For Quick Alerts
  ALLOW NOTIFICATIONS  
  For Daily Alerts

  KFC ಬ್ರ್ಯಾಂಡ್ ಅಂಬಾಸಿಡರ್ ಅಲ್ಲು ಅರ್ಜುನ್: ಶೂಟಿಂಗ್ ಫೋಟೊ ವೈರಲ್!

  |

  'ಪುಷ್ಪ' ಸಿನಿಮಾ ಬಳಿಕ ಟಾಲಿವುಡ್‌ನಲ್ಲಿ ಐಕಾನ್‌ಸ್ಟಾರ್ ಅಲ್ಲು ಅರ್ಜುನ್‌ ಕ್ರೇಜ್ ದುಪ್ಪಟ್ಟಾಗಿದೆ. ಮೆಗಾಸ್ಟಾರ್ ಚಿರಂಜೀವಿಯ ಸೋದರಳಿಯ ಖದರ್ ದಿಢೀರನೇ ಡಬಲ್ ಆಗಿದೆ. 'ಗಂಗೋತ್ರಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬನ್ನಿ, ತಮ್ಮ ಸ್ಟೈಲ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಸುಕುಮಾರ್ ನಿರ್ದೇಶಿಸಿದ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ' ಇಡೀ ದೇಶದಲ್ಲಿ ಸಿನಿಪ್ರಿಯರಿಗೆ ಹುಚ್ಚು ಹಿಡಿಸಿದೆ.

  'ಪುಷ್ಪ' ಸಿನಿಮಾಗೂ ಮುನ್ನ ಅಲ್ಲು ಅರ್ಜುನ್ ಸಾಕಷ್ಟು ಜಾಹೀರಾತಿಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ 'ಪುಷ್ಪ' ಬಳಿಕ ಸುಪ್ರಸಿದ್ಧ ಬ್ರ್ಯಾಂಡ್‌ಗಳು ಅಲ್ಲು ಅರ್ಜುನ್‌ ಜೊತೆ ಒಡಂಬಡಿಕೆಗೆ ಮುಂದಾಗಿವೆ. ಇತ್ತೀಚೆಗಷ್ಟೇ ವಿಶ್ವದಾದ್ಯಂತ ಜನಪ್ರಿಯವಾಗಿರೋ ಕೆಎಫ್‌ಸಿ ಬ್ರ್ಯಾಂಡ್‌ಗೆ ಅಲ್ಲು ಅರ್ಜುನ್ ಅಂಬಾಸಿಡರ್ ಆಗಿ ಜಾಹೀರಾತು ಮಾಡ್ತಿರೋದು ಗೊತ್ತೇ ಇದೆ. ಈ ಜಾಹೀರಾತಿನ ಮೇಕಿಂಗ್ ವಿಡಿಯೋ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

  'ಪುಷ್ಪ'ರಾಜ್‌ಗೆ ಪೊಗರ್ದಸ್ತ್​​​​ ಆಫರ್: ಹಾಲಿವುಡ್ ಸೂಪರ್ ಹೀರೊ ಚಿತ್ರದಲ್ಲಿ ಅಲ್ಲು ಅರ್ಜುನ್?'ಪುಷ್ಪ'ರಾಜ್‌ಗೆ ಪೊಗರ್ದಸ್ತ್​​​​ ಆಫರ್: ಹಾಲಿವುಡ್ ಸೂಪರ್ ಹೀರೊ ಚಿತ್ರದಲ್ಲಿ ಅಲ್ಲು ಅರ್ಜುನ್?

  ಅಲ್ಲು ಅರ್ಜುನ್ ಅಂದ್ರೆ ಸ್ಟೈಲ್.. ಸ್ಟೈಲ್ ಅಂದರೆ ಅಲ್ಲು ಅರ್ಜುನ್. ಡ್ಯಾನ್ಸ್‌ನಿಂದಲೇ ಅಲ್ಲು ಅರ್ಜುನ್ ಪ್ರೇಕ್ಷಕರ ಗಮನ ಗಳಿಸಿದ್ದರು. ಅದರಲ್ಲೂ 'ಪುಷ್ಪ' ಬಳಿಕ ಭಾರತದಲ್ಲೇ ವಿಶಿಷ್ಟ ಮನ್ನಣೆ ಗಿಟ್ಟಿಸಿಕೊಂಡಿದ್ದಾರೆ. ತಮ್ಮ ವಿಶಿಷ್ಟ ಅಭಿನಯದಿಂದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.

  ಟಾಪ್ ಕಂಪನಿಗಳಿಂದ ಬೇಡಿಕೆ

  ಟಾಪ್ ಕಂಪನಿಗಳಿಂದ ಬೇಡಿಕೆ

  'ಪುಷ್ಪ' ಸಿನಿಮಾದಿಂದ ಅಲ್ಲು ಅರ್ಜುನ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಉತ್ಸಾಹ ಕುಗ್ಗಿಸಿಕೊಳ್ಳದೆ ಮುನ್ನುಗ್ಗುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬ್ರ್ಯಾಂಡ್ ಕಂಪನಿಗಳು ಅಲ್ಲು ಅರ್ಜುನ್ ಕ್ರೇಜ್ ಅನ್ನು ಬಳಸಿಕೊಳ್ಳಲು ಮುಂದಾಗಿವೆ. ಕೆಎಫ್‌ ಸಿ ಸೇರಿದಂತೆ ಟಾಪ್ ಬ್ರ್ಯಾಂಡ್‌ಗಳು 'ಪುಷ್ಪ'ರಾಜ್ ಹಿಂದೆ ಮುಗಿಬಿದ್ದಿವೆ.

  ಹೆಂಡತಿ ಪಕ್ಕ ಇರುವಾಗಲೇ ಬೇರೊಬ್ಬಳ ಜೊತೆ ಏನ್ ಮಾಡ್ತಿದ್ದೀರಾ ಅಲ್ಲು ಅರ್ಜುನ್? ವಿಡಿಯೋ ವೈರಲ್!ಹೆಂಡತಿ ಪಕ್ಕ ಇರುವಾಗಲೇ ಬೇರೊಬ್ಬಳ ಜೊತೆ ಏನ್ ಮಾಡ್ತಿದ್ದೀರಾ ಅಲ್ಲು ಅರ್ಜುನ್? ವಿಡಿಯೋ ವೈರಲ್!

  KFC ರಾಯಬಾರಿ ಅಲ್ಲು ಅರ್ಜುನ್

  KFC ರಾಯಬಾರಿ ಅಲ್ಲು ಅರ್ಜುನ್

  ಅಲ್ಲು ಅರ್ಜುನ್ ಈಗಾಗಲೇ ಹಲವು ಬ್ರ್ಯಾಂಡ್‌ಗಳಿಗೆ ರಾಯಬಾರಿಯಾಗಿದ್ದಾರೆ. Rapido, Zomato, Abhi Bas, ಅಂತಹ ಬ್ರ್ಯಾಂಡ್‌ಗಳಿಗೆ ರಾಯಭಾರಿ. ಇವುಗಳೊಂದಿಗೆ ಐಕಾನ್ ಸ್ಟಾರ್ ಇತ್ತೀಚೆಗಷ್ಟೇ ಖ್ಯಾತ ಫುಡ್ ಕಂಪನಿ ಕೆಎಫ್‌ಸಿ ಜೊತೆ ಕೂಡ ಒಡಂಬಡಿಕೆ ಮಾಡಿಕೊಂಡಿದ್ದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅಲ್ಲು ಅರ್ಜುನ್‌ಗೆ ಸಿನಿಮಾ ಅಷ್ಟೇ ಅಲ್ಲ. ಜಾಹೀರಾತು ವಲಯದಲ್ಲೂ ಬೇಡಿಕೆ ಹೆಚ್ಚಾಗಿದೆ ಎನ್ನಬಹುದು.

  ಮೇಕಿಂಗ್ ಪಿಕ್ ವೈರಲ್

  ಮೇಕಿಂಗ್ ಪಿಕ್ ವೈರಲ್

  ಅಲ್ಲು ಅರ್ಜುನ್ ಕೆಎಫ್‌ ಸಿ ಈ ಜಾಹೀರಾತಿನಲ್ಲಿ ನಟಿಸುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. KFC ಜಾಹೀರಾತಿನ ಚಿತ್ರೀಕರಣದ ವೇಳೆ ತೆಗೆದ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಂದ್ಹಾಗೆ ಈ ಕೆಎಫ್‌ಸಿ ಜಾಹೀರಾತನ್ನು ಖ್ಯಾತ ನಿರ್ದೇಶಕ ಕ್ರಿಶ್ ಜಗರ್ಲಮುಡಿ ನಿರ್ದೇಶಿಸುತ್ತಿದ್ದಾರಂತೆ.

  ನ್ಯೂಯಾರ್ಕ್‌ನಲ್ಲಿ ಲಕ್ಷ ಜನ

  ನ್ಯೂಯಾರ್ಕ್‌ನಲ್ಲಿ ಲಕ್ಷ ಜನ

  ಇತ್ತೀಚೆಗಷ್ಟೇ ನ್ಯೂಯಾರ್ಕ್‌ನಲ್ಲಿ ಭಾರತದ ಅತಿ ದೊಡ್ಡ ಪರೇಡ್ ನಡೆದಿತ್ತು. ಈ ಪರೇಡ್‌ನಲ್ಲಿ ಅಲ್ಲು ಅರ್ಜುನ್ ಗ್ರ್ಯಾಂಡ್ ಮಾರ್ಷಲ್ ಆಗಿ ಕಾರ್ಯನಿರ್ವಹಿಸಿದ್ದು ಗೊತ್ತೇ ಇದೆ. ಈ ವೇಳೆ ಅಲ್ಲು ಅರ್ಜುನ್ ಜೊತೆ ಸುಮಾರು 5 ಲಕ್ಷ ಅನಿವಾಸಿ ಭಾರತೀಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ನ್ಯೂಯಾರ್ಕ್ ಬೀದಿಗಳಲ್ಲಿ ಅನಿವಾಸಿ ಭಾರತೀಯರು ಅಲ್ಲು ಅರ್ಜುನ್ ನೋಡಲು ಮುಗಿಬಿದ್ದಿದ್ದರು.

  'ಪುಷ್ಪ 2' ಯಾವಾಗ?

  'ಪುಷ್ಪ 2' ಯಾವಾಗ?

  ನ್ಯೂಯಾರ್ಕ್‌ನಲ್ಲಿ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾ ಡೈಲಾಗ್ ಕೇಳಿ ಜನರು ಥ್ರಿಲ್ ಆಗಿದ್ದರು. ಇತ್ತ ಐಕಾನ್ ಸ್ಟಾರ್ ಅಭಿನಯದ 'ಪುಷ್ಪ 2' ಆಗಸ್ಟ್ 22 ರಂದು ಸೆಟ್ಟೇರಿದೆ. ಈ ವೇಳೆ ಅಲ್ಲು ಅರ್ಜುನ್ ಉಪಸ್ಥಿತಿ ಎದ್ದು ಕಾಣುತ್ತಿತ್ತು. ಟಾಲಿವುಡ್‌ ಮೂಲಗಳ ಪ್ರಕಾರ, 'ಪುಷ್ಪ 2' ಸೆಪ್ಟೆಂಬರ್ ತಿಂಗಳಿಂದ ಶೂಟಿಂಗ್ ಶುರುವಾಗುತ್ತಿದೆ.

  English summary
  Pushpa Star Allu Arjun KFC Brand Ad Behind The Scene Photos Goes Viral, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X