Don't Miss!
- News
ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆ; ಬಿಜೆಪಿಗೆ ಗೆಲುವು
- Sports
SRH vs PBKS: ಪಂದ್ಯ ಯಾರು ಗೆಲ್ಲಬಹುದು? ಡ್ರೀಮ್ ಟೀಂ ರಚಿಸಲು ಟಿಪ್ಸ್, ಸಂಭಾವ್ಯ ಪ್ಲೇಯಿಂಗ್ 11
- Education
IGNOU Re-registration 2022 For July Session : ಜುಲೈ ಸೆಶನ್ ಪ್ರವೇಶಾತಿಗೆ ಮರುನೊಂದಣಿ ಪ್ರಕ್ರಿಯೆ ಆರಂಭ
- Automobiles
Mercedes "ವಿಷನ್ AMG" ಕಾನ್ಸೆಪ್ಟ್ ಇವಿ ಸ್ಪೋರ್ಟ್ಸ್ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯಗಳು
- Finance
ಕೇರಳದಲ್ಲಿ ಸೆಸ್, ತೆರಿಗೆ ಇಳಿಕೆ ಬಳಿಕ ಇಂಧನ ದರ ಎಷ್ಟಾಗಿದೆ?
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಊ ಅಂಟಾವಾ..' ಹಾಡಿಗೆ ಸಮಂತಾ, ಅಲ್ಲು ಅರ್ಜುನ್ ಮತ್ತು ಗಣೇಶ್ ಆಚಾರ್ಯ ಪ್ರಿಪರೇಷನ್ ಹೇಗಿತ್ತು?
ಟಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ 'ಪುಷ್ಪ' ಸಿನಿಮಾದ ಹಾಡು ಎಲ್ಲರ ಬಾಯಲ್ಲೂ ಗುನುಗುತ್ತಿದೆ. ಅದರಲ್ಲೂ ಸಮಂತಾ ಹೆಜ್ಜೆ ಹಾಕಿದ ಹಾಡು ಸಿನಿಪ್ರಿಯರಿಗೆ ಕಿಕ್ ಕೊಟ್ಟಿತ್ತು. ಥಿಯೇಟರ್‌ನಲ್ಲಿ ಸಮಂತಾ ಮಾದಕ ನೋಟ ಬೀರುತ್ತಾ? ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ, ಥಿಯೇಟರ್‌ಗಳಲ್ಲಿ ಶಿಳ್ಳೆಗಳ ಮೇಲೆ ಶಿಳ್ಳೆಗಳು ಬೀಳಲು ಆರಂಭ ಆಗಿತ್ತು. 'ಪುಷ್ಪ' ಸಿನಿಮಾ ಗೆಲ್ಲುವುದಕ್ಕೆ ಈ ಹಾಡು ಒಂದು ಪ್ರಮುಖ ಕಾರಣ ಅಂತ ಪ್ರೇಕ್ಷಕರೇ ಹೇಳಿಬಿಟ್ಟಿದ್ದಾರೆ.
"ಊ ಅಂಟಾವಾ ಮಾವ.." ಸಾಂಗ್ ಟಾಲಿವುಡ್‌ನ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದೆ. ಸಿನಿಮಾ ಥಿಯೇಟರ್‌ಗೆ ಬಂದು. ಥಿಯೇಟರ್‌ನಿಂದ ಓಟಿಟಿಗೆ ಬಂದರೂ, ಜನರ ಬಾಯಿಯಿಂದ ಮಾತ್ರ ಈ ಹಾಡು ಮಾಯವಾಗಿಲ್ಲ. ಅದಕ್ಕೆ ಕಾರಣ ಮೂರು ಮಂದಿ. ಒಬ್ಬರು ಸಮಂತಾ, ಇನ್ನೊಬ್ಬರು ಅಲ್ಲು ಅರ್ಜುನ್. ಮತ್ತೊಬ್ಬರು ಬಾಲಿವುಡ್ ಕೊರಿಯೋ ಗ್ರಾಫರ್ ಗಣೇಶ್ ಆಚಾರ್ಯ. ಈ ಹಾಡಿನ ಗಣೇಶ್ ಆಚಾರ್ಯ ಹೇಳಿಕೊಟ್ಟ ಮೂವ್ಸ್ ಹೇಗಿತ್ತು ಅನ್ನುವ ವಿಡಿಯೋ ಈಗ ವೈರಲ್ ಆಗಿದೆ.
'ಊ ಅಂಟಾವಾ ಮಾವ..' ತೆರೆ ಹಿಂದಿನ ವಿಡಿಯೋ ವೈರಲ್
ಸಮಂತಾ ಸ್ಪೆಷಲ್ ಸಾಂಗ್ ಸೂಪರ್ ಹಿಟ್ ಆಗಿದೆ. ಅದರಂತೆ ಸೆಟ್ಟಿನಲ್ಲಿ ಬಾಲಿವುಡ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಹೇಳಿಕೊಡುವ ಸ್ಟೆಪ್ಸ್ ಕೂಡ ಅಷ್ಟೇ ಫೇಮಸ್ ಆಗಿದೆ. ವೀಕ್ಷಣೆಯಲ್ಲೂ ದಾಖಲೆ ಬರೆದ ಈ ಹಾಡಿನ ಮೇಕಿಂಗ್ ದೃಶ್ಯ ಸಿನಿಪ್ರಿಯರಿಗೆ ಬೇಜಾನ್ ಇಷ್ಟ ಆಗಿದೆ. ಈ ವಿಡಿಯೋದಲ್ಲಿ ಗಣೇಶ್ ಆಚಾರ್ಯ, ಸಮಂತಾ ಹಾಗೂ ಅಲ್ಲು ಅರ್ಜುನ್‌ಗೆ ಸಿಗರೇಟ್ ಹಚ್ಚಿಕೊಂಡು ರಗಡ್ ಲುಕ್ ಕೊಡುವ ದೃಶ್ಯವೊಂದನ್ನು ಹೇಳಿಕೊಟ್ಟಿದ್ದಾರೆ.
ರೆಟ್ರೋ ಲುಕ್‌ನಲ್ಲಿರುವ ಈ ಹಾಡು ಪ್ರೇಕ್ಷಕರಿಗೆ ಮಸ್ತ್ ಮಜಾ ಕೊಟ್ಟಿದೆ. ಪುಷ್ಪ ಸಿನಿಮಾದ ಹೈಲೈಟ್ ಈ ಹಾಡು. ಅದರಲ್ಲೂ ಈ ಮೇಕಿಂಗ್ ವಿಡಿಯೋ ನೋಡಿದರೆ, ಮತ್ತಷ್ಟು ಕಿಕ್ ಕೊಡುವುದು ಗ್ಯಾರಂಟಿ. ಇತ್ತೀಚೆಗೆ ಸಮಂತಾ ಕೂಡ ಈ ಹಾಡಿಗೆ ಕಠಿಣ ಅಭ್ಯಾಸ ನಡೆಸಿದ ವಿಡಿಯೋವನ್ನು ಶೇರ್ ಮಾಡಿದ್ದರು. ಸಮಂತಾ ಅಭಿಮಾನಿಗಳು ಈ ವಿಡಿಯೋ ನೋಡಿ ಮೆಚ್ಚುಗೆ ಸೂಚಿಸಿದ್ದರು. ಈ ಸಾಂಗಿಗೆ ಹೆಜ್ಜೆ ಹಾಕಲು ತುಂಬಾನೇ ಇಷ್ಟವಾಗುತ್ತಿದೆ ಎಂದು ಸಮಂತಾ ಹೇಳಿದ್ದರು.
ದೇವಿಶ್ರೀ ಪ್ರಸಾದ್ ಟ್ಯೂನ್ ಸಮಂತಾ ಮಾದಕ ಸ್ಟೆಪ್ಸ್?
'ಊ ಅಂಟಾವಾ, ಊಹೂಂ ಅಂಟಾವಾ' ಸಿನಿಮಾದ ಹಾಡಿಗೆ ಸಮಂತಾ ಮೊದಲು ಒಪ್ಪಿಗೆ ನೀಡಿರಲಿಲ್ಲ. ಈ ಹಾಡಿಗೆ ತಾನು ಫಿಟ್ ಆಗುತ್ತೇನೋ ಇಲ್ಲವೊ ಎಂಬುವ ಅನುಮಾನವಿತ್ತು. ಆದರೆ, ಅಲ್ಲು ಅರ್ಜುನ್ ಈ ಹಾಡಿಗೆ ಹೆಜ್ಜೆ ಹಾಕಲು ಒಪ್ಪಿಸಿದ್ದರು. ಆದರೆ, ಸಮಂತಾ ಸುಮ್ಮನೆ ಬಂದು ಹೆಜ್ಜೆ ಹಾಕಿ ಹೋಗಿಲ್ಲ. ಸೆಟ್ಟಿಗೆ ಬರುವ ಮುನ್ನ ಸಮಂತಾ ಸಾಕಷ್ಟು ಬಾರಿ ಅಭ್ಯಾಸ ನಡೆಸಿದ್ದರು. ಜಿಮ್‌ನಲ್ಲಿ ದೇಹವನ್ನು ದಂಡಿಸಿದ್ದರು. ದೇವಿಶ್ರೀ ಪ್ರಸಾದ್ ಟ್ಯೂನ್‌ಗೆ ತಕ್ಕಂತೆ ಬೆಂಡ್ ಆಗಿದ್ದರು. ಕನ್ನಡಿ ಮುಂದೆ ನಿಂತು ಗಂಟೆಗಟ್ಟಲೆ ಸ್ಟೆಪ್ಸ್ ಹಾಕಿದ್ರು.
ಪರಿಶ್ರಮಕ್ಕೆ ತಕ್ಕ ಬೆಲೆ ಸಿಕ್ಕಿದೆ ಎಂದಿದ್ದ ಸಮಂತಾ
ಸಮಂತಾ ಅಭ್ಯಾಸ ನಡೆಸಿದ ವಿಡಿಯೋದಲ್ಲಿ "ರಿಹರ್ಸಲ್ ತನ್ನ ಶಕ್ತಿ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಿತ್ತು." ಎಂದು ಹೇಳಿದ್ದರು. ಈ ವಿಡಿಯೋ ಈಗ ಸಮಂತಾ ಹಾಗೂ ಅಲ್ಲೂ ಅರ್ಜುನ್ ಒಂದು ಹಾಡಿಗೆ ಎಷ್ಟು ಪೂರ್ವಾಭ್ಯಾಸ ನಡೆಸಿದ್ದರು ಎಂಬುದನ್ನು ತೋರಿಸಿಕೊಟ್ಟಿದೆ. ಇದೇ ಕಾರಣಕ್ಕೆ 'ಊ ಅಂಟಾವಾ, ಊಹೂಂ ಅಂಟಾವಾ' ಸಿನಿಮಾದ ಹಾಡನ್ನು ರಿಲೀಸ್ ಆದಲ್ಲಿಂದ ಬೇಜಾನ್ ಸೌಂಡ್ ಮಾಡುತ್ತಿದೆ.