Don't Miss!
- News
ಫೆಬ್ರವರಿ 6ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ದಕ್ಷಿಣ ಭಾರತದ 5 ಸ್ಟಾರ್‌ಗಳಿಗೆ 100 ಕೋಟಿ ಕೊಡಬೇಕು" ಎಂದ ದಿಲ್ ರಾಜು: 5 ನಟರು ಯಾರು?
ಒಂದು ದಶಕಗಳ ಹಿಂದೆ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳ ಸಂಭಾವನೆ ಈ ಮಟ್ಟಿಗೆ ಏರಿಕೆಯಾಗಿರಲಿಲ್ಲ. ಬಾಲಿವುಡ್ ಸ್ಟಾರ್‌ಗಳು ಪಡೆಯುತ್ತಿದ್ದ ಸಂಭಾವನೆಗಿಂತ ತೀರಾ ಕಡಿಮೆ ಪಡೆಯುತ್ತಿದ್ದರು. ಈಗ ಅವರನ್ನೂ ಮೀರಿಸುವ ಸಂಭಾವನೆಯನ್ನು ಕೇಳುತ್ತಿದ್ದಾರೆ. ಇದು ನಿರ್ಮಾಪಕರ ತಲೆ ನೋವಿಗೆ ಕಾರಣವಾಗಿದೆ.
ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳ ಮೇಕಿಂಗ್‌ಗೆ ನೂರಾರು ಕೋಟಿ ಖರ್ಚಾಗುತ್ತಿರೋದ್ಯಾಕೆ? ಅನ್ನೋದನ್ನು ನಿರ್ಮಾಪಕ ದಿಲ್ ರಾಜು ರಿವೀಲ್ ಮಾಡಿದ್ದಾರೆ. " ಥಿಯೇಟರ್ ಬಿಟ್ಟು ನಿರ್ಮಾಪಕರು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಇದು ಸಿನಿಮಾ ತಂಡದ ಸಂಭಾವನೆಯನ್ನು 4 ಪಟ್ಟು ಹೆಚ್ಚಾಗುವಂತೆ ಮಾಡಿದೆ. ಕಮ್ಮಿ ಅಂದರೂ ಐವರು ಸ್ಟಾರ್‌ಗಳು ಒಂದು ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ." ಎಂದು ದಿಲ್ ರಾಜು ಹೇಳಿದ್ದಾರೆ.
ರಶ್ಮಿಕಾ
ವಿರುದ್ಧ
ಕನ್ನಡ,
ತೆಲುಗು
ಮಂದಿ
ಕಿಡಿ:
ರಶ್ಮಿಕಾ
ಬೆಂಬಲಕ್ಕೆ
ನಿಂತ್ರಾ
ಅಲ್ಲು
ಅರ್ಜುನ್
ಆರ್ಮಿ?
ಬಾಲಿವುಡ್ ಸಿನಿಮಾಗಳಿಗಿಂತ ದಕ್ಷಿಣ ಭಾರತದ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ. ಬಾಕ್ಸಾಫೀಸ್‌ನಲ್ಲಿ ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡುತ್ತಿವೆ. ಈ ಕಾರಣಕ್ಕೆ ಸಂಭಾವನೆಯಲ್ಲೂ ಏರಿಕೆಯಾಗಿದೆ. ಈ ಕಾರಣಕ್ಕೆ ಟಾಲಿವುಡ್ ನಿರ್ಮಾಪಕ ದಿಲ್ ರಾಜು ಸ್ಟಾರ್‌ಗಳು 100 ಕೋಟಿ ರೂ. ಅಧಿಕ ಸಂಭಾವನೆ ಪಡೆಯುತ್ತಾರೆ ಎಂದಿದ್ದಾರೆ. ಸದ್ಯ ದಕ್ಷಿಣ ಭಾರತದಲ್ಲಿ 100 ಕೋಟಿ ಸಂಭಾವನೆ ಪಡೆಯುವ ಸೂಪರ್‌ಸ್ಟಾರ್‌ಗಳು ಯಾರು? ಅನ್ನೋ ಡಿಟೈಲ್ಸ್ ಇಲ್ಲಿದೆ.

ರಜನಿಕಾಂತ್
ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಸಂಭಾವನೆ ಬಗ್ಗೆ ಈಗಾಗಲೇ ರಿವೀಲ್ ಆಗಿದೆ. 'ಅಣ್ಣಾತ್ತೆ' ಸಿನಿಮಾಗೆ ಸುಮಾರು 100 ಕೋಟಿ ರೂ. ಸಂಭಾವನೆ ಪಡೆದಿರೋ ಬಗ್ಗೆ ವರದಿಯಾಗಿತ್ತು. 'ಅಣ್ಣಾತ್ತೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್‌ಹಿಟ್ ಆಗಿದ್ದರಿಂದ ರಜನಿಕಾಂತ್ ಮುಂದಿನ ಸಿನಿಮಾ 'ಜೈಲರ್'ನಲ್ಲಿ ಸುಮಾರು 150 ಕೋಟಿ ರೂ. ಅಧಿಕ ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿ ಕೂಡ ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದಳಪತಿ ವಿಜಯ್
ದಕ್ಷಿಣ ಭಾರತದ ಮತ್ತೊಬ್ಬ ಜನಪ್ರಿಯ ನಟ ದಳಪತಿ ವಿಜಯ್. ಈ ನಟನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತವೆ. ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕೊಟ್ಟ ದಳಪತಿ ವಿಜಯ್ ಸಂಭಾವನೆ ಏನು ಕಮ್ಮಿಯಿಲ್ಲ. ಮೂಲಗಳ ಪ್ರಕಾರ, ದಳಪತಿ ವಿಜಯ್ ಸುಮಾರು 120 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಸ್ಟಾರ್ ನಟರ ಸಂಭಾವನೆ ಬಗ್ಗೆ ಮಾತಾಡಿರೋ ನಿರ್ಮಾಪಕ ದಿಲ್ ರಾಜು ಅವರೇ ವಿಜಯ್ ನಟನೆಯ 'ವಾರಿಸು' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ತನ್ನ 67ನೇ ಸಿನಿಮಾ 130 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಡಾರ್ಲಿಂಗ್ ಪ್ರಭಾಸ್
'ಬಾಹುಬಲಿ' ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿರುವ ಪ್ರಭಾಸ್ ಸಂಭಾವನೆ ಕೂಡ 100 ಕೋಟಿ ರೂ. ದಾಟಿದೆ. ಸದ್ಯ ಇವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡಿವೆ. ಆದರೂ ಸಂಭಾವನೆಯಲ್ಲೇನೂ ಕಮ್ಮಿಯಾಗಿಲ್ಲ. 'ಸಲಾರ್', 'ಆದಿಪುರುಷ್', 'ಪ್ರಾಜೆಕ್ಟ್ ಕೆ' ಅಂತಹ ಸಿನಿಮಾಗಳು ರಿಲೀಸ್ ರೆಡಿಯಾಗಿದೆ. ಸದ್ಯ ಬಹುಬೇಡಿಕೆಯ ನಟನಾಗಿರುವ ಪ್ರಭಾಸ್ 120 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಅಲ್ಲು ಅರ್ಜುನ್
ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಬಳಿಕ ಅಲ್ಲು ಅರ್ಜುನ್ ಸಂಭಾವನೆಯಲ್ಲೂ ಏರಿಕೆಯಾಗಿದೆ. ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ 2'ಗಾಗಿ ಸುಮಾರು 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ರಾಮ್ ಚರಣ್
ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದ ಬಳಿಕ ರಾಮ್ ಚರಣ್ ಕೂಡ ಸಂಭಾವನೆಯನ್ನು ಏರಿಕೆ ಮಾಡಿಕೊಂಡಿದ್ದಾರೆ. RRR ಸಿನಿಮಾಗೆ ರಾಮ್ ಚರಣ್ 45 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆದ್ರೀಗ ಗೌತಮ್ ಟಿನ್ನನುರಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.