Don't Miss!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- News
ಫೆಬ್ರವರಿ 6ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಶ್ಮಿಕಾ ವಿರುದ್ಧ ಕನ್ನಡ, ತೆಲುಗು ಮಂದಿ ಕಿಡಿ: ರಶ್ಮಿಕಾ ಬೆಂಬಲಕ್ಕೆ ನಿಂತ್ರಾ ಅಲ್ಲು ಅರ್ಜುನ್ ಆರ್ಮಿ?
ರಶ್ಮಿಕಾ ಮಂದಣ್ಣ ವಿವಾದಕ್ಕೆ ಸಿಕ್ಕಿಕೊಳ್ಳದ ಕ್ಷಣವೇ ಇಲ್ಲವೇನೋ. ಏನೇ ಮಾತಾಡಿದರೂ ನ್ಯಾಷನಲ್ ಕ್ರಶ್ ಟ್ರೋಲ್‌ಗೆ ಸಿಕ್ಕು ಕ್ರಶ್ ಆಗುತ್ತಿದ್ದಾರೆ. ಹೀಗಿದ್ದರೂ, ಕೊಡಗಿನ ಕುವರಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ನೀಡಿದ ಸಂದರ್ಶನ ಕನ್ನಡಿಗರ ನಿದ್ದೆ ಕೆಡಿಸಿತ್ತು. ಹೆಸರು ಕೊಟ್ಟ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದರು. ಇದು ರಿಷಬ್ ಶೆಟ್ಟಿಯ ನಿದ್ದೆ ಕೆಡಿಸಿತ್ತು. ಕಾಂತಾರ ಯಶಸ್ಸಿನಲ್ಲಿ ಬೀಗುತ್ತಿರುವ ರಿಷಬ್ ಕೂಡ ಇಂತಹ ನಟಿಯರೊಂದಿಗೆ ಕೆಲಸ ಮಾಡುದಿಲ್ಲ ಅಂತ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.
ಸ್ಯಾಂಡಲ್‌ವುಡ್‌ನಲ್ಲಿ ಅದ್ಯಾವಾಗ ರಶ್ಮಿಕಾ ವಿರುದ್ಧ ಆಕ್ರೋಶ ವ್ಯಕ್ತವಾಯ್ತೋ, ಹಾಗೇ ತೆಲುಗು ಮಂದಿ ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ. ತನ್ನ ಕಣ್ಣಮುಂದೆ ಇಷ್ಟೆಲ್ಲಾ ನಡೆಯುತ್ತಿದ್ರೂ, ರಶ್ಮಿಕಾ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ರಷ್ಯಾಗೆ ಪಯಣ ಬೆಳೆಸಿದ್ದಾರೆ. ಅಲ್ಲೂ ರಶ್ಮಿಕಾ ಕ್ರೇಜ್ ಜೋರಾಗಿದೆ. ಇನ್ನೊಂದು ಕಡೆ ರಶ್ಮಿಕಾ ಬೆಂಬಲಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳು ನಿಂತಿದ್ದಾರೆ ಅನ್ನೋ ಮಾತು ಜೋರಾಗಿಯೇ ಓಡಾಡುತ್ತಿದೆ.

ರಶ್ಮಿಕಾ ಮಂದಣ್ಣ ಡೋಂಟ್ ಕೇರ್
ರಶ್ಮಿಕಾ ಮಂದಣ್ಣ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಕಿಡಿಕಾರುತ್ತಿದ್ದಾರೆ. ಹಾಗೇ ಟಾಲಿವುಡ್ ಮಂದಿ ಕೂಡ ರಶ್ಮಿಕಾಗೆ ವರ್ತನೆ ಬಗ್ಗೆ ಅಸಮಧಾನ ಹೊರ ಹಾಕುತ್ತಿದ್ದಾರೆ. ಈ ಮಧ್ಯೆ ಟ್ರೋಲ್‌ಗಳು, ಆಕ್ರೋಶಗಳು ಇದ್ಯಾವುದರ ಕಡೆಗೂ ರಶ್ಮಿಕಾ ಮಂದಣ್ಣ ತಲೆ ಕೆಡಿಸಿಕೊಂಡಿಲ್ಲ. ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ರಷ್ಯಾಗೆ ಹಾರಿದ್ದಾರೆ. ಅಲ್ಲಿ 'ಪುಷ್ಪ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಶ್ರೀವಲ್ಲಿ ರಶ್ಮಿಕಾಗೆ ರಷ್ಯಾದಲ್ಲಿ ಸಖತ್ ರೆಸ್ಪಾನ್ಸ್
'ಪುಷ್ಪ' ರಿಲೀಸ್ ಆಗಿ ಒಂದು ವರ್ಷ ಆಗುತ್ತಿದೆ. ಆದರೂ ಇನ್ನೂ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಸದ್ಯಕ್ಕೀಗ ರಷ್ಯಾದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿ ನಿಂತಿದೆ. ಹೀಗಾಗಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ರಷ್ಯಾದ ಮಹಿಳೆಯರು ಮಾಸ್ಕೋದ ರೆಡ್ ಸ್ಕ್ವಾರ್‌ನಲ್ಲಿ 'ಪುಷ್ಪ' ಸಿನಿಮಾದ 'ಸಾಮಿ ಸಾಮಿ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ರಶ್ಮಿಕಾ ವೃತ್ತಿಪರತೆ ಮೆಚ್ಚಿದ ಟಾಲಿವುಡ್
ಇತ್ತೀಚೆಗೆ ಕೆಲವು ಸ್ಟಾರ್ ಹೀರೊಯಿನ್‌ಗಳು ಸಿನಿಮಾ ಪ್ರಚಾರಕ್ಕೆ ಬರುವುದಿಲ್ಲ. ಅದು ಎಲ್ಲಾ ಚಿತ್ರರಂಗದಲ್ಲೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಆದರೆ, ರಶ್ಮಿಕಾ ಮಾತ್ರ 'ಪುಷ್ಪ' ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಆಗಿದ್ದರೂ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ ಹಳೆ ಸಿನಿಮಾಗಾಗಿ ರಷ್ಯಾಗೆ ತೆರಳಿದ್ದಾರೆ. ನಟಿಯ ಈ ಬದ್ಧತೆಗೆ, ವೃತ್ತಿಪರತೆಗೆ ಫ್ಯಾನ್ಸ್ ಹಾಗೂ ಟಾಲಿವುಡ್ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

ಅಲ್ಲು ಅರ್ಜುನ್ ಆರ್ಮಿ ಬೆಂಬಲ
ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗವನ್ನು ಮರೆತಿದ್ದಕ್ಕೆ ಕನ್ನಡಿಗರಲ್ಲಿ ಬೇಸರವಿದೆ. ಇನ್ನೊಂದು ಕಡೆ ಟಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಒಬ್ಬೊಬ್ಬರಾಗಿಯೇ ಕಿಡಿಕಾರುವುದಕ್ಕೆ ಆರಂಭಿಸಿದ್ದಾರೆ. ಆದರೂ, ಅಲ್ಲು ಅರ್ಜುನ್ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಕೇಳಿಬರುತ್ತಿದೆ. ಮುಂದಿನ ವರ್ಷ ರಿಲೀಸ್ ಆಗಲಿರುವ 'ವಾರಿಸು' ಹಾಗೂ 'ಪುಷ್ಪ2' ಸಿನಿಮಾಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ.