For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದಲ್ಲಿ ಹೊಸ ದಾಖಲೆ ನಿರ್ಮಿಸಿದ ಸೂಪರ್ ಸ್ಟಾರ್ ಮಹೇಶ್ ಬಾಬು

  |

  ತೆಲುಗಿನಲ್ಲಿ ಮಾತ್ರವಲ್ಲದೆ ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ಸೂಪರ್ ಸ್ಟಾರ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ತಮ್ಮ ಹಿಂಬಾಲಕರ ಸಂಖ್ಯೆಯನ್ನು ಅವರು 9 ಮಿಲಿಯನ್‌ಗೆ ಹೆಚ್ಚಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾ ಕಲಾವಿದರಲ್ಲಿಯೇ ಇಷ್ಟೊಂದು ಸಂಖ್ಯೆಯ ಹಿಂಬಾಲಕರು ಯಾರಿಗೂ ಇಲ್ಲ.

  ರಜನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್ ಅವರಂತಹ ಹಿರಿಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ನಟರಿಗೂ ಇಷ್ಟು ಸಂಖ್ಯೆಯಲ್ಲಿ ಟ್ವಿಟ್ಟರ್ ಫಾಲೋವರ್‌ಗಳಿಲ್ಲ ಎನ್ನುವುದು ಗಮನಾರ್ಹ ಸಂಗತಿ. 9 ಮಿಲಿಯನ್ ಮೈಲುಗಲ್ಲು ತಲುಪಲು ಬೆಂಬಲ ನೀಡಿರುವುದಕ್ಕೆ ಮಹೇಶ್ ಬಾಬು ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

  ಹಿಟ್ ನೀಡಿದ ನಿರ್ದೇಶಕನ ಚಿತ್ರದಿಂದ ಮಹೇಶ್ ಬಾಬು ಔಟ್ಹಿಟ್ ನೀಡಿದ ನಿರ್ದೇಶಕನ ಚಿತ್ರದಿಂದ ಮಹೇಶ್ ಬಾಬು ಔಟ್

  ಧನ್ಯವಾದ ಹೇಳಿದ ಮಹೇಶ್ ಬಾಬು

  '9 ಮಿಲಿಯನ್. ನನ್ನ ಎಲ್ಲ 'ಟ್ವೀಪಲ್'ಗಳಿಗೆ ಧನ್ಯವಾದಗಳು! ಈ ವಿಸ್ಮಯಕಾರಿ ಪ್ರಯಾಣದಲ್ಲಿ ಭಾಗವಾಗಿರುವ ಎಲ್ಲರಿಗೂ ಪ್ರೀತಿ ಮತ್ತು ಕೃತಜ್ಞತೆಗಳು' ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.

  ಈ ಸಾಧನೆ ಮೂಲಕ ಅವರು ಟ್ವಿಟ್ಟರ್‌ನಲ್ಲಿ ಅತ್ಯಧಿಕ ಫಾಲೋವರ್‌ಗಳನ್ನು ಹೊಂದಿರುವ ದಕ್ಷಿಣ ಭಾರತದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  ದಕ್ಷಿಣತ ಇತರೆ ನಟರು

  ದಕ್ಷಿಣತ ಇತರೆ ನಟರು

  ಮಹೇಶ್ ಬಾಬು ಅವರ ನಂತರ ಮಿಲಿಯನ್‌ಗಟ್ಟಲೆ ಫಾಲೋವರ್‌ಗಳನ್ನು ಹೊಂದಿರುವ ದಕ್ಷಿಣದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

  ಧನುಶ್- 8.9 ಮಿಲಿಯನ್

  ಸಮಂತಾ ಅಕ್ಕಿನೇನಿ- 7.8 ಮಿಲಿಯನ್

  ಮೋಹನ್‌ ಲಾಲ್- 5.9 ಮಿಲಿಯನ್

  ರಜನಿಕಾಂತ್- 5.7 ಮಿಲಿಯನ್

  ಕಮಲ್ ಹಾಸನ್- 5.8 ಮಿಲಿಯನ್

  ತ್ರಿಶಾ- 5.1 ಮಿಲಿಯನ್

  ಅಲ್ಲು ಅರ್ಜುನ್- 3.8 ಮಿಲಿಯನ್

  ಸೂರ್ಯ-5.5 ಮಿಲಿಯನ್

  ಶ್ರುತಿ ಹಾಸನ್- 7.5 ಮಿಲಿಯನ್

   ಬಾಲಿವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾ: ರಣ್ವೀರ್ ಸಿಂಗ್ ಜೊತೆ ಮಹೇಶ್ ಬಾಬು ಬಾಲಿವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾ: ರಣ್ವೀರ್ ಸಿಂಗ್ ಜೊತೆ ಮಹೇಶ್ ಬಾಬು

  ಸುದೀಪ್‌ಗೆ ಹೆಚ್ಚು ಫಾಲೋವರ್‌ಗಳು

  ಸುದೀಪ್‌ಗೆ ಹೆಚ್ಚು ಫಾಲೋವರ್‌ಗಳು

  ಕನ್ನಡದ ಯಾವ ನಟರೂ ತೆಲುಗು ಮತ್ತು ತಮಿಳು ನಟರಷ್ಟು ಟ್ವಿಟ್ಟರ್ ಫಾಲೋವರ್‌ಗಳನ್ನು ಹೊಂದಿಲ್ಲ. ಕಿಚ್ಚ ಸುದೀಪ್ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಕನ್ನಡದ ನಟರಾಗಿದ್ದು, 2 ಮಿಲಿಯನ್ ಫಾಲೋವರ್‌ಗಳು ಅವರಿಗಿದ್ದಾರೆ.

  ರಶ್ಮಿಕಾ ಫಾಲೋವರ್‌ಗಳ ಸಂಖ್ಯೆ ಏರಿಕೆ

  ರಶ್ಮಿಕಾ ಫಾಲೋವರ್‌ಗಳ ಸಂಖ್ಯೆ ಏರಿಕೆ

  ಮಹೇಶ್ ಬಾಬು ಅವರ ಹಿಂಬಾಲಕರ ಸಂಖ್ಯೆಯೇ ಅವರ ಜನಪ್ರಿಯತೆಯನ್ನು ಸಾರುತ್ತದೆ. ಅಭಿಮಾನಿಗಳನ್ನು ಹೊಂದಿರುವ ಕಾರಣಕ್ಕೆ ಮಹೇಶ್ ಬಾಬು ನಿರ್ದೇಶಕರ ನೆಚ್ಚಿನ ಹೀರೋ ಕೂಡ ಆಗಿದ್ದಾರೆ. ಅವರ ಇತ್ತೀಚಿನ 'ಸರಿಲೇರು ನೀಕುವ್ವರು' ಬ್ಲಾಕ್‌ಬಸ್ಟರ್ ಆಗಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ 146 ಕೋಟಿ ರೂ. ಗಳಿಕೆ ಕಂಡಿದೆ. ಅಂದಹಾಗೆ, ಚಿತ್ರರಂಗಕ್ಕೆ ಬಂದ ನಾಲ್ಕೇ ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ 1 ಮಿಲಿಯನ್ ಟ್ವಿಟ್ಟರ್ ಫಾಲೋವರ್‌ಗಳನ್ನು ಸಂಪಾದಿಸಿದ್ದಾರೆ.

  ಚಿರಂಜೀವಿ-ಮಹೇಶ್ ಬಾಬು ಮೆಗಾ ಸಿನಿಮಾ: ಧೂಳೆಬ್ಬಿಸಲಿದೆ ಪ್ರಾಜೆಕ್ಟ್!ಚಿರಂಜೀವಿ-ಮಹೇಶ್ ಬಾಬು ಮೆಗಾ ಸಿನಿಮಾ: ಧೂಳೆಬ್ಬಿಸಲಿದೆ ಪ್ರಾಜೆಕ್ಟ್!

  English summary
  Telugu actor Mahesh Babu become the first south star to reach 9 million followers on twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X