Don't Miss!
- News
ಗೋರಖನಾಥ ದೇಗುಲ ದಾಳಿ: ಆರೋಪಿ ಮುರ್ತಾಜಾ ಅಬ್ಬಾಸಿಗೆ ಮರಣದಂಡನೆ!
- Technology
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Finance
ಅದಾನಿ ಗ್ರೂಪ್ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ
- Sports
ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದ ಹಿರಿಯರ ಕ್ರಿಕೆಟ್ ತಂಡ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತ್ರಿವಿಕ್ರಮ್ ಸಿನಿಮಾಗೆ ಡಬಲ್ ಸಂಭಾವನೆಗೆ ಬೇಡಿಕೆ ಇಟ್ಟ ಮಹೇಶ್ ಬಾಬು: 100 % ಏರಿಕೆ!
ಮಹೇಶ್ ಬಾಬು ಟಾಲಿವುಡ್‌ನ ಸೂಪರ್‌ಸ್ಟಾರ್ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಮಹೇಶ್ ಬಾಬು ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ.
ಸದ್ಯ ಪ್ರಿನ್ಸ್ ಫ್ಯಾನ್ಸ್ ಕಣ್ಣೀಗ ರಾಜಮೌಳಿ ಸಿನಿಮಾ ಮೇಲಿದೆ. ಆದರೆ ಅದಕ್ಕೂ ಮುನ್ನ ತ್ರಿವಿಕ್ರಮ್ ನಿರ್ದೇಶಿಸುತ್ತಿರುವ ಮಹೇಶ್ ಬಾಬು ಸಿನಿಮಾ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಮುಂದಿನ ತಿಂಗಳು ಮಹೇಶ್ ಬಾಬು ಸಿನಿಮಾ ಗ್ರ್ಯಾಂಡ್ ಆಗಿ ಸೆಟ್ಟೇರಲು ಸಜ್ಜಾಗಿ ನಿಂತಿದೆ.
ಮಹೇಶ್
ತಂದೆಯಾಗಿ
ಸ್ಟಾರ್
ಹೀರೋ:
ಇಬ್ಬರ
ನಡುವಿನ
ವಯಸ್ಸಿನ
ಅಂತರ
ಬರೀ
ಏಳು
ವರ್ಷ!
ಇನ್ನೊಂದ್ಕಡೆ ತ್ರಿವಿಕ್ರಮ್ ನಿರ್ದೇಶನದ ಸಿನಿಮಾಗೆ ಮಹೇಶ್ ಬಾಬು ಕೇಳಿದ ಸಂಭಾವನೆ ಬಗ್ಗೆನೂ ಭಾರಿ ಚರ್ಚೆಯಾಗುತ್ತಿದೆ. ಹಿಂದಿನ ಸಿನಿಮಾ 'ಸರ್ಕಾರು ವಾರಿ ಪಾಟ'ಗೆ ಟಾಲಿವುಡ್ ಪ್ರಿನ್ಸ್ ಕೇಳಿದ ಸಂಭಾವನೆಗಿಂತ ಡಬಲ್ ಸಂಭಾವನೆ ಪಡೆಯುತ್ತಿದ್ದಾರಂತೆ. ಅಷ್ಟಕ್ಕೂ ಮಹೇಶ್ ಬಾಬು ಕೇಳಿದ ಸಂಭಾವನೆ ಎಷ್ಟು? ಈ ಹಿಂದೆ ಪಡೆಯುತ್ತಿದ್ದ ರೆಮ್ಯೂನರೇಷನ್ ಎಷ್ಟು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಮಹೇಶ್ ಬಾಬು ಸಂಭಾವನೆ ಎಷ್ಟು?
ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಜಾದು ಮಾಡಿಲ್ಲ. ನಿರೀಕ್ಷೆ ಇಟ್ಟುಕೊಂಡಷ್ಟು ಸದ್ದು ಮಾಡಿಲ್ಲ. ಆದರೂ, ಮಹೇಶ್ ಬಾಬು ಸಂಭಾವನೆ ಹೆಚ್ಚಿಸಿಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ. ಟಾಲಿವುಡ್ ಮೂಲಗಳ ಪ್ರಕಾರ, ಮಹೇಶ್ ಬಾಬು ಮುಂದಿನ ಸಿನಿಮಾಗೆ ಸಂಭಾವನೆಯನ್ನು 100 ಪರ್ಸೆಂಟ್‌ನಷ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ತ್ರಿವಿಕ್ರಮ್ ನಿರ್ದೇಶನದ ಈ ಸಿನಿಮಾಗೆ ಮಹೇಶ್ ಬಾಬು ಡಬಲ್ ಸಂಭಾವನೆ ಕೇಳಿದ್ದಾರಂತೆ.
ಮಹೇಶ್
ಬಾಬು
ಸಿನಿಮಾ
ಶೂಟಿಂಗ್‌ಗೂ
ಮುನ್ನ
1
ತಿಂಗಳು,
3
ಖಂಡಕ್ಕೆ
ಪ್ರವಾಸಕ್ಕೆ
ಹೊರಟ
ಪೂಜಾ
ಹೆಗ್ಡೆ!

100% ಸಂಭಾವನೆ ಹೆಚ್ಚಿಸಿಕೊಂಡ ಮಹೇಶ್ ಬಾಬು
ರಾಜಮೌಳಿ ಹಾಗೂ ಮಹೇಶ್ ಬಾಬುವಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗೂ ಮುನ್ನ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಅತ್ತ ರಾಜಮೌಳಿ ಕಥೆ ಹೆಣೆಯುತ್ತಿದ್ದರೆ, ಇತ್ತ ಮಹೇಶ್ ಬಾಬು-ತ್ರಿವಿಕ್ರಮ್ ಸಿನಿಮಾ ಸೆಟ್ಟೇರಲು ತುದಿಗಾಲಲ್ಲಿ ನಿಂತಿದೆ. ಇದೇ ಸಿನಿಮಾಗೆ ಟಾಲಿವುಡ್ ಸೂಪರ್‌ಸ್ಟಾರ್ ಬರೋಬ್ಬರಿ 70 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ತೆಲುಗು ಚಿತ್ರರಂಗದಲ್ಲಿ ಸದ್ಯ ಇದೇ ಸುದ್ದಿ ಬೇಜಾನ್ ಸೌಂಡ್ ಮಾಡುತ್ತಿದೆ.

ಈ ಹಿಂದಿನ ಸಂಭಾವನೆ ಎಷ್ಟು?
ಮಹೇಶ್ ಬಾಬು ಈ ಹಿಂದೆ ಪಡೆಯುತ್ತಿದ್ದ ಸಂಭಾವನೆ ಏನು ಕಮ್ಮಿಯಿಲ್ಲ. ಟಾಲಿವುಡ್‌ನ ಬೇರೆ ನಟರು ಪ್ಯಾನ್ ಇಂಡಿಯಾ ಸಿನಿಮಾ ಮುಖ ಮಾಡಿದ್ದರೂ, ಮಹೇಶ್ ಬಾಬು ಮಾತ್ರ ಅದ್ಯಾವುದರ ಬಗ್ಗೆನೂ ತಲೆಕೆಡಿಸಿಕೊಂಡಿಲ್ಲ. ಹೀಗಿದ್ದರೂ, ಮಹೇಶ್ ಬಾಬು ಸಂಭಾವನೆಯೇನು ಕಮ್ಮಿ ಪಡೆದಿಲ್ಲ. ಎಕಾನಮಿಕ್ ಟೈಮ್ಸ್ ವರದಿ ಪ್ರಕಾರ, ಮಹೇಶ್ ಬಾಬು ಒಂದು ಸಿನಿಮಾ ಸುಮಾರು 35 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.

ರಾಜಮೌಳಿ ಸಿನಿಮಾ ಕಥೆಯೇನು?
ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಬಗ್ಗೆ ಈಗಿನಿಂದಲೇ ಚರ್ಚೆ ಶುರುವಾಗಿದೆ. ಜಕ್ಕಣ್ಣ ಇನ್ನೂ ಕಥೆಯನ್ನೇ ಫೈನಲ್ ಮಾಡಿಲ್ಲ. ಅಷ್ಟರಲ್ಲೇ ಕ್ರೇಜ್ ಹೆಚ್ಚಾಗಿದೆ. ತ್ರಿವಿಕ್ರಮ್ ಸಿನಿಮಾಗೆ ಮಹೇಶ್ ಬಾಬು 70 ಕೋಟಿ ಕೇಳಿರಬೇಕಾದರೆ, ರಾಜಮೌಳಿ ಸಿನಿಮಾ 100 ಕೋಟಿ ಸಂಭಾವನೆ ಕೇಳಬಹುದು ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.