For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ಆರು ನಿಮಿಷದ ಫೈಟ್ ದೃಶ್ಯಕ್ಕೆ ಇಷ್ಟೊಂದು ವೆಚ್ಚ?

  |

  ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ, ಕಲಾವಿದರ ಆಯ್ಕೆಯ ಕಾರಣದಿಂದಲೂ ಹಲವು ನಿರೀಕ್ಷೆಗಳನ್ನು ಮೂಡಿಸಿದೆ.

  ಅಲ್ಲು ಅರ್ಜುನ್ ಜನ್ಮದಿನದಂದು ಚಿತ್ರದ ಮೊದಲ ಪೋಸ್ಟರ್ ಲುಕ್ ಬಿಡುಗಡೆ ಮಾಡಲಾಗಿತ್ತು. ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಯಾವ ಸಿನಿಮಾಗಳೂ ಸೆಟ್ಟೇರುತ್ತಿಲ್ಲ. ಹೀಗಾಗಿ 'ಪುಷ್ಪ' ಚಿತ್ರದ ಶೂಟಿಂಗ್ ಆರಂಭವಾಗುವುದು ವಿಳಂಬವಾಗಲಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ 'ಪುಷ್ಪ' ಬಿಡುಗಡೆಯಾಗಲಿದೆ. ಜತೆಗೆ ಪರಿಪೂರ್ಣ ಆಕ್ಷನ್ ಚಿತ್ರವಾಗಿರುವುದರಿಂದ ಅದರ ಬಜೆಟ್ ಕೂಡ ದೊಡ್ಡದಿದೆ. ನಿರ್ಮಾಪಕರು ಬಜೆಟ್ ಗಾತ್ರವನ್ನು ತಗ್ಗಿಸುವ ಆಲೋಚನೆಯಲ್ಲಿದ್ದಾರೆ. ಆದರೆ ನಿರ್ದೇಶಕ ಸುಕುಮಾರ್, ಫೈಟ್ ದೃಶ್ಯವೊಂದಕ್ಕೇ ಭಾರಿ ಹಣ ವಿನಿಯೋಗಿಸುವ ಯೋಚನೆಯಲ್ಲಿದ್ದಾರೆ. ಮುಂದೆ ಓದಿ...

  ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸಲಿದ್ದಾರೆಯೇ ಧನಂಜಯ್?: 'ಡಾಲಿ'ಗೆ ಬಂದ ಭರ್ಜರಿ ಆಫರ್ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸಲಿದ್ದಾರೆಯೇ ಧನಂಜಯ್?: 'ಡಾಲಿ'ಗೆ ಬಂದ ಭರ್ಜರಿ ಆಫರ್

  ಆರು ನಿಮಿಷಕ್ಕೆ ಆರು ಕೋಟಿ

  ಆರು ನಿಮಿಷಕ್ಕೆ ಆರು ಕೋಟಿ

  'ಪುಷ್ಪ' ಚಿತ್ರದಲ್ಲಿ ಅದ್ಧೂರಿ ವೆಚ್ಚದ ಹೊಡೆದಾಟದ ಸನ್ನಿವೇಶಗಳಿರಲಿವೆ. ಆಕ್ಷನ್ ಚಿತ್ರವಾಗಿರುವುದರಿಂದ ಸಿನಿಮಾದ ಹೆಚ್ಚಿನ ಬಜೆಟ್ ಫೈಟ್ ದೃಶ್ಯಗಳಿಗೇ ಮೀಸಲಾಗಿರಲಿದೆಯಂತೆ. ಮೂಲಗಳ ಪ್ರಕಾರ ಸುಕುಮಾರ್ ಒಂದು ಅದ್ಧೂರಿ ಫೈಟ್ ಸೀನ್‌ಗೆ ಯೋಜನೆ ರೂಪಿಸಿದ್ದು, ಕೇವಲ ಆರು ನಿಮಿಷದ ಫೈಟ್ ದೃಶ್ಯಕ್ಕೆ 6 ಕೋಟಿ ರೂ. ವ್ಯಯಿಸಲು ಮುಂದಾಗಿದ್ದಾರೆ.

  ಭಾರತದ ಸಾಹಸ ನಿರ್ದೇಶಕರು

  ಭಾರತದ ಸಾಹಸ ನಿರ್ದೇಶಕರು

  ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಅವತಾರವನ್ನು ಅತ್ಯಂತ ಸುಂದರವಾಗಿ ಈ ಆಕ್ಷನ್ ದೃಶ್ಯದ ಮೂಲಕ ಕಟ್ಟಿಕೊಡುವುದು ನಿರ್ದೇಶಕರ ಬಯಕೆ. ಆಕ್ಷನ್ ದೃಶ್ಯಗಳಿಗಾಗಿ ಭಾರತದ ಖ್ಯಾತ ಸಾಹಸ ನಿರ್ದೇಶಕರನ್ನು ಕರೆಸಲು ಅವರು ಉದ್ದೇಶಿಸಿದ್ದಾರೆ.

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿಯ ಎಂಟ್ರಿ?ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿಯ ಎಂಟ್ರಿ?

  ಥೈಲ್ಯಾಂಡ್ ಸ್ಟಂಟ್ ಮಾಸ್ಟರ್

  ಥೈಲ್ಯಾಂಡ್ ಸ್ಟಂಟ್ ಮಾಸ್ಟರ್

  ಮೊದಲ ಯೋಚನೆಯಂತೆ ಸುಕುಮಾರ್, ಥೈಲ್ಯಾಂಡ್‌ನಿಂದ ಸ್ಟಂಟ್ ಮಾಸ್ಟರ್‌ಗಳನ್ನು ಕರೆಯಿಸಲು ತೀರ್ಮಾನಿಸಿದ್ದರು. ಆದರೆ ಬಜೆಟ್ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಅಂತಾರಾಷ್ಟ್ರೀಯ ಫೈಟರ್‌ಗಳನ್ನು ಕರೆಯಿಸುವ ನಿರ್ಧಾರವನ್ನು ಕೈಬಿಟ್ಟಿದ್ದಾರೆ.

  ಬಾಲಿವುಡ್ ನಟಿ ದಿಶಾ ಪಟಾನಿ

  ಬಾಲಿವುಡ್ ನಟಿ ದಿಶಾ ಪಟಾನಿ

  ಅಲ್ಲು ಅರ್ಜುನ್ ಅವರ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಇರುವಂತೆ ಅವರ ಶೈಲಿಯ ಹಾಡು-ಡ್ಯಾನ್ಸ್‌ಗಳು 'ಪುಷ್ಪ'ದಲ್ಲಿ ಇರುವುದಿಲ್ಲ. ಆದರೆ ಟಪ್ಪಾಂಗುಚ್ಚಿ ಹಾಡೊಂದರಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಆ ಹಾಡಲ್ಲಿ ಅವರೊಂದಿಗೆ ಬಾಲಿವುಡ್ ನಟಿ ದಿಶಾ ಪಟಾನಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ.

  ಕಳ್ಳಸಾಗಣೆದಾರರ ಕಥೆ

  ಕಳ್ಳಸಾಗಣೆದಾರರ ಕಥೆ

  ರಕ್ತ ಚಂದನದ ಕಳ್ಳಸಾಗಣೆಯ ಕಥೆಯನ್ನು 'ಪುಷ್ಪ' ಹೊಂದಿದೆ. 'ಪುಷ್ಪರಾಜ್' ಎಂಬ ಹೆಸರಿನ ಲಾರಿ ಡ್ರೈವರ್ ಪಾತ್ರದಲ್ಲಿ ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ರಶ್ಮಿಕಾ ಮಂದಣ್ಣ ಅರಣ್ಯಾಧಿಕಾರಿಯಾಗಿ ನಟಿಸಲಿದ್ದು, ಗೂಂಡಾಗಳಿಂದ ಕೊಲೆಯಾಗುತ್ತಾರೆ. ಅಲ್ಲು ಅರ್ಜುನ್ ಕ್ರಿಮಿನಲ್‌ಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದು ಕಥಾ ಹಂದರ ಎನ್ನಲಾಗಿದೆ.

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಿಂದ ನಟ ವಿಜಯ್ ಸೇತುಪತಿ ಔಟ್?ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಿಂದ ನಟ ವಿಜಯ್ ಸೇತುಪತಿ ಔಟ್?

  English summary
  Allu Arjun starrer Pushpa director Sukumar is planning to spend huge amount for six minute action sequence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X