For Quick Alerts
  ALLOW NOTIFICATIONS  
  For Daily Alerts

  ವಿವಾದಾತ್ಮಕ ವ್ಯಕ್ತಿಯ ಬಗ್ಗೆ ಸಿನಿಮಾ: ರಾಮ್ ಗೋಪಾಲ್ ವರ್ಮಾ ಘೋಷಣೆ

  |

  ವಿವಾದಾತ್ಮಕ ವಸ್ತು, ವ್ಯಕ್ತಿಗಳ ಬದುಕನ್ನು ಸಿನಿಮಾ ರೂಪಕ್ಕೆ ತರುವುದರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮುಂದು. ಅವರ ಸಿನಿಮಾಗಳ ಪಟ್ಟಿ ತೆರೆದಾಗ ಒಂದಿಲ್ಲೊಂದು ವಿವಾದ, ಘಟನೆ ಅದರಲ್ಲಿ ಇದ್ದೇ ಇರುವುದು ಇದಕ್ಕೆ ಸಾಕ್ಷಿ.

  ಗಾಡ್ ಫಾದರ್ ಗಳಿಗೇ ಗಾಡ್ ಫಾದರ್ ಮುತ್ತಪ್ಪ ರೈ | Muthappa Rai | Ram Gopal Varma

  ಈಗ ರಾಮ್ ಗೋಪಾಲ್ ವರ್ಮಾ ಮತ್ತೊಬ್ಬ ವಿವಾದಾತ್ಮಕ ವ್ಯಕ್ತಿಯ ಜೀವನವನ್ನು ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ನಾತೂರಾಮ್ ಗೋಡ್ಸೆ ಕುರಿತು ಸಿನಿಮಾ ಮಾಡುವುದಾಗಿ ರಾಮ್ ಗೋಪಾಲ್ ವರ್ಮಾ ಬಯಸಿದ್ದಾರಂತೆ. ಇಡಿ ಚಿತ್ರವನ್ನು ಅವರು ಗೋಡ್ಸೆಯ ದೃಷ್ಟಿಕೋನದಿಂದಲೇ ಚಿತ್ರೀಕರಿಸಲಾಗುವುದು. ಹೀಗಾಗಿ ಸಿನಿಮಾದಲ್ಲಿ ಗಾಂಧೀಜಿಯ ಹಾಜರಾತಿ ಕೇವಲ ಹತ್ಯೆ ಸಂದರ್ಭದಲ್ಲಷ್ಟೇ ಇರಲಿದೆ ಎಂದಿದ್ದಾರೆ. ಮುಂದೆ ಓದಿ...

  ಗೋಡ್ಸೆ ಬಗ್ಗೆ ಅಧ್ಯಯನ

  ಗೋಡ್ಸೆ ಬಗ್ಗೆ ಅಧ್ಯಯನ

  ಗೋಡ್ಸೆಯ ಕುರಿತು ತಾವು ಸಾಕಷ್ಟು ಅಧ್ಯಯನ ಮಾಡಿದ್ದು, ಮಹಾತ್ಮ ಗಾಂಧಿಯನ್ನು ಕೊಲೆ ಮಾಡಲು ಆತ ಏಕೆ ಮತ್ತು ಹೇಗೆ ಸಂಚು ರೂಪಿಸಿದ ಮುಂತಾದವುಗಳ ಬಗ್ಗೆ ಸಂಶೋಧನೆಗಳನ್ನು ನಡೆಸಿದ್ದಾಗಿ ತಿಳಿಸಿದ್ದಾರೆ. ವಿವಿಧ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, 'ದಿ ಮ್ಯಾನ್ ಹೂ ಕಿಲ್ಡ್ ಗಾಂಧಿ' ಎಂಬ ಶೀರ್ಷಿಕೆ ಇರಲಿದೆ ಎಂದು ಹೇಳಿದ್ದಾರೆ.

  ಮಹಾತ್ಮ ಗಾಂಧಿಯ ಕೊಂದ ಗೋಡ್ಸೆ ಗೆ ಜೈ ಎಂದ ಮೆಗಾಸ್ಟಾರ್ ಸಹೋದರಮಹಾತ್ಮ ಗಾಂಧಿಯ ಕೊಂದ ಗೋಡ್ಸೆ ಗೆ ಜೈ ಎಂದ ಮೆಗಾಸ್ಟಾರ್ ಸಹೋದರ

  ಗೋಡ್ಸೆಯ ಬಗ್ಗೆ ಹೇಳಿದ್ದೇ ಬೇರೆ

  ಗೋಡ್ಸೆಯ ಬಗ್ಗೆ ಹೇಳಿದ್ದೇ ಬೇರೆ

  ಚಿಕ್ಕವನಿದ್ದಾಗ ಗೋಡ್ಸೆ ಒಬ್ಬ ಅಪರಿಚಿತ ಖಳನಾಯಕ ಮತ್ತು ಅದಕ್ಕಿಂತ ಬೇರೇನೂ ಇಲ್ಲ ಎಂದು ತಿಳಿದುಕೊಳ್ಳುವಂತೆ ಹೇಳಲಾಗುತ್ತಿತ್ತು. ಗೋಡ್ಸೆಯ ಕುರಿತು ಮಕ್ಕಳಾಗಿ ನಮಗೆ ಗೊತ್ತಾಗಿದ್ದು ಆತ ಗಾಂಧಿಯನ್ನು ಕೊಂದವನು ಎಂದಷ್ಟೇ. ಒಂದು ಕಾಲದಲ್ಲಿ ಆತ ಗಾಂಧೀಜಿಯವರ ಅನುಯಾಯಿಯಾಗಿದ್ದ. ಅಂತಹ ವ್ಯಕ್ತಿಯು ಗಾಂಧಿಯನ್ನು ಕೊಲ್ಲುವಂತೆ ಮಾಡಿದ್ದು ಏನು? ನನ್ನ ಚಿತ್ರ ಈ ವಿಷಯಗಳನ್ನು ವಿಸ್ತೃತವಾಗಿ ಹೇಳಲಿದೆ ಎಂದು ತಿಳಿಸಿದ್ದಾರೆ.

  ಗಾಂಧಿಯನ್ನು ಕೊಂದಿದ್ದು ಏಕೆ?

  ಗಾಂಧಿಯನ್ನು ಕೊಂದಿದ್ದು ಏಕೆ?

  ಒಬ್ಬ ಉಗ್ರವಾದಿಯಾಗಿ ಬದಲಾಗುವ ಮೊದಲು ಗೋಡ್ಸೆ ತನ್ನ ಇಡೀ ಜೀವನದಲ್ಲಿ ಒಮ್ಮೆಯೂ ಗನ್ ಹಿಡಿದಿರಲಿಲ್ಲ. ಗೋಡ್ಸೆಗೆ ಸ್ವಾತಂತ್ರ್ಯ ಮತ್ತು ವಿಭಜನೆ ಎರಡನ್ನೂ ಬಯಸಿದ್ದ. ಆದರೆ ಎರಡನ್ನೂ ಸಾಧಿಸಿರುವಾಗಲೂ ಆತ ಗಾಂಧಿಯನ್ನು ಏಕೆ ಕೊಲೆ ಮಾಡಿದ? ಅಸಮ್ಮತಿಗಳು ಕೊಲೆಯಂತಹ ಕೃತ್ಯಕ್ಕೆ ಪ್ರೇರಣೆ ನೀಡುವುದಿಲ್ಲ. ನಮ್ಮ ಖಜಾನೆಯಿಂದ ಭಾರಿ ಮೊತ್ತದ ಸಂಪತ್ತನ್ನು ಪಾಕಿಸ್ತಾನಕ್ಕೆ ನೀಡಬೇಕು ಎನ್ನುವ ಗಾಂಧೀಜಿ ಬೇಡಿಕೆ ಸರ್ದಾರ್ ಪಟೇಲ್ ಮತ್ತು ಇತರರಿಗೆ ಇಷ್ಟವಾಗಿರಲಿಲ್ಲ. ಆದರೆ ಅವರಿಗೆ ಗಾಂಧಿಯನ್ನು ವಿರೋಧಿಸಲು ಆಗಿರಲಿಲ್ಲ ಎಂದು ಹೇಳಿದ್ದಾರೆ.

  'ಸೆಕ್ಸ್‌-ಗಾಡ್-ಟ್ರುತ್' ನಂತರ ಮತ್ತೆ ಮಿಯಾ ಮಾಲ್ಕೊವಾ ಜೊತೆ ವರ್ಮಾ ಸಿನಿಮಾ'ಸೆಕ್ಸ್‌-ಗಾಡ್-ಟ್ರುತ್' ನಂತರ ಮತ್ತೆ ಮಿಯಾ ಮಾಲ್ಕೊವಾ ಜೊತೆ ವರ್ಮಾ ಸಿನಿಮಾ

  ನಾಗ ಬಾಬುಗೆ ಬೆಂಬಲ

  ನಾಗ ಬಾಬುಗೆ ಬೆಂಬಲ

  ಮಂಗಳವಾರ ನಾತೂರಾಮ್ ಗೋಡ್ಸೆ ಜನ್ಮದಿನಕ್ಕೆ ಶುಭಾಶಯ ಕೋರಿ, ನಿಜವಾದ ದೇಶಭಕ್ತ ಎಂದು ಹೊಗಳಿದ್ದ ತೆಲುಗು ಸ್ಟಾರ್‌ಗಳಾದ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಸಹೋದರ, ನಟ ನಾಗ ಬಾಬು ಅವರಿಗೆ ರಾಮ್ ಗೋಪಾಲ್ ವರ್ಮಾ ಬೆಂಬಲ ನೀಡಿದ್ದಾರೆ.

  ಮತ್ತೆ ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ ರಾಮ್ ಗೋಪಾಲ್ ವರ್ಮಾ!ಮತ್ತೆ ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ ರಾಮ್ ಗೋಪಾಲ್ ವರ್ಮಾ!

  English summary
  Controversial director Ram Gopal Varma said he will make a film on Nathuram Godse and it will propogate his perspective.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X