Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ನಟಿಸಿದ 6 ಸಿನಿಮಾಗಳು ಇವೇನೆ!
ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಪ್ರಕರಣ ಇನ್ನು ಬಿಸಿ ಬಿಸಿ ಚರ್ಚೆಯಾಗುತ್ತಲೇ ಇದೆ. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಆರೋಪ ದಕ್ಷಿಣ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ.
ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ತಮಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ. ಅಲ್ಲದೆ ಮಗನನ್ನು ತನ್ನ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆಂದು ಆರೋಪ ಮಾಡಿದ್ದರು. ಇಷ್ಟಕ್ಕೆಲ್ಲಾ ಕಾರಣ ಪವಿತ್ರಾ ಲೋಕೇಶ್ ಎಂದು ಹೇಳಿದ್ದರು. ಇದೇ ವೇಳೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗಿದ್ದ ಹೋಟೆಲ್‌ಗೆ ಹೋಗಿ ರಂಪಾಟ ಮಾಡಿದ್ದರು.
ನರೇಶ್-
ಪವಿತ್ರಾ
ಲೋಕೇಶ್
ವಿವಾದ:
ತೆಲುಗು
ನಟನ
ಮೂವರು
ಪತ್ನಿಯರ
ಹಿನ್ನೆಲೆ
ಏನು?
ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಅನ್ನುವುದನ್ನು ನರೇಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಷ್ಟಕ್ಕೂ ನರೇಶ್ ಹಾಗೂ ಪವಿತ್ರಾ ಲೋಕೇಶ್ ಕಳೆದ ಎಂಟು ವರ್ಷಗಳಿಂದ ಒಟ್ಟು 6 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾ ಮಾಹಿತಿ ಇಲ್ಲಿದೆ.
ಪವಿತ್ರಾ
ಲೋಕೇಶ್
ಮತ್ತು
ನರೇಶ್
ಮೇಲೆ
ಕಿಡಿಕಾರಿದ
ತೆಲುಗು
ನಟಿ
ಶ್ರೀರೆಡ್ಡಿ!

'ಲಕ್ಷ್ಮಿ ರಾವೇ ನಾ ಇಂಟಿಕಿ'
2014ರಲ್ಲಿ ನಾಗ ಶೌರ್ಯ ನಟಿಸಿದ್ಧ 'ಲಕ್ಷ್ಮಿ ರಾವೇ ನಾ ಇಂಟಿಕಿ' ಸಿನಿಮಾ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆಯಾಗಿ ಅಭಿನಯಿಸಿದ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ನರೇಶ್ ಹೀರೋ ನಾಗ ಶೌರ್ಯ ಅವರ ತಂದೆ ಪಾತ್ರದಲ್ಲಿ ನಟಿಸಿದ್ದರು. ಇನ್ನೊಂದು ಕಡೆ ಪವಿತ್ರಾ ಲೋಕೇಶ್ ನಟ ಆನಂದ್ ರಾವ್ ಅವರ ಪ್ರೇಮಿಯಾಗಿ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲುವಲ್ಲಿ ಸೋತಿತ್ತು. ಹೈದರಾಬಾದ್ ಹಾಗೂ ಕರ್ನಾಟಕದಲ್ಲಿ ಈ ಸಿನಿಮಾವನ್ನು ಶೂಟ್ ಮಾಡಲಾಗಿತ್ತು.

'ಮಿಡಲ್ ಕ್ಲಾಸ್ ಅಬ್ಬಾಯಿ'
2017ರಲ್ಲಿ ದಿಲ್ ರಾಜು ನಿರ್ಮಿಸಿದ್ದ 'ಮಿಡಲ್ ಕ್ಲಾಸ್ ಅಬ್ಬಾಯಿ' ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆಯಾಗಿ ನಟಿಸಿದ 2ನೇ ಸಿನಿಮಾ. ಈ ಸಿನಿಮಾದಲ್ಲಿ ನರೇಶ್ ನ್ಯಾಚುರಲ್ ಸ್ಟಾರ್ ನಾನಿಯ ಅಂಕಲ್ ಪಾತ್ರದಲ್ಲಿ ನಟಿಸಿದ್ದರು. ಇತ್ತ ಪವಿತ್ರಾ ಲೋಕೇಶ್ ವಿಲನ್ ಶಿವನ ಅಮ್ಮನಾಗಿ ಅಭಿನಯಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು.

'ಸಮ್ಮೋಹನಂ'
ಸುಧೀರ್ ಬಾಬು ಹಾಗೂ ಅದಿತಿ ರಾವ್ ಹೈದರಿಯ 'ಸಮ್ಮೋಹನಂ' ಇವರ ಮೂರನೇ ಸಿನಿಮಾ. ಇಲ್ಲಿ ನರೇಶ್ ಹೀರೊ ಸುಧೀರ್ ಬಾಬು ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದರು. ಪವಿತ್ರಾ ಲೋಕೇಶ್ ತಾಯಿಯಾಗಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಇಬ್ಬರೂ ಪತಿ-ಪತ್ನಿಯಾಗಿ ತೆರೆಮೇಲೆ ಕಂಡಿದ್ದರು.

'ಹ್ಯಾಪಿ ವೆಡ್ಡಿಂಗ್'
2018ರ ರೊಮ್ಯಾಂಟಿಕ್ ಸಿನಿಮಾ 'ಹ್ಯಾಪಿ ವೆಡ್ಡಿಂಗ್'ನಲ್ಲೂ ಜೊತೆಯಾಗಿ ನಟಿಸಿದ್ದರು. ಸುಮಂತ್ ಅಶ್ವಿನ್ ಹಾಗೂ ನಿಹಾರಿಕಾ ಕೊನಿಡೆಲಾ ಅವರ ಪೋಷಕರಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

'ಎಂಥ ಮಂಚಿವಾಡವುರಾ'
ಕಲ್ಯಾಣ್ ರಾಮ್ ಹಾಗೂ ಮೆಹ್ರೇನ್ ಜೊತೆಯಾಗಿ ನಟಿಸಿದ ರೊಮ್ಯಾಂಟಿಕ್ ಸಿನಿಮಾ 'ಎಂಥ ಮಂಚಿವಾಡವುರಾ'. ಈ ಸಿನಿಮಾದಲ್ಲಿ ಕಲ್ಯಾಣ್ ರಾಮ್ ತಂದೆಯಾಗಿ ನರೇಶ್ ನಟಿಸಿದ್ದರೆ, ರಾಮ ಶರ್ಮಾ ಪತ್ನಿಯಾಗಿ ಪವಿತ್ರಾ ಲೋಕೇಶ್ ನಟಿಸಿದ್ದರು.

'ಅಂಟೆ ಸುಂದರಾನಿಕಿ'
ನ್ಯಾಚುರಲ್ ಸ್ಟಾರ್ ನಾನಿ ಹಾಗೂ ನಜ್ರಿಯಾ ನಟನೆಯ 'ಅಂಟೆ ಸುಂದರಾನಿ' ಸಿನಿಮಾ ಈ ಜೋಡಿಯ ಆರನೇ ಸಿನಿಮಾ. ಈ ಸಿನಿಮಾದಲ್ಲೂ ನಾನಿಯ ತಂದೆಯ ಪಾತ್ರದಲ್ಲಿ ನರೇಶ್ ನಟಿಸಿದ್ದರೆ, ಇನ್ನೊಂದು ಕಡೆ ಪವಿತ್ರಾ ಲೋಕೇಶ್ ಸ್ತ್ರೀ ರೋಗ ತಜ್ಞೆಯಾಗಿ ಕಾಣಿಸಿಕೊಂಡಿದ್ದರು.