Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಳಿ ಗಡ್ಡ ಬಿಟ್ಟು ರಗಡ್ ಲುಕ್ ಕೊಟ್ಟ ಅಲ್ಲು ಅರ್ಜುನ್: ಪುಷ್ಪ 2 ಲುಕ್ ಅಂದ್ರು ಫ್ಯಾನ್ಸ್!
'ಪುಷ್ಪ' ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಐಕಾನ್ ಸ್ಟಾರ್ ಆಗಿ ಬದಲಾಗಿದ್ದರು. 'ಪುಷ್ಪ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು ನೋಡಿ, ಬಾಲಿವುಡ್ ಮಂದಿಗೆ ದಂಗಾಗಿ ಹೋಗಿದ್ದರು. ಈಗ 'ಪುಷ್ಪ 2;ಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಸಖತ್ ಸರ್ಪ್ರೈಸ್ ಸಿಕ್ಕಿದೆ.
ಅಲ್ಲು ಅರ್ಜುನ್ 'ಪುಷ್ಪ 2'ವರೆಗೂ ಬೇರೊಂದು ಸಿನಿಮಾದಲ್ಲಿ ನಟಿಸುವುದಿಲ್ಲ ಅನ್ನೋದು ಅಭಿಮಾನಿಗಳಿಗೆ ಗೊತ್ತಿದೆ. ಹೀಗಾಗಿ 'ಪುಷ್ಪ 2' ಹೇಗಿರುತ್ತೋ? ಸುಕುಮಾರ್ ಅದ್ಯಾವ ರೇಂಜ್‌ನಲ್ಲಿ ಸಿನಿಮಾ ಮಾಡುತ್ತಾರೋ ಅನ್ನೋ ಕುತೂಹಲದಲ್ಲಿ ಕಾಯುತ್ತಿದ್ದಾರೆ. ಈ ಮಧ್ಯೆ ಐಕಾನ್ ಸ್ಟಾರ್ ಒಂದು ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗುತ್ತಿದೆ.
ಅಲ್ಲು ಅರ್ಜುನ್ ಲುಕ್ ವೈರಲ್
ದಿಢೀರನೇ ಅಲ್ಲು ಅರ್ಜುನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಲುಕ್ ಒಂದನ್ನು ರಿವೀಲ್ ಮಾಡಿದ್ದಾರೆ. ಈ ಲುಕ್ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಅಸಲಿಗೆ ಈ ರಗಡ್ ಲುಕ್‌ಗೆ ಅಲ್ಲು ಅರ್ಜುನ್ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಕೈಯಲ್ಲಿ ಸಿಗಾರ್ ಹಿಡಿದು, ಅಲ್ಲಲ್ಲಿ ಬಿಳಿ ಕೂದಲು ಬಿಟ್ಟಿರುವ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಟ್ವಿಟರ್‌ನಲ್ಲಿ ಅಲ್ಲು ಅರ್ಜುನ್ ಈ ಹೊಸ ಲುಕ್ ಅನ್ನು ಪೋಸ್ಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಅಸಲಿಗೆ ಅಲ್ಲು ಅರ್ಜುನ್ ಈ ಲುಕ್ ಕೊಟ್ಟಿದ್ದು ಯಾಕೆ ಅನ್ನೋ ಚರ್ಚೆ ಶುರುವಾಗಿದೆ.
— Allu Arjun (@alluarjun) July 29, 2022
'ಪುಷ್ಪ 2' ಲುಕ್ ಅಂದ್ರು ಅಭಿಮಾನಿಗಳು
ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ಶೂಟಿಂಗ್ ಇನ್ನೇನು ಶುರುವಾಗಲಿದೆ. 'ಪುಷ್ಪ'ಗಿಂತ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕು ಅಂತ ಸುಕುಮಾರ್ ಪಣ ತೊಟ್ಟು ಕೂತಿದ್ದಾರೆ. ಈ ಮಧ್ಯೆ ಅಲ್ಲು ಅರ್ಜುನ್ ಈ ರಗಡ್ ಲುಕ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಇದು 'ಪುಷ್ಪ 2' ಸಿನಿಮಾದ್ದೇ ಲುಕ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದರೆ ಇದು 'ಪುಷ್ಪ 2' ಸಿನಿಮಾದ ಸ್ಟಿಲ್ ಅಲ್ಲ.
'ಪುಷ್ಪ 2' ಸಿನಿಮಾ ಶೂಟಿಂಗ್ ಶುರು ಮಾಡುವುದಕ್ಕೆ ಇನ್ನೂ ಸ್ವಲ್ಪ ಸಮಯವಿದೆ. ಈ ಸಮಯವನ್ನು ವ್ಯರ್ಥ ಮಾಡದೆ ಜಾಹೀರಾತಿಗಾಗಿ ಮೀಸಲಿಟ್ಟಿದ್ದಾರೆ. ಅಂದ್ಹಾಗೆ ಈ ಲುಕ್ ಅಲ್ಲು ಅರ್ಜುನ್ ಹೊಸ ಜಾಹೀರಾತಿನ ಲುಕ್. ಕೆಲವು ದಿನಗಳ ಹಿಂದಷ್ಟೇ ಟಾಲಿವುಡ್ ನಿರ್ದೇಶಕನೊಂದಿಗೆ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರು. ಅದೇ ಜಾಹೀರಾತಿನ ಗೆಟಪ್ ಇದು ಎಂದು ಟಾಲಿವುಡ್ ಹೇಳುತ್ತಿದೆ.
ಇತ್ತ ಅಲ್ಲು ಅರ್ಜುನ್ ಕೂಡ ಕೇವಲ ಫೋಟವನ್ನಷ್ಟೇ ಪೋಸ್ಟ್ ಮಾಡಿದ್ದರಿಂದ ಅಭಿಮಾನಿಗಳು ಕೊಂಚ ಖುಷಿಯಾಗಿದ್ದರು. ಆದ್ರೀಗ ಇದು ಜಾಹೀರಾತು ಎಂದು ಖುಷಿಯಾಗುತ್ತಿದ್ದಂತೆ ನಿರಾಶರಾಗಿದ್ದರೂ, ಮತ್ತೆ ಅಲ್ಲು ಅರ್ಜುನ್‌ರನ್ನು ಈ ಅವತಾರದಲ್ಲಿ ನೋಡಿ ಹ್ಯಾಪಿಯಾಗಿದ್ದಾರೆ.