For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿಗೆ ರಾಜ್ಯಸಭಾ ಸೀಟ್ ಆಫರ್ ನೀಡಿದ ಸಿಎಂ ಜಗನ್: ಪವನ್‌ ಕಲ್ಯಾಣ್‌ಗೆ ಟಕ್ಕರ್

  |

  ನಿನ್ನೆ( ಜನವರಿ 13) ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಹ್ವಾನದ ಮೇರೆಗೆ ಮೆಗಾಸ್ಟಾರ್ ಚಿರಂಜೀವಿ ಅಮರಾವತಿಗೆ ತೆರಳಿದ್ದರು. ಸಿನಿಮಾ ಟಿಕೆಟ್ ದರ ಕಡಿತಗೊಳಿಸಿರುವ ಸರ್ಕಾರದ ನೀತಿಯಿಂದ ಆಗುತ್ತಿರುವ ಅನಾನುಕೂಲದ ಬಗ್ಗೆ ಮಾಡಲು ತೆರಳಿದ್ದರು. ಈ ವೇಳೆ ಜಗನ್ ಮೋಹನ್ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಚಿರಂಜೀವಿ ಹೇಳಿದ್ದರು. ಇದು ಚಿತ್ರರಂಗಕ್ಕೆ ಕೊಂಚ ನೆಮ್ಮದಿಯನ್ನು ತಂದು ಕೊಟ್ಟಿದೆ.

  ಜಗನ್ ಆರ್ಭಟಕ್ಕೆ ಹೆದರಿಕೊಂಡ್ರ ಪವನ್ ಕಲ್ಯಾಣ್

  ಜಗನ್ ಭೇಟಿ ಮಾಡಿದ ಬಳಿಕ ಸ್ವತ: ಚಿರಂಜೀವಿ ಮಾಧ್ಯಮಗಳೊಂದಿಗೆ ಖುಷಿ ವಿಷಯವನ್ನು ಹಂಚಿಕೊಂಡಿದ್ದರು. ಎಲ್ಲಾ ಸರಿ ಹೋಗುತ್ತಿದೆ ಅನ್ನುವಾಗಲೇ ಈ ಸಭೆಯ ಬಗ್ಗೆ ಬೇರೆಯದ್ದೇ ಮಾತು ಕೇಳಿ ಬರುತ್ತಿದೆ. ಚಿರಂಜೀವಿ ಹಾಗೂ ಜಗನ್ ನಡುವೆ ನಡೆದ ಸಭೆಯಲ್ಲಿ ಚಿತ್ರರಂಗದ ಸಮಸ್ಯೆಗಿಂತ ಹೆಚ್ಚು ರಾಜಕೀಯದ ಬಗ್ಗೆನೇ ಚರ್ಚೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೆಗಾಸ್ಟಾರ್‌ಗೆ ಜಗನ್ ರಾಜ್ಯಸಭಾ ಸೀಟ್ ಆಫರ್ ಮಾಡಿರುವುದು ಟಾಲಿವುಡ್ ಚರ್ಚೆಗೆ ಕಾರಣವಾಗಿದೆ.

   ಚಿರಂಜೀವಿಗೆ ರಾಜ್ಯ ಸಭಾ ಸೀಟ್

  ಚಿರಂಜೀವಿಗೆ ರಾಜ್ಯ ಸಭಾ ಸೀಟ್

  ಅಮರಾವತಿಯ ಜಗನ್ ನಿವಾಸದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಿನ್ನೆ ( ಜನವರಿ 13) ಭೇಟಿ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಸಿನಿಮಾ ಟಿಕೆಟ್ ದರದ ಬಗ್ಗೆ ಚರ್ಚೆ ನಡೆದಿದೆ. ಅದಕ್ಕೆ ಜಗನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನುವುದನ್ನು ಚಿರಂಜೀವಿನೇ ಹೇಳಿದ್ದಾರೆ. ಆದರೆ, ಇವರಿಬ್ಬರ ಭೇಟಿ ವೇಳೆ ಸಿಎಂ ಜಗನ್ ಮೋಹನ್ ರೆಡ್ಡಿ ಟಾಲಿವುಡ್ ಮೆಗಾಸ್ಟಾರ್‌ಗೆ ಭಾರಿ ಆಫರ್ ಒಂದನ್ನು ಮುಂದಿಟ್ಟಿದ್ದೂ ಚರ್ಚೆಗೆ ಗ್ರಾಸವಾಗಿದೆ. ಜಗನ್ ಮುಂದಿನ ದಿನಗಳಲ್ಲಿ ರಾಜ್ಯ ಸಭಾ ಟಿಕೆಟ್ ನೀಡುವುದಾಗಿ ಆಫರ್ ಒಂದನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಆಫರ್ ಅನ್ನು ಚಿರಂಜೀವಿ ಒಪ್ಪಿಕೊಂಡಿದ್ದಾರಾ? ಎನ್ನುವ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.

   ಜೂನ್ ತಿಂಗಳಲ್ಲಿ ರಾಜ್ಯಸಭಾ ಸೀಟು ತೆರವು

  ಜೂನ್ ತಿಂಗಳಲ್ಲಿ ರಾಜ್ಯಸಭಾ ಸೀಟು ತೆರವು

  ಆಂಧ್ರ ಪ್ರದೇಶದಲ್ಲಿ ಈ ವರ್ಷ ಜೂನ್ ತಿಂಗಳಲ್ಲಿ ನಾಲ್ಕು ರಾಜ್ಯಸಭಾ ಸದಸ್ಯರ ಅವಧಿ ಮುಗಿಯಲಿದೆ. ಈ ಜಾಗಕ್ಕೆ ಚಿರಂಜೀವಿಗೆ ಆಫರ್ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ, ಈ ಬಗ್ಗೆ ಚಿರಂಜೀವಿಯಾಗಲಿ ಅಥವಾ ಸಿಎಂ ಜಗನ್ ಆಗಲಿ ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಜೂನ್ 21ಕ್ಕೆ ವೈಎಸ್‌ಆರ್ ಪಾರ್ಟಿಯ ಸದಸ್ಯರು ನಿವೃತ್ತಿಯಾಗಲಿದ್ದು ಅವರ ಜಾಗಕ್ಕೆ ಚಿರಂಜೀವಿಯನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

   ಪವನ್‌ಗೆ ಸಿಎಂ ಜಗನ್ ಕೌಂಟರ್?

  ಪವನ್‌ಗೆ ಸಿಎಂ ಜಗನ್ ಕೌಂಟರ್?

  ಜಗನ್ ಸರ್ಕಾರದ ವಿರುದ್ಧ ಟಾಲಿವುಡ್ ಪವರ್‌ಸ್ಟಾರ್ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಆಗಾಗ ಕಿಡಿಕಾರುತ್ತಲೇ ಇದ್ದಾರೆ. ಟಿಕೆಟ್ ದರ ಕಡಿತ ಹಾಗೂ ಹೆಚ್ಚುವರಿ ಸಿನಿಮಾ ಶೋಗಳಿಗೆ ನಿರ್ಬಂಧ ಹೇರಿದ್ದರ ವಿರುದ್ಧ ಪವನ್ ಕಲ್ಯಾಣ್ ತಿರುಗಿಬಿದ್ದಿದ್ದರು. ಅಲ್ಲಿಂದ ಪವನ್ ಹಾಗೂ ಜಗನ್ ನಡುವೆ ಬಹಿರಂಗವಾಗಿ ಮಾತಿನ ಯುದ್ಧ ನಡೆಯುತ್ತಲೇ ಇದೆ. ಹೀಗಾಗಿ 2024ರ ಚುನಾವಣೆಯಲ್ಲಿ ಪವನ್‌ಗೆ ಟಕ್ಕರ್ ಕೊಡಲೆಂದೇ ಜಗನ್ ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಚಿರಂಜೀವಿಯ ಕಾಪು ಜನಾಂಗವನ್ನು ಡಿವೈಡ್ ಮಾಡಿ, ಪವನ್ ಸೋಲಿಸುವ ತಂತ್ರಗಾರಿಕೆ ಮಾಡಿದ್ದಾರೆಂದು ಚರ್ಚೆಯಾಗುತ್ತಿದೆ.

   ರಾಜ್ಯ ಸಭಾ ಟಿಕೆಟ್‌ಗೆ ಚಿರಂಜೀವಿ ಗ್ರೀನ್ ಸಿಗ್ನಲ್

  ರಾಜ್ಯ ಸಭಾ ಟಿಕೆಟ್‌ಗೆ ಚಿರಂಜೀವಿ ಗ್ರೀನ್ ಸಿಗ್ನಲ್

  ಟಾಲಿವುಡ್ ಹಾಗೂ ಆಂಧ್ರದ ರಾಜಕೀಯ ವಲಯದಿಂದ ಚಿರಂಜೀವಿ ಸಿಎಂ ಜಗನ್ ಮುಂದಿಟ್ಟ ಆಫರ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಮೆಗಾಸ್ಟಾರ್ ಚಿರಂಜೀವಿ ಮತ್ತೆ ರಾಜಕೀಯಕ್ಕೆ ಮರಳುವ ಮನಸ್ಸು ಮಾಡಿದ್ದರು. ಆದರೆ, ಸರಿಯಾದ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಮೆಗಾಸ್ಟಾರ್‌ಗೆ ಜಗನ್ ನೀಡಿದ ಆಫರ್ ಒಪ್ಪಿಗೆಯಾಗಿದೆ ಎಂದೂ ಮೂಲಗಳು ಹೇಳುತ್ತಿವೆ. ಸಿನಿಮಾಗಿಂತ ರಾಜಕೀಯದ ಬಗ್ಗೆನೇ ಹೆಚ್ಚು ಚರ್ಚೆಯಾಗಿರುವ ವಿಷಯ ಟಾಲಿವುಡ್‌ನಲ್ಲಿ ನಿರಾಸೆ ಮೂಡಿಸಿದೆ.

  English summary
  Chiranjeevi and Andra CM Jagan discussed more politics than films. It is reported that CM Jagan Mohan Reddy offered Rajya Sabha seats to mega star chiranjeevi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X