Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೇಡವಾದ ಕಾರಣಕ್ಕೆ ಸುದ್ದಿಯಾದ ತೆಲುಗು ನಟ ನಾಗಾರ್ಜುನ
ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಬೇಡವಾದ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಹೈದರಾಬಾದಿನಲ್ಲಿರುವ ಅಕ್ಕಿನೇನಿ ಕುಟುಂಬದ ಅನ್ನಪೂರ್ಣ ಸ್ಟುಡಿಯೋವನ್ನು ಬ್ಯಾಂಕ್ ಜಪ್ತಿ ಮಾಡಿದೆ.
ರಾಷ್ಟೀಕೃತ ಬ್ಯಾಂಕಿನಲ್ಲಿ ತೆಗೆದುಕೊಂಡಿದ್ದ ಸಾಲವನ್ನು ವಾಯಿದೇ ಮೀರಿದ ನಂತರವೂ ಮರುಪಾವತಿಸದೇ ಇರುವು ಕಾರಣಕ್ಕಾಗಿ, ನಗರದ ಹೃದಯ ಭಾಗದ ಜ್ಯುಬಿಲಿ ಹಿಲ್ಸ್ ನಲ್ಲಿರುವ ಪ್ರಸಿದ್ದ ಅನ್ನಪೂರ್ಣ ಸ್ಟುಡಿಯೋವನ್ನು ಬ್ಯಾಂಕ್ ಜಪ್ತಿ ಮಾಡಿಕೊಂಡಿದೆ.
ಆಂಧ್ರ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಅನ್ನಪೂರ್ಣ ಸ್ಟುಡಿಯೋದ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು 62 ಕೋಟಿ ರೂಪಾಯಿ ಸಾಲ ನೀಡಿತ್ತು.
ಆಂಧ್ರ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಕ್ರಮವಾಗಿ 32.3 ಮತ್ತು 29.7 ಕೋಟಿ ರೂಪಾಯಿ ಸಾಲ ನೀಡಿತ್ತು. ಜನವರಿ 2014ರಲ್ಲಿ ಸಾಲ ಮರು ಪಾವತಿಸುವಂತೆ ನೋಟಿಸ್ ಮೇಲೆ ನೋಟೀಸ್ ಜಾರಿ ಮಾಡಿದ್ದರೂ ನಾಗಾರ್ಜುನ ಕುಟುಂಬ ಇದಕ್ಕೆ ಸ್ಪಂದಿಸಿರಲಿಲ್ಲ.
ರಜನಿಕಾಂತ್ ಒಡೆತನದ ಪ್ರಾಪರ್ಟಿಯೊಂದಕ್ಕೂ ಇದೇ ಪರಿಸ್ಥಿತಿಯಾಗಿತ್ತು. ಮುಂದೆ ಓದಿ...

ನೋಟಿಸ್ ಜಾರಿಯಾಗಿತ್ತು
ನಾಗಾರ್ಜುನ ಮತ್ತು ಕುಟುಂಬ ಸದಸ್ಯರಾದ ವೆಂಕಟ್ ಅಕ್ಕಿನೇನಿ, ಸುಪ್ರಿಯಾ, ವೈ ಸುರೇಂದ್ರ, ನಾಗ ಸುಶೀಲ ಮತ್ತು ವೆಂಕಟ್ ರೊದ್ದಂ ಅವರಿಗೆ ಬ್ಯಾಂಕ್ ಹದಿನಾಲ್ಕು ತಿಂಗಳೇ ಹಿಂದೆಯೇ ಅಸಲು, ಬಡ್ಡಿ ತೀರಿಸುವಂತೆ ನೋಟೀಸ್ ಜಾರಿ ಮಾಡಿತ್ತು.

ಪತ್ರಿಕಾ ಜಾಹೀರಾತು
ನೋಟೀಸಿಗೆ ಉತ್ತರ ಬರದ ಹಿನ್ನಲೆಯಲ್ಲಿ ಆರ್ಬಿಐ ನಿಯಮದಂತೆ ಆಂಧ್ರ ಮತ್ತು ಇಂಡಿಯನ್ ಬ್ಯಾಂಕ್ ಅನ್ನಪೂರ್ಣ ಸ್ಟುಡಿಯೋವನ್ನು ಮಾರ್ಚ್ 20ನೇ ತಾರೀಕಿಗೆ ಅನ್ವಯವಾಗುವಂತೆ ಜಪ್ತಿ ಮಾಡಿಕೊಂಡು ಪತ್ರಿಕಾ ಜಾಹೀರಾತು ನೀಡಿದೆ. ಜೊತೆಗೆ ಮೂರನೇ ವ್ಯಕ್ತಿ ಸ್ಟುಡಿಯೋಗೆ ಸಂಬಂದಿಸಿದಂತೆ ಯಾವುದೇ ವ್ಯವಹಾರ ಇಟ್ಟುಕೊಳ್ಳಬಾರದೆಂದು ತಿಳಿಸಿದೆ.

ಏಳು ಎಕರೆ ಜಮೀನಿನಲ್ಲಿರುವ ಸ್ಟುಡಿಯೋ
ಅನ್ನಪೂರ್ಣ ಸ್ಟುಡಿಯೋ ಸದಾ ಬ್ಯೂಸಿಯಾಗಿರುವ ಸ್ಟುಡಿಯೋಗಳಲ್ಲೊಂದು. ಹೆಚ್ಚಾಗಿ ಇಲ್ಲಿ ಹಾಡಿನ ಮತ್ತು ಕಿರುತೆರೆಯ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ. ಏಳು ಎಕರೆ ಜಮೀನಲ್ಲಿ ವಿಸ್ತಾರವಾಗಿರುವ ಈ ಸ್ಟುಡಿಯೋವನ್ನು ಅಕ್ಕಿನೇನಿ ನಾಗೇಶ್ವರ ರಾವ್ 1955ರಲ್ಲಿ ಕಟ್ಟಿಸಿದ್ದರು.

ಸೆಟ್ಲಿಮೆಂಟಿಗೆ ಮುಂದಾಗಿದ್ದರು ನಾಗಾರ್ಜುನ
ಕೋರ್ಟಿನಿಂದ ಹೊರಗೆ ಅಸಲು, ಬಡ್ಡಿ ಸೇರಿ ಒಂದು ಮೊತ್ತಕ್ಕೆ ಸಾಲವನ್ನು OTS (one time settlement) ಮಾಡಲು ನಾಗಾರ್ಜುನ ಎರಡೂ ಬ್ಯಾಂಕ್ ಜೊತೆ ಮಾತುಕತೆಗೆ ಮುಂದಾಗಿದ್ದರು ಎನ್ನುವ ಸುದ್ದಿಯೂ ಇತ್ತು.

ರಜನಿಕಾಂತ್ ಆಸ್ತಿ
ರಜನಿಕಾಂತ್ ಅಭಿನಯದ, ಮಗಳು ಸೌಂದರ್ಯ ನಿರ್ಮಿಸಿದ್ದ ಕೊಚಾಡಿಯನ್ ಚಿತ್ರ ನೆಲಕಚ್ಚಿತ್ತು. ಇದಾದ ನಂತರ ರಜನಿ ಮತ್ತು ಅವರ ಪತ್ನಿಯ ಹೆಸರಿನಲ್ಲಿದ್ದ ಆಸ್ತಿಯೊಂದನ್ನು ಸಾಲ ಪರುವಾತಿಸದ ಹಿನ್ನಲೆಯಲ್ಲಿ ಬ್ಯಾಂಕ್ ಮುಟ್ಟುಗೋಲು ಹಾಕುವ ನೊಟೀಸ್ ಜಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.