For Quick Alerts
  ALLOW NOTIFICATIONS  
  For Daily Alerts

  Shriya Saran: ತಾಯ್ತನದ ಬಳಿಕ ಬೀಚ್‌ನಲ್ಲಿ ಬಿಕಿನಿ ತೊಟ್ಟು ಅಡ್ಡಾಡಿದ ಶ್ರಿಯಾ ಸರಣ್: ವಿಡಿಯೋ ವೈರಲ್

  |

  ದಕ್ಷಿಣ ಭಾರತದ ದುಂಡು ಮುಖದ ಬೆಡಗಿ ಶ್ರಿಯಾ ಸರಣ್. ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಶ್ರಿಯಾ ಸರಣ್ ಅಭಿನಯಿಸಿ, ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ. ಶ್ರಿಯಾ ತೆರೆಮೇಲೆ ಹೇಗೆ ಬೇಕಾದರೂ ಬದಲಾಗುತ್ತಾರೆ. ಗ್ಲಾಮರ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಸೈ.. ಟ್ರೆಡಿಷನಲ್‌ ಲುಕ್‌ ಕೊಡುವುದಕ್ಕೂ ಜೈ.. ಆದರೆ, ಸಿನಿಮಾ ಬಿಟ್ಟು ಹೊರಗಿನ ಪ್ರಪಂಚದಲ್ಲಿ ಶ್ರಿಯಾ ಸರಣ್ ಸಿಕ್ಕಾ ಬೋಲ್ಡ್.

  ಶ್ರಿಯಾ ಸರಣ್ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಉಪೇಂದ್ರ, ಕಿಚ್ಚ ಸುದೀಪ್ ಅಭಿನಯಿಸುತ್ತಿರುವ 'ಕಬ್ಜ' ಸಿನಿಮಾದ ಇಬ್ಬರು ನಾಯಕಿಯರಲ್ಲಿ ಒಬ್ಬರು ಇವರೇ. ಕನ್ನಡ ಚಿತ್ರದಲ್ಲಿ ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಶ್ರಿಯಾ ಸರಣ್ ನಟಿಸುತ್ತಿದ್ದಾರೆ. ಹೀಗಾಗಿ ಕನ್ನಡಿಗರಿಗೂ ಈಕೆ ಚಿರಪರಿಚಿತ.

  ಶ್ರಿಯಾ ಸರಣ್ ಸಿನಿಮಾದಲ್ಲಿ ಎಷ್ಟು ಆಕ್ಟಿವ್ ಆಗಿರುತ್ತಾರೋ, ಅಷ್ಟೇ ಆಕ್ಟಿವ್ ಆಗಿ ಸೋಶಿಯಲ್ ಮೀಡಿಯಾದಲ್ಲೂ ಇರುತ್ತಾರೆ. ಗ್ಲಾಮರ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಶ್ರಿಯಾ ಸರಣ್ ಇತ್ತೀಚೆಗೆ ಬಿಕಿನಿ ವಿಡಿಯೋ ಶೇರ್ ಮಾಡಿದ್ದಾರೆ.

  ಮಾಡಲಿಂಗ್‌ನಿಂದ ಸಿನಿಮಾಗೆ ಎಂಟ್ರಿ

  ಮಾಡಲಿಂಗ್‌ನಿಂದ ಸಿನಿಮಾಗೆ ಎಂಟ್ರಿ

  ಶ್ರಿಯಾ ಸರಣ್ ಸಿನಿಮಾಗೆ ಕಾಲಿಡುವ ಮುನ್ನ ಮಾಡೆಲಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ರೂಪದರ್ಶಿಯಾಗಿಯೇ ಶ್ರಿಯಾ ಸರಣ್ ಫೇಮಸ್ ಆಗಿದ್ದರು. ಫೇಮಸ್ ಬ್ರ್ಯಾಂಡ್‌ಗಳಿಗೆ ಶ್ರಿಯಾ ರಾಯಬಾರಿಯಾಗಿದ್ದರು. ಇದೇ ವೇಳೆ 'ಇಷ್ಟಂ' ಸಿನಿಮಾಗೆ ಶ್ರಿಯಾ ನಾಯಕಿಯಾಗಿ ಆಯ್ಕೆಯಾದರು. ಬಳಿಕ 'ಹ್ಯಾಪಿನೆಸ್' ಚಿತ್ರದಲ್ಲಿ ನಟಿಸಿದ್ದರು. ಇದು ಶ್ರಿಯಾ ಸಿನಿಮಾ ಕರಿಯರ್‌ಗೆ ಮೊದಲ ಹಿಟ್ ಕೊಟ್ಟ ಸಿನಿಮಾ.

  ಶ್ರಿಯಾ ಟಾಲಿವುಡ್ ಲಕ್ಕಿ ಗರ್ಲ್

  ಶ್ರಿಯಾ ಟಾಲಿವುಡ್ ಲಕ್ಕಿ ಗರ್ಲ್


  ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಶ್ರಿಯಾ ಸರಣ್ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಕಾರಣಕ್ಕೆ ಶ್ರಿಯಾ ಸರಣ್ ಟಾಲಿವುಡ್‌ನ ಲಕ್ಕಿ ಗರ್ಲ್ ಎಂದು ಜನಪ್ರಿಯರಾಗಿದ್ದರು. ಈ ಕಾರಣಕ್ಕೆ ಶ್ರಿಯಾ ಸರಣ್ ವರ್ಷಕ್ಕೆ ಬರೋಬ್ಬರಿ ಹತ್ತು ಸಿನಿಮಾಗಳಲ್ಲಿ ನಟಿಸಿದ್ದರು. ಟಾಲಿವುಡ್‌ ಅಂಗಳದಲ್ಲಿ ಬಹಳ ದಿನಗಳವರೆಗೂ ಹಲ್‌ಚಲ್ ಎಬ್ಬಿಸಿದ್ದರು. ನಿರ್ಮಾಪಕರು ಶ್ರಿಯಾ ಕೇಳಿದಷ್ಟು ಸಂಭಾವನೆ ನೀಡಲು ಮುಂದೆ ಬಂದಿದ್ದರು.

  ಶಿಯಾ ಸರಣ್‌ರದ್ದು ಪ್ರೇಮ ವಿವಾಹ

  ಶಿಯಾ ಸರಣ್‌ರದ್ದು ಪ್ರೇಮ ವಿವಾಹ

  ಶ್ರಿಯಾ ಶರಣ್ ಬಹು ಭಾಷೆಯ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿರುವಾಗಲೇ ಶ್ರಿಯಾ ಸರಣ್ ಮಾರ್ಚ್ 19, 2018ರಲ್ಲಿ ರಷ್ಯಾದ ಬಾಯ್‌ಫ್ರೆಂಡ್ ಆಂಡ್ರೆ ಎಂಬುವವರನ್ನು ವಿವಾಹವಾದರು. ಬಳಿಕ 2021, ಅಕ್ಟೋಬರ್ 12ರಂದು ಶ್ರಿಯಾ ಸರಣ್ ಸೋಶಿಯಲ್ ಮೀಡಿಯಾದಲ್ಲಿ ರಾಧಾ ಎಂಬ ಹೆಣ್ಣು ಮಗುವಿನ ತಾಯಿ ಎಂಬ ವಿಷಯ ಘೋಷಣೆ ಮಾಡಿದ್ದರು. ಆದರೆ, ಈ ಮಗು ಜನವರಿ 10, 2021ರಂದೇ ಹುಟ್ಟಿದ್ದು, 9 ತಿಂಗಳ ಬಳಿಕ ರಿವೀಲ್ ಮಾಡಿದ್ದರು.

  ಸಿನಿಮಾಗಳಲ್ಲಿ ಶ್ರಿಯಾ ಬ್ಯುಸು

  ಸಿನಿಮಾಗಳಲ್ಲಿ ಶ್ರಿಯಾ ಬ್ಯುಸು

  ಶ್ರಿಯಾ ಸರಣ್ ಒಂದು ಕಾಲದಲ್ಲಿ ಬಿಡುವಿಲ್ಲದಷ್ಟು ಬ್ಯುಸಿಯಾಗಿದ್ದರು. ಆದರೆ, ಮದುವೆ ಬಳಿಕ ಶ್ರಿಯಾ ಹೆಚ್ಚಾಗಿ ಕಾಣಿಕೊಂಡಿಲ್ಲ. ಆದರೆ, ರಾಜಮೌಳಿ ನಿರ್ದೇಶನ RRR ಹಾಗೂ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಈಕೆ ಕೈಯಲ್ಲಿವೆ. ಶ್ರಿಯಾ ಸಿನಿಮಾಗಿಂತ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇಲ್ಲಿ ತಮ್ಮ ಫೋಟೊ, ವಿಡಿಯೋಗಳನ್ನು ನಿರಂತರವಾಗಿ ಶೇರ್ ಮಾಡುತ್ತಿದ್ದಾರೆ.

  ಸಖತ್ ಬೋಲ್ಡ್ ಶ್ರಿಯಾ ಸರಣ್

  ಸಖತ್ ಬೋಲ್ಡ್ ಶ್ರಿಯಾ ಸರಣ್


  ಬಹಳ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಶ್ರಿಯಾ ಸರಣ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಶ್ರಿಯಾ ಸರಣ್ ಆಗಾಗ್ಗೆ ತಮ್ಮ ಹಾಟ್ ಫೋಟೊಗಳನ್ನು, ವೀಡಿಯೊಗಳನ್ನು ಶೇರ್ ಮಾಡುತ್ತಲೇ ಇದ್ದಾರೆ ಪತಿ ಆಂಡ್ರೆ ಜೊತೆಗಿನ ಪ್ರವಾಸದ ಫೋಟೊಗಳನ್ನೂ ಶೇರ್ ಮಾಡಿದ್ದಾರೆ. ಇವುಗಳಲ್ಲಿ ಲಿಪ್ ಲಾಕ್‌ಗಳ ಫೋಟೋಗಳೂ ಇವೆ. ಇತ್ತೀಚೆಗೆ ಶ್ರಿಯಾ ಸರಣ್ ಶ್ರಿಯಾ ಸರಣ್ ಇತ್ತೀಚೆಗೆ ಬಿಕಿನಿ ವಿಡಿಯೋ ಶೇರ್ ಮಾಡಿದ್ದಾರೆ. ಮಗುವಿನೊಂದಿಗೆ ಬಿಕಿನಿಯಲ್ಲಿರುವ ಈ ವಿಡಿಯೋ ವೈರಲ್ ಆಗುತ್ತಿದೆ.

  English summary
  South Indian beauty actress Shriya Saran bikini video gone viral. Here is the details about Shriya Saran viral video.
  Monday, March 21, 2022, 14:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X