಸ್ನಿ+ ಹಾಟ್‌ ಸ್ಟಾರ್‌ನಲ್ಲಿ ಬಿಡುಗಡೆಯಾಗಿತ್ತು. ಹಿಂದಿಯಲ್ಲಿ ತಕ್ಕ ಮಟ್ಟಿಗೆ ಈ ವೆಬ್ ಸೀರಿಸ್ ಗಮನ ಸೆಳೆದಿತ್ತು. ಈಗ ಸಿದ್ಧಾರ್ಥ್ ತೆಲುಗು ಸಿನಿಮಾ ಸೆಟ್ಟೇರಿದೆ. ಆದರೆ, ಇದು ಲವ್ ಸ್ಟೋರಿ ಸಿನಿಮಾ ಅಲ್ಲ ಅನ್ನೋದು ವಿಶೇಷ.

  ನಿರ್ದೇಶಕ ಮೇಲೆ ಇನ್ನಿಲ್ಲದ ನಂಬಿಕೆ

  ಟಾಲಿವುಡ್‌ನ ಟ್ಯಾಲೆಂಟೆಡ್ ಡೈರೆಕ್ಟರ್ ತರುಣ್ ಭಾಸ್ಕರ್ ಈಗಾಗಲೇ 'ಪೆಳ್ಳಿ ಚೂಪುಲು' ಅನ್ನೋ ಸಿನಿಮಾ ನಿರ್ದೇಶಿಸಿದ್ದಾರೆ. ಇದು ವಿಜಯ್ ದೇವರಕೊಂಡಗೆ ಲೈಫ್ ಕೊಟ್ಟಿತ್ತು. 'ಈ ನಾಗಾರಾಣಿಕಿ ಎಮೈಂದಿ' ಎಂಬ ಸಿನಿಮಾ ಕೂಡ ಹಿಟ್ ಆಗಿತ್ತು. ಈ ಚಿತ್ರದ ವಿಶ್ವಕ್ ಸೇನ್‌ಗೆ ಲೈಫ್ ಕೊಟ್ಟಿತ್ತು. ಎರಡು ಹಿಟ್ ಸಿನಿಮಾ ನೀಡಿದ ಬಳಿಕ 'ಕೀಡಾ ಕೋಲಾ' ಸೆಟ್ಟೇರಿದೆ.

  ಇದೊಂದು ಪಕ್ಕಾ ಯೂತ್ ಫುಲ್ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೈದರಾಬಾದ್‌ನಲ್ಲಿ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ನಿರ್ಮಾಪಕ ಸುರೇಶ್ ಬಾಬು, ನಾಯಕ ಸಿದ್ಧಾರ್ಥ್, ತೇಜ ಸಜ್ಜ, ನಂದು ಸೇರಿದಂತೆ ಹಲವು ಯುವ ನಿರ್ದೇಶಕರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು.

  ಶ್ರೀಪಾದ್ ನಂದಿರಾಜ್, ಸಾಯಿಕೃಷ್ಣ ಗದ್ವಾಲ್, ಉಪೇಂದ್ರ ವರ್ಮಾ, ವಿವೇಕ್ ಸುಧಾಂಶು ಮತ್ತು ಕೌಶಿಕ್ ನಂದೂರಿ ಈ ಚಿತ್ರ ನಿರ್ಮಾಣ ಮಾಡಲಿದೆ. ಅಲ್ಲದೆ ಶೀರ್ಘದಲ್ಲಿ ಸ್ಟಾರ್ ಕಾಸ್ಟ್ ಹಾಗೂ ತಾಂತ್ರಿಕ ವರ್ಗ ಫೈನಲ್ ಆಗ್ತಿದ್ದಂತೆ ಚಿತ್ರತಂಡ ಶೂಟಿಂಗ್ ಆರಂಭಿಸಲಿದೆ. ಮುಂದಿನ ವರ್ಷ 2023ರಲ್ಲಿ ಪ್ಯಾನ್ ಇಂಡಿಯಾ ಸಿನಿಮಾ 'ಕೀಡಾ ಕೋಲಾ' ತೆರೆಗೆ ಬರಲಿದೆ.

  English summary
  Actor Siddharth And Director Tarun Combination Movie Keeda Cola Launched, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X