Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅಖಂಡ' ಬ್ಲಾಕ್‌ಬಸ್ಟರ್ ಬಳಿಕ ಬಾಲಯ್ಯನ ವೀರ ಸಿಂಹ ರೆಡ್ಡಿ ಕಥೆಯೇನು? ಫಸ್ಟ್ ಡೇ ಕಲೆಕ್ಷನ್ ಎಷ್ಟು?
ನಂದಮೂರಿ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಇಂದು (ಜನವರಿ 12) ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಬಾಲಯ್ಯನ ಮಾಸ್ ಡೈಲಾಗ್‌ಗೆ ಬಿದ್ದ ಶಿಳ್ಳೆಗಳಿಗೆ ಥಿಯೇಟರ್‌ನಲ್ಲಿ ಭೂಕಂಪದ ವಾತಾವರಣವೇ ಸೃಷ್ಟಿಯಾಗಿದೆ. ಮಾಸ್ ಅವತಾರದಲ್ಲಿ ಬಾಲಯ್ಯ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
ಬಾಲಯ್ಯನ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಗಳಿಕೆ ತಂದು ಕೊಟ್ಟ ಸಿನಿಮಾ 'ಅಖಂಡ'. ಈ ಚಿತ್ರದ ಬಳಿಕ ಬಾಲಯ್ಯನ ಖದರ್ ಬದಲಾಗಿದೆ. ಇಮೇಜ್ ಚೇಂಜ್ ಆಗಿದೆ. ಹೀಗಾಗಿ 'ವೀರ ಸಿಂಹ ರೆಡ್ಡಿ' ಮೊದಲ ದಿನದ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
Veera
Simha
Reddy
Review
:
ಬಾಲಕೃಷ್ಣ
ಡೈಲಾಗ್ಸ್‌ಗೆ
ಥಿಯೇಟರ್
ಚಿಂದಿ..
ವೈ.ಎಸ್.ಜಗನ್
ಸರ್ಕಾರವೇ
ಟಾರ್ಗೆಟ್!
ನಂದಮುರಿ ಬಾಲಕೃಷ್ಣ ಜೊತೆ ಶ್ರತಿ ಹಾಸನ್, ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ದುನಿಯಾ ವಿಜಯ್ ಅಂತಹ ಸ್ಟಾರ್ ಕಾಸ್ ಈ ಸಿನಿಮಾದಲ್ಲಿದೆ. ಹೀಗಾಗಿ ದೊಡ್ಡ ಮಟ್ಟದಲ್ಲೇ ಬಾಕ್ಸಾಫೀಸ್ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಹಾಗಿದ್ರೆ ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರದ ಪ್ರಕಾರ, ವೀರ ಸಿಂಹ ರೆಡ್ಡಿಯ ಮೊದಲ ದಿನದ ಗಳಿಕೆ ಎಷ್ಟು?

'ವೀರ ಸಿಂಹ ರೆಡ್ಡಿ' ಸ್ಕ್ರೀನ್ಸ್ ಎಷ್ಟು?
'ಅಖಂಡ' ಸೂಪರ್ ಸಕ್ಸಸ್ ಬಳಿಕ ಬಾಲಯ್ಯ ಮಾರ್ಕೆಟ್ ಗಗನಕ್ಕೇರಿದೆ. ಹೀಗಾಗಿ 'ವೀರ ಸಿಂಹ ರೆಡ್ಡಿ' ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿತ್ತು. ಈ ಕಾರಣಕ್ಕಾಗಿಯೇ ಮೈತ್ರಿ ಮೂವಿ ಮೇಕರ್ಸ್ ವಿಶ್ವದಾದ್ಯಂತ ಸುಮಾರು 1500 ಸ್ಕ್ರೀನ್‌ಗಳಲ್ಲಿ ಬಾಲಕೃಷ್ಣ ಸಿನಿಮಾವನ್ನು ರಿಲೀಸ್ ಮಾಡಿದ್ದರು. ಆಂಧ್ರ, ತೆಲಂಗಾಣ ಎರಡೂ ರಾಜ್ಯಗಳಲ್ಲೂ ಈ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಹೀಗಾಗಿ ಫಸ್ಟ್ ಡೇ ಕಲೆಕ್ಷನ್ ಹಾಗೂ ಅಡ್ವಾನ್ಸ್ ಬುಕಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ಟ್ರೇಡ್ ಅನಲಿಸ್ಟ್‌ಗಳು ಅಂದಾಜಿ ಲೆಕ್ಕ ಹಾಕಿದ್ದಾರೆ.

ಮೊದಲ ದಿನ ಕಲೆಕ್ಷನ್ ಪ್ರಿಡಿಕ್ಷನ್ ಏನು?
ಬಾಲಕೃಷ್ಣ ಅಭಿನಯದ 107ನೇ ಸಿನಿಮಾ 'ವೀರ ಸಿಂಹ ರೆಡ್ಡಿ'ಗೆ ವಿದೇಶದಲ್ಲೂ ಭರ್ಜರಿ ಓಪನಿಂಗ್ ಸಿಕ್ಕಿದೆ ಎಂದು ವರದಿಯಾಗಿದೆ. ಅಲ್ಲದೆ ಆಂಧ್ರ, ತೆಲಂಗಾಣದ ಜೊತೆ ಬೆಂಗಳೂರಿನಲ್ಲಿಯೂ ಸುಮಾರು ಶೇ. 55ರಷ್ಟು ಚಿತ್ರಮಂದಿರಗಳು ಫುಲ್ ಆಗಿವೆ. ಹೀಗಾಗಿ 'ವೀರ ಸಿಂಹ ರೆಡ್ಡಿ'ಯ ಡೊಮೆಸ್ಟಿಕ್ ಕಲೆಕ್ಷನ್ ಸುಮಾರು 14 ಕೋಟಿ ರೂಪಾಯಿಗೂ ಅಧಿಕ ಆಗಿರಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜಿಸಿದ್ದಾರೆ.

ವಿಶ್ವದಾದ್ಯಂತ ಕಲೆಕ್ಷನ್ ಕಥೆಯೇನು?
ಇನ್ನು ವಿದೇಶದಲ್ಲೂ ತೆಲುಗು ಪ್ರೇಕ್ಷಕರು ರೊಚ್ಚಿಗೆದ್ದು ಸಿನಿಮಾ ನೋಡಿದ್ದಾರೆ. ವಿದೇಶದಲ್ಲಿ ಮೊದಲೇ ಹಲವೆಡೆ ಪ್ರೀಮಿಯರ್ ಕಂಡಿದೆ. ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಹಲವೆಡೆ ಈ ಸಿನಿಮಾ ಸಖತ ರೆಸ್ಪಾನ್ಸ್ ಸಿಕ್ಕಿದೆ ಎಂದು ವರದಿಯಾಗಿದೆ. ಅಡ್ವಾನ್ಸ್ ಬುಕಿಂಗ್ ಹಾಗೂ ಭಾರತದಾದ್ಯಂತ 'ವೀರ ಸಿಂಹ ರೆಡ್ಡಿ'ಯ ಕಲೆಕ್ಷನ್ ಆಧಾರವಾಗಿಟ್ಟುಕೊಂಟು ಟ್ರೇಡ್ ಎಕ್ಸ್‌ಪರ್ಟ್‌ಗಳು 32 ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಆದರೆ, ಇದು ಅಧಿಕೃತವಲ್ಲ. ನಿರ್ಮಾಣ ಸಂಸ್ಥೆ ಶೀಘ್ರದಲ್ಲೇ ಮೊದಲ ದಿನದ ಕಲೆಕ್ಷನ್ ರಿಲೀಸ್ ಮಾಡಬಹುದು.

ಚಿರಂಜೀವಿ ಸಿನಿಮಾ ಟಕ್ಕರ್ ಕೊಡುತ್ತಾ?
ನಾಳೆ (ಜನವರಿ 13) ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ವಾಲ್ತೇರು ವೀರಯ್ಯ' ಸಿನಿಮಾ ರಿಲೀಸ್ ಆಗಲಿದೆ. ಒಂದ್ಮೇಲೆ ಬಾಲಯ್ಯ ಸಿನಿಮಾಗಿಂತ 'ವಾಲ್ತೇರು ವೀರಯ್ಯ' ಅದ್ಭುತವಾಗಿದ್ದರೆ, 'ವೀರ ಸಿಂಹ ರೆಡ್ಡಿ' ಕಲೆಕ್ಷನ್‌ನಲ್ಲಿ ಡ್ರಾಪ್ ಆಗುವ ಸಾಧ್ಯತೆಯಿದೆ. ಆದರೆ, ಸದ್ಯಕ್ಕಿರೋ ಬಜ್ ನೋಡಿದ್ರೆ, ಇನ್ನೂ ಮೂರು ನಾಲ್ಕು ದಿನ 'ವೀರ ಸಿಂಹ ರೆಡ್ಡಿ'ಯದ್ದೇ ಕಾರುಬಾರು ನಡೆಯುವ ಸಾಧ್ಯತೆ ಹೆಚ್ವಿದೆ. ಏನೇ ಇದ್ರೂ, 'ವಾಲ್ತೇರು ವೀರಯ್ಯ' ಬಾಕ್ಸಾಫೀಸ್ ಲೆಕ್ಕಾಚಾರವನ್ನು ಉಲ್ಟಾ ಮಾಡುವ ಸಾಧ್ಯತೆಯಿದೆ.