For Quick Alerts
  ALLOW NOTIFICATIONS  
  For Daily Alerts

  ಒಂದು ವರ್ಷದೊಳಗೆ ಸಹೋದರ,ತಾಯಿ, ತಂದೆ ಕಳೆದುಕೊಂಡ ಸೂಪರ್‌ಸ್ಟಾರ್ ಮಹೇಶ್ ಬಾಬು!

  |

  ಸೂಪರ್‌ಸ್ಟಾರ್ ಮಹೇಶ್ ಬಾಬುಗೆ 2022 ಕರಾಳ ವರ್ಷ ಎನಿಸುತ್ತಿದೆ. ಈ ವರ್ಷ ಮುಗಿಯುವುದರೊಳಗೆ ತಮ್ಮ ಕುಟುಂಬದ ಮೂವರು ಪ್ರಮುಖ ವ್ಯಕ್ತಿಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ವರ್ಷ ಮಹೇಶ್ ಬಾಬು ಕುಟುಂಬಕ್ಕೆ ಕರಾಳ ವರ್ಷ ಅಂತ ಸಾಬೀತಾಗಿದೆ.

  ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಇಂದು (ನವೆಂಬರ್ 15) ತಂದೆ ಕೃಷ್ಣರನ್ನ ಕಳೆದುಕೊಂಡಿದ್ದಾರೆ. ನಿನ್ನೆ (ನವೆಂಬರ್ 14) ಟಾಲಿವುಡ್ ಲೆಜೆಂಡ್ ಕೃಷ್ಣ ಅವರಿಗೆ ಹೃದಯಾಘಾತವಾಗಿತ್ತು. ಈ ಸಂಬಂಧ ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  ಎರಡು ತಿಂಗಳ ಹಿಂದಷ್ಟೇ ತಾಯಿಯನ್ನು ಕಳೆದಕೊಂಡಿದ್ದ ಮಹೇಶ್ ಬಾಬುಗೆ ತಂದೆ ಕೃಷ್ಣರ ಅಗಲಿಕೆ ಶೋಕ ಸಾಗರದಲ್ಲಿ ಮುಳುಗಿಸಿದೆ. ಟಾಲಿವುಡ್‌ ಪ್ರಿನ್ಸ್ ಮಹೇಶ್ ಬಾಬು ಈ ವರ್ಷ ಸಹೋದರ, ತಾಯಿ ಹಾಗೂ ತಂದೆಯನ್ನು ಕಳೆದುಕೊಂಡಿದ್ದಾರೆ.

  ಮಹೇಶ್ ಬಾಬು ಸಹೋದರ ರಮೇಶ್ ಬಾಬು ನಿಧನ

  ಮಹೇಶ್ ಬಾಬು ಸಹೋದರ ರಮೇಶ್ ಬಾಬು ನಿಧನ

  2022ರ ಆರಂಭದಲ್ಲಿಯೇ ಮಹೇಶ್ ಬಾಬು ಕುಟುಂಬಕ್ಕೆ ಅಘಾತವಾಗಿತ್ತು. ಹಿರಿಯ ಸಹೋದರ ರಮೇಶ್ ಬಾಬು ಜನವರಿ 8ರಂದು ಅನಾರೋಗ್ಯ ಕಾರಣದಿಂದ ಕೊನೆಯುಸಿರೆಳೆದಿದ್ದರು. ರಮೇಶ್ ಬಾಬು ಹಲವು ದಿನಗಳಿಂದ ಲಿವರ್‌ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ, ದಿಢೀರನೇ ಆರೋಗ್ಯದಲ್ಲಿ ಏರು-ಪೇರಾಗಿದ್ದರಿಂದ ಆಸ್ಪತ್ರೆ ದಾಖಲಿಸಿದರೂ, ಬದುಕುಳಿಯಲಿಲ್ಲ. ಆ ವೇಳೆ ಮಹೇಶ್ ಬಾಬುಗೆ ಕೋವಿಡ್ ಸೋಂಕು ತಗುಲಿತ್ತು.

  ತಾಯಿ ಇಂದಿಯಾ ದೇವಿ ಕೊನೆಯುಸಿರು

  ತಾಯಿ ಇಂದಿಯಾ ದೇವಿ ಕೊನೆಯುಸಿರು

  2022 ಸೆಪ್ಟೆಂಬರ್ 28ರಂದು ಮಹೇಶ್ ಬಾಬು ತಾಯಿ ಇಂದಿರಾ ದೇವಿ ಕೊನೆಯುಸಿರೆಳೆದಿದ್ದರು. ಹಲವು ದಿನಗಳಿಂದ ಇಂದಿರಾ ದೇವಿ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದಿರಾ ದೇವಿ ಅಗಲುವ ಮುನ್ನ ನಾಲ್ಕು ವಾರ ಅನಾರೋಗ್ಯಕ್ಕೆ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು. ಇಂದಿರಾ ದೇವಿ ಸೂಪರ್‌ಸ್ಟಾರ್ ಕೃಷ್ಣ ಅವರ ಮೊದಲ ಪತ್ನಿಯಾಗಿದ್ದರು. ಮಹೇಶ್ ಬಾಬು ಅಮ್ಮನ ಅಗಲಿಕೆಗೆ ಇಡೀ ಟಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದ್ದರು.

  ತಂದೆಯನ್ನೂ ಕಳೆದುಕೊಂಡ ಸೂಪರ್‌ಸ್ಟಾರ್

  ತಂದೆಯನ್ನೂ ಕಳೆದುಕೊಂಡ ಸೂಪರ್‌ಸ್ಟಾರ್

  ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ಇರುವಾಗಲೇ ತಂದೆ ಸೂಪರ್‌ಸ್ಟಾರ್ ಕೃಷ್ಣರನ್ನು ಕಳೆದುಕೊಂಡಿದ್ದಾರೆ. ಕೃಷ್ಣ ಅವರು ಸುಮಾರು 350 ಸಿನಿಮಾಗಳಲ್ಲಿ ನಟಿಸಿದ್ದರು. ಮಹೇಶ್ ಬಾಬುಗೆ ಬೆನ್ನೆಲುಬಾಗಿ ನಿಂತಿದ್ದ ತಂದೆಯನ್ನೂ ಮಹೇಶ್ ಬಾಬು ಕಳೆದುಕೊಂಡಿದ್ದಾರೆ. ಈ ವರ್ಷ ಮಹೇಶ್ ಬಾಬು ಕುಟುಂಬದ ಮೂವರು ಹಿರಿಯರನ್ನು ಕಳೆದುಕೊಂಡ ದು:ಖದಲ್ಲಿದ್ದಾರೆ.

  ಸಿನಿಮಾ ಮಹೇಶ್ ಬಾಬು ತಯಾರಿ

  ಸಿನಿಮಾ ಮಹೇಶ್ ಬಾಬು ತಯಾರಿ

  ಕಳೆದ ಕೆಲವು ದಿನಗಳಿಂದ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆಗಳನ್ನು ನಡೆಸಿದ್ದರು. ಕೆಲವು ದಿನಗಳ ಹಿಂದಷ್ಟೇ ಜಿಮ್‌ನಲ್ಲಿ ಮಹೇಶ್ ಬಾಬು ಕಸರತ್ತು ಮಾಡುತ್ತಿರುವ ಫೋಟೊಗಳು ಹರಿದಾಡಿದ್ದವು. ಮಹೇಶ್ ಬಾಬು 28ನೇ ಸಿನಿಮಾ ಇದಾಗಿದ್ದು, 10 ವರ್ಷಗಳ ಬಳಿಕ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇನ್ನೇನು ಸಿನಿಮಾ ಆರಂಭ ಆಗಬೇಕು ಅನ್ನುವಾಗಲೇ ಮಹೇಶ ಬಾಬು ತಂದೆಯನ್ನು ಕಳೆದುಕೊಂಡ ದು:ಖದಲ್ಲಿದ್ದಾರೆ.

  English summary
  In A Year Mahesh Babu's Brother Ramesh Babu, Mother Indira Devi Now Father Krishana Died, Know More.
  Tuesday, November 15, 2022, 10:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X