Don't Miss!
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Technology
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮಹಾನಟಿ' ಕೀರ್ತಿ ಸುರೇಶ್ ಅಲ್ಲ.. ಸಮಂತಾ: ಭವಿಷ್ಯ ನುಡಿದ ಖ್ಯಾತ ನಿರ್ಮಾಪಕರು!
'ಮಹಾನಟಿ' ಯಾರು ಅಂತ ಪ್ರಶ್ನೆ ಮಾಡಿದ್ರೆ, ಮೊದಲು ನೆನಪಿಗೆ ಬರೋದೇ ನಟಿ ಕೀರ್ತಿ ಸುರೇಶ್. ಈ ಪಾತ್ರಕ್ಕಾಗಿ ಕೀರ್ತಿ ಸುರೇಶ್‌ಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಆದ್ರೀಗ ಟಾಲಿವುಡ್‌ನ ನಿರ್ಮಾಪಕರು ಮುಂದಿನ 'ಮಹಾನಟಿ' ಸಮಂತಾ ಅಂತ ಹೇಳುತ್ತಿದ್ದಾರೆ.
ಟಾಲಿವುಡ್ 'ಲೆಜೆಂಡ್' ಬಾಲಕೃಷ್ಣ ಓಟಿಟಿಗಾಗಿ ನಡೆಸಿಕೊಡುವ ಜನಪ್ರಿಯ ಟಾಕ್ ಶೋ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ 2'. ಈ ಶೋನಲ್ಲಿ ತೆಲುಗು ಚಿತ್ರರಂಗದ ಇಬ್ಬರು ಖ್ಯಾತ ನಿರ್ಮಾಪಕರು ಭಾಗವಹಿಸಿದ್ದರು. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಹಾಗೂ ರಾಣಾ ದಗ್ಗುಬಾಟಿ ತಂದೆ ಸುರೇಶ್ ಬಾಬು ಮುಖ್ಯ ಅತಿಥಿಯಾಗಿ ಎಂಟ್ರಿಕೊಟ್ಟಿದ್ದರು.
ಇನ್ನೂ
ಗುಣಮುಖರಾಗಿಲ್ಲ
ಸಮಂತಾ:
ಹೆಚ್ಚಿನ
ಚಿಕಿತ್ಸೆಗೆ
ದಕ್ಷಿಣ
ಕೊರಿಯಾಗೆ
ಶಿಫ್ಟ್?
ಬಾಲಕೃಷ್ಣ ಹಾಗೂ ಈ ಇಬ್ಬರೂ ನಿರ್ಮಾಪಕರೊಂದಿಗೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಅದರಲ್ಲಿ 'ಮಹಾನಟಿ' ಯಾರು? ಅನ್ನೋ ಪ್ರಶ್ನೆ ಬಗ್ಗೆನೂ ಚರ್ಚೆಯಾಗಿದ್ದು, ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅಲ್ಲೂ ಅರವಿಂದ್ ಹಾಗೂ ರಾಣಾ ದಗ್ಗುಬಾಟಿ ಇಬ್ಬರೂ ಕೊಟ್ಟು ಹೇಳಿಕೆ ಏನು? ಈಗ ಅದು ಚರ್ಚೆಯಾಗುತ್ತಿರೋದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಟಾಲಿವುಡ್ ಮಹಾನಟಿ ಯಾರು?
ಬಾಲಕೃಷ್ಣ ತನ್ನ ಟಾಕ್ ಶೋ 'ಅನ್‌ಸ್ಟಾಪಬರ್ ವಿತ್ ಎನ್‌ಬಿಕೆ 2'ನಲ್ಲಿ ಮತ್ತೆ ಗಮನ ಸೆಳೆಯುತ್ತಿದ್ದಾರೆ. ಅತಿಥಿಗಳಿಗೆ ಖಡಕ್ ಪ್ರಶ್ನೆಗಳ ಮೂಲಕ ಪೇಚಿಗೆ ಸಿಲುಕಿಸಿದ ಉದಾಹರಣೆಗಳೂ ಇವೆ. ಹಾಗೇ ಈ ಬಾರಿ ಅತಿಥಿಯಾಗಿ ಆಗಮಿಸಿದ್ದ ಅಲ್ಲು ಅರವಿಂದ್ ಹಾಗೂ ಸುರೇಶ್ ಬಾಬುಗೆ ಇಂತಹ ಒಂದು ಪ್ರಶ್ನೆಯನ್ನು ಮುಂದಿಟ್ಟಿದ್ದರು. ತೆಲುಗು ಚಿತ್ರರಂಗದ 'ಮುಂದಿನ ಮಹಾನಟಿ' ಯಾರು? ಅಂತ ಪ್ರಶ್ನೆ ಮಾಡಿದ್ದರು. ಅದಕ್ಕೆ ಇಬ್ಬರು ನಿರ್ಮಾಪಕರೂ ಸೂಚಿಸಿದ ನಟಿ ಒಬ್ಬರೇ. ಅವರೇ ಸಮಂತಾ.

ನಿರ್ಮಾಪಕರ ವಿಡಿಯೋ ವೈರಲ್
ಬಾಲಕೃಷ್ಣ ಟಾಕ್ ಶೋನಲ್ಲಿ ನಿರ್ಮಾಪಕ ಅಲ್ಲು ಅರವಿಂದ್ ಹಾಗೂ ಸುರೇಶ್ ಬಾಬು 'ಮುಂದಿನ ಮಹಾನಟಿ' ಸಮಂತಾ ಎಂದಿದ್ದಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಮಂತಾ ಅಭಿಮಾನಿಗಳು ಜೋರಾಗಿಯೇ ಶೇರ್ ಮಾಡುತ್ತಿದ್ದಾರೆ. ಇದಕ್ಕೆ 'ಸಮಂತಾ' ಕೂಡ ದಿಲ್ ಖುಷ್ ಆಗಿದ್ದು, ಅಭಿಮಾನಿಗಳು ಶೇರ್ ಮಾಡಿದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಟ್ವೀಟ್ ಕೂಡ ವೈರಲ್ ಆಗುತ್ತಿದೆ.

ಸಮಂತಾ 'ಮಹಾನಟಿ' ಯಾಕೆ?
ಟಾಲಿವುಡ್‌ನಲ್ಲಿ ಸಮಂತಾಗೆ ಜನಪ್ರಿಯರ ನಟಿ. ಆಕೆ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳಿಗೆ ಭಾರೀ ಬೇಡಿಕೆ ಇದೆ. ಅಲ್ಲದೆ ಟಾಲಿವುಡ್‌ನಲ್ಲಿ ಬ್ಯುಸಿ ನಟಿ. 'ಯಶೋದಾ', 'ಓ ಬೇಬಿ', 'ಪುಷ್ಪ' ದಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಇನ್ನು 'ಶಾಕುಂತಲಂ' ರಿಲೀಸ್ ಆಗಬೇಕಿದೆ. ಅಲ್ಲದೆ ಬಾಲಿವುಡ್‌ಗೂ ಎಂಟ್ರಿಗೂ ವೇದಿಕೆ ಸಿದ್ಧವಾಗಿದೆ. ಇನ್ನೊಂದು ಕಡೆ ವೆಬ್ ಸಿರೀಸ್‌ನಲ್ಲೂ ಕ್ಲಿಕ್ ಆಗುತ್ತಿದೆ. ಈ ಕಾರಣಕ್ಕೆ ಸಮಂತಾ ಮುಂದಿನ 'ಮಹಾನಟಿ' ಎನ್ನುತ್ತಿದ್ದಾರೆ ಫ್ಯಾನ್ಸ್.

ಕೀರ್ತಿ ಸುರೇಶ್ ಮುಂದಿನ 'ಮಹಾನಟಿ'
5 ವರ್ಷಗಳ ಹಿಂದೆ, 2018ರಲ್ಲಿ 'ಮಹಾನಟಿ' ರಿಲೀಸ್ ಆಗಿತ್ತು. ಬಹುಭಾಷಾ ನಟಿ ಸಾವಿತ್ರಿ ಜೀವನಾಧಾರಿತ ಕಥೆಯನ್ನು ನಾಗ ಅಶ್ವಿನ್ ತೆರೆಮೇಲೆ ತಂದಿದ್ದರು. ದಕ್ಷಿಣ ಭಾರತದ ದಂತಕಥೆ ಸಾವಿತ್ರಿ ಅವತಾರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದರು. ಕೀರ್ತಿ ಸುರೇಶ್ ಈ ಪಾತ್ರದಲ್ಲಿಸ ಅದ್ಭುತವಾಗಿ ನಟಿಸಿದ್ದರು. ಅದಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಹೀಗಾಗಿ ಇದೂವರೆಗೂ 'ಮಹಾನಟಿ' ಅಂದರೆ, ಕೀರ್ತಿ ಸುರೇಶ್ ಅಂತಾನೇ ಅಂದ್ಕೊಳ್ಳುತ್ತಾರೆ.