For Quick Alerts
  ALLOW NOTIFICATIONS  
  For Daily Alerts

  ಬಾಲಕೃಷ್ಣ 108ನೇ ಹೈ ವೋಲ್ಟೇಜ್ ಸಿನಿಮಾ ಶುರು: ಅನಿಲ್ ರವಿಪುಡಿ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ!

  |

  'ಅಖಂಡ' ಸಿನಿಮಾ ಗೆದ್ದಿದ್ದೇ ಗೆದ್ದಿದ್ದು ಬಾಲಕೃಷ್ಣ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟನಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಾಲಕೃಷ್ಣ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಇನ್ನೂ 107ನೇ ಸಿನಿಮಾ ರಿಲೀಸ್ ಆಗಬೇಕಿದೆ. ಅಷ್ಟರಲ್ಲೇ ಬಾಲಕೃಷ್ಣ ಅಭಿನಯದ ಮತ್ತೊಂದು ಸಿನಿಮಾ ಸೆಟ್ಟೇರಿದೆ.

  ಟಾಲಿವುಡ್‌ನ 'ಗಾಡ್ ಆಫ್ ಮಾಸ್' ಎಂದೇ ಫೇಮಸ್ ಆಗಿರೋ ಟಾಲಿವುಡ್ ನಟ ನಂದಮುರಿ ಬಾಲಕೃಷ್ಣ 108ನೇ ಸಿನಿಮಾ ಇಂದು (ಡಿಸೆಂಬರ್ 9) ಅದ್ದೂರಿಯಾಗಿ ಸೆಟ್ಟೇರಿದೆ. ಬಾಲಕೃಷ್ಣ 108ನೇ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದು, ಈ ಇಬ್ಬರ ಕ್ರೇಜಿ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರೋ ಮೊದಲ ಸಿನಿಮಾವಿದು. ಅಂದ್ಹಾಗೆ NBK 108 ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಾಹು ಗರಪಟಿ ಮತ್ತು ಹರೀಶ್ ಪೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

  NBK108ನೇ ಚಿತ್ರಕ್ಕೆ ಟಾಲಿವುಡ್‌ನ ಖ್ಯಾತ ನಿರ್ಮಾಪಕರು ನಂದಮುರಿ ಬಾಲಕೃಷ್ಣಗೆ ಸಾಥ್ ನೀಡಿದ್ದಾರೆ. ಈ ಸಿನಿಮಾ ಅಲ್ಲು ಅರ್ಜುನ್ ತಂದೆ, ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದ್ರೆ, ನಿರ್ಮಾಪಕ ದಿಲ್ ರಾಜು ಕ್ಯಾಮೆರಾ ಚಾಲನೆ ಮಾಡಿದ್ದಾರೆ. ಟಾಲಿವುಡ್‌ನ ಲೆಜೆಂಡರಿ ನಿರ್ದೇಶಕ ಕೆ.ರಾಘವೇಂದ್ರ ರಾವ್ ಮುಹೂರ್ತದ ಸೀನ್‌ಗೆ ಆಕ್ಷನ್ ಕಟ್ ಹೇಳಿ ಸಿನಿಮಾಗೆ ಗ್ರ್ಯಾಂಡ್ ಆಗಿ ಶೂಟಿಂಗ್ ಆರಂಭ ಮಾಡಿದ್ದಾರೆ.

  ಬಾಲಕೃಷ್ಣ 108ನೇ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಮಾಡಿಲ್ಲ. ಸದ್ಯ ಸಿನಿಮಾ ಮುಹೂರ್ತ ಆಗಿದ್ದು, ಇಂದಿನಿಂದಲೇ ಸಿನಿಮಾ ಶೂಟಿಂಗ್ ಆರಂಭಗೊಳ್ಳಿದೆ. ಅನಿಲ್ ರವಿಪುಡಿ ಮೊದಲ ದಿನವೇ ಆಕ್ಷನ್ ಸೀಕ್ವೆನ್ಸ್‌ನಿಂದ ಶೂಟಿಂಗ್ ಆರಂಭ ಮಾಡುತ್ತಿದ್ದಾರೆ. NBK108ನೇ ಸಿನಿಮಾಗೆ ರಾಜೀವನ್ ನೇತೃತ್ವದಲ್ಲಿ ದೊಡ್ಡ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಖ್ಯಾತ ಸಾಹಸ ನಿರ್ದೇಶಕ ವಿ. ವೆಂಕಟ್ ಮಾಸ್ಟರ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

  Balakrishna And Anil Ravipudi Combination Movie NBK 108 Launched

  ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅಂದ್ಮೇಲೆ ಅದು ಮಾಸ್ ಸ್ಟೋರಿ ಆಗಿರುತ್ತೆ. ಡೈಲಾಗ್ ಹಾಗೂ ಆಕ್ಷನ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮಾಸ್ ಆಕ್ಷನ್ ಕಥೆಯನ್ನು ರೆಡಿ ಮಾಡಿದ್ದು, ಶೂಟಿಂಗ್ ಆರಂಭ ಆಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ಕನ್ನಡದ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಸ್. ತಮನ್ ಸಂಗೀತ ನೀಡುತ್ತಿದ್ದಾರೆ.

  English summary
  Balakrishna And Anil Ravipudi Combination Movie NBK 108 Launched,Know More.
  Friday, December 9, 2022, 23:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X