For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಸೂಪರ್ ಹಿಟ್ ಚಿತ್ರ ತೆಲುಗಿಗೆ ರೀಮೇಕ್: 'ದಿಯಾ' ಆಗಲಿದ್ದಾರಾ ಸಮಂತಾ?

  |

  ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಕೆ.ಎಸ್. ಅಶೋಕ್ ನಿರ್ದೇಶನದ 'ದಿಯಾ' ಗಲ್ಲಾಪೆಟ್ಟಿಗೆಯಲ್ಲಿ ಹಣಗಳಿಸುವ ಅವಕಾಶ ಪಡೆಯದಿದ್ದರೂ, ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾದ ಬಳಿಕ ಭರ್ಜರಿ ಹಿಟ್ ಆಯಿತು. ಅಪಾರ ಜನಮೆಚ್ಚುಗೆಗೆ ಪಾತ್ರವಾದ ಸಿನಿಮಾವನ್ನು ಪರಭಾಷೆಯ ಸಿನಿಮಾ ಅಭಿಮಾನಿಗಳೂ ವೀಕ್ಷಿಸಿ ಪ್ರಶಂಸಿಸಿದ್ದಾರೆ.

  ಈ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆದುಕೊಳ್ಳಲು ಪರಭಾಷೆಯ ನಿರ್ಮಾಪಕರು ಮುಗಿಬಿದ್ದಿದ್ದಾರೆ. ಈ ಮೂಲಕ 'ದಿಯಾ' ಗಡಿಯಾಚೆಗೆ ತೆರಳುವುದು ಖಾತರಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ ಚಿತ್ರಗಳೂ ಚಿತ್ರೀಕರಣ ನಡೆಯುತ್ತಿಲ್ಲ. ಆದರೆ ಅರ್ಧಕ್ಕೆ ಚಿತ್ರೀಕರಣ ನಿಂತ ಸಿನಿಮಾಗಳ ಬಾಕಿ ಕೆಲಸಗಳು, ಹೊಸ ಸಿನಿಮಾಗಳ ತಯಾರಿಗಳನ್ನು ಮನಯೆಲ್ಲಿಯೇ ಕುಳಿತು ನಡೆಸುತ್ತಿದ್ದಾರೆ. ಹಾಗೆಯೇ 'ದಿಯಾ' ಚಿತ್ರದ ರೀಮೇಕ್ ಕುರಿತಾದ ಮಾತುಕತೆಗಳು ಸಹ ಕ್ವಾರೆಂಟೀನ್‌ನಲ್ಲಿಯೇ ನಡೆದಿದೆ. ಈ ಸಿನಿಮಾ ತೆಲುಗಿನಲ್ಲಿ ರೀಮೇಕ್ ಆಗಲಿದೆ ಎಂಬ ಮಾಹಿತಿ ಬಂದಿದೆ. ಮುಂದೆ ಓದಿ...

  ದಿಯಾ ಪಾತ್ರಕ್ಕೆ ಸಮಂತಾ

  ದಿಯಾ ಪಾತ್ರಕ್ಕೆ ಸಮಂತಾ

  'ದಿಯಾ' ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಬಳಿಕ ಜನಮೆಚ್ಚುಗೆಗೆ ಪಾತ್ರವಾಗಿತ್ತು. ತೆಲುಗಿನ ಹೆಸರಾಂತ ನಿರ್ಮಾಪಕರೊಬ್ಬರು 'ದಿಯಾ' ಚಿತ್ರದ ರೀಮೇಕ್ ಹಕ್ಕನ್ನು ಖರೀದಿಸಿದ್ದಾರಂತೆ. 'ದಿಯಾ'ದ ಪಾತ್ರ ನಿಭಾಯಿಸಿದ್ದ ಖುಷಿ ರವಿ ಅವರ ಜಾಗಕ್ಕೆ ತೆಲುಗಿನಲ್ಲಿ ಅನುಭವಿ ನಟಿ ಸಮಂತಾ ಸೂಕ್ತ ಎಂದು ಅವರಿಗೆ ಅನಿಸಿದೆ.

  ಸೊಸೆ ಸಮಂತಾ ಅಡುಗೆಯೇ ಮಾಡಿಲ್ಲ ಎಂದ ಅತ್ತೆ ಅಮಲಾಸೊಸೆ ಸಮಂತಾ ಅಡುಗೆಯೇ ಮಾಡಿಲ್ಲ ಎಂದ ಅತ್ತೆ ಅಮಲಾ

  ದಿಯಾ ನೋಡಿ ಫಿದಾ ಆದ ಸಮಂತಾ

  ದಿಯಾ ನೋಡಿ ಫಿದಾ ಆದ ಸಮಂತಾ

  ನಿರ್ಲಿಪ್ತ ಸ್ವಭಾವದ ಯುವತಿ ಎರಡೆರೆಡು ಬಾರಿ ಪ್ರೀತಿಯಲ್ಲಿ ಬೀಳುವುದು ಮತ್ತು ಆ ಪ್ರೇಮ ಪ್ರಸಂಗಗಳಿಂದ ಉದ್ದಕ್ಕೂ ನೋವನ್ನು ಅನುಭವಿಸುವುದು ದಿಯಾ ಚಿತ್ರದ ಎಳೆ. ಈ ಚಿತ್ರವನ್ನು ಅಮೆಜಾನ್ ಪ್ರೈಮ್‌ನಲ್ಲಿ ನೋಡುವಂತೆ ನಿರ್ಮಾಪಕರು ಸಮಂತಾ ಅವರಿಗೆ ಸಲಹೆ ನೀಡಿದ್ದರಂತೆ. ಸಮಂತಾ 'ದಿಯಾ' ನೋಡಿದ್ದು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆ ಪಾತ್ರದಲ್ಲಿ ನಟಿಸಲು ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

  ಸಾಲು ಸಾಲು ರೀಮೇಕ್

  ಸಾಲು ಸಾಲು ರೀಮೇಕ್

  ಸಮಂತಾ ಇತ್ತೀಚಿನ ದಿನಗಳಲ್ಲಿ ರೀಮೇಕ್ ಚಿತ್ರಗಳಲ್ಲಿಯೇ ಹೆಚ್ಚು ನಟಿಸಿದ್ದಾರೆ. ಅವರ ಈ ಹಿಂದಿನ 'ಯೂ ಟರ್ನ್', 'ಓಹ್! ಬೇಬಿ' ಮತ್ತು 'ಜಾನು' ಚಿತ್ರಗಳು ಕೂಡ ರೀಮೇಕ್ ಆಗಿದ್ದವು. ಇವುಗಳಲ್ಲಿ 'ಓಹ್! ಬೇಬಿ' ಮಾತ್ರ ಗೆಲುವು ಕಂಡಿದ್ದರು. ಈಗ ಮತ್ತೊಂದು ರೀಮೇಕ್‌ಗೆ ಸಮಂತಾ ಮುಂದಾಗಿದ್ದಾರೆ.

  ನಾಲ್ಕನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ನಿಜ ಜೀವನದ ಜೋಡಿನಾಲ್ಕನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ನಿಜ ಜೀವನದ ಜೋಡಿ

  ಎರಡು ತಮಿಳು ಸಿನಿಮಾಗಳು

  ಎರಡು ತಮಿಳು ಸಿನಿಮಾಗಳು

  ಸಮಂತಾ ಅವರ ಎರಡು ತಮಿಳು ಚಿತ್ರಗಳ ಚಿತ್ರೀಕರಣ ಪೂರ್ಣಗೊಳ್ಳಬೇಕಿದೆ. ನಯನತಾರಾ ಮತ್ತು ವಿಜಯ್ ಸೇತುಪತಿ ಜತೆಗೆ ಅವರು 'ಕಾದು ವಾಕುಲಾ ರೆಂಡು ಕಾದಲ್' ಚಿತ್ರದಲ್ಲಿ ಹಾಗೂ ಹೊಸ ನಿರ್ದೇಶಕರ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಬೆಂಗಳೂರು ನಾಗರತ್ನಮ್ಮ ಚಿತ್ರ

  ಬೆಂಗಳೂರು ನಾಗರತ್ನಮ್ಮ ಚಿತ್ರ

  ಇದಲ್ಲದೆ ಸಿಂಗೀತಂ ಶ್ರೀನಿವಾಸ್ ನಿರ್ದೇಶನದಲ್ಲಿ ಬೆಂಗಳೂರಿನ ಸಂಗೀತ ವಿದ್ವಾಂಸರಾಗಿದ್ದ ಬೆಂಗಳೂರು ನಾಗರತ್ನಮ್ಮ ಅವರ ಜೀವನವನ್ನಾಧರಿಸಿದ ಸಿನಿಮಾದಲ್ಲಿ ನಟಿಸಲು ಸಮಂತಾ ಒಪ್ಪಿಕೊಂಡಿದ್ದಾರೆ. 'ಓಹ್ ಬೇಬಿ' ನಿರ್ದೇಶಕಿ ನಂದಿನಿ ರೆಡ್ಡಿ ನಿರ್ದೇಶನದ ಮತ್ತೊಂದು ರೀಮೇಕ್ ಚಿತ್ರದಲ್ಲಿ ಪತಿ ನಾಗ ಚೈತನ್ಯ ಜತೆಗೆ ನಾಲ್ಕನೆಯ ಬಾರಿ ಅವರು ನಟಿಸಲಿದ್ದಾರೆ ಎಂದು ಹೇಳಲಾಗಿದೆ.

  ಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆ

  English summary
  Reports says Samantha Akkineni to star in the Telugu remake of Kannada hit movie Dia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X