ರಾಜಮೌಳಿ ನಿರ್ದೇಶಿಸೋ ಮಹೇಶ್ ಬಾಬು ಸಿನಿಮಾ 28ನೆಯದ್ದಾ? ತ್ರಿವಿಕ್ರಮ್ ಸಿನಿಮಾ ಎಷ್ಟನೆಯದ್ದು?
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ' ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯದೇ ಹೋದರೂ ಅಭಿಮಾನಿಗಳನ್ನು ರಂಜಿಸೋದರಲ್ಲಿ ಹಿಂದೆ ಬಿದ್ದಿಲ್ಲ.
ಸದ್ಯ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ 28ನೇ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾ ಮುಗಿಯುತ್ತಿದ್ದಂತೆ ರಾಜಮೌಳಿ ಜೊತೆ 29ನೇ ಸಿನಿಮಾ ಆರಂಭ ಆಗಲಿದೆ ಎನ್ನಲಾಗಿತ್ತು. ಆದ್ರೀಗ ರಾಜಮೌಳಿ ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್ ಹೊರಬಿದ್ದಿದೆ.
ಮಹೇಶ್ ಬಾಬು-ರಾಜಮೌಳಿ ಸಿನಿಮಾ ಬಗ್ಗೆ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಇದು ಪ್ರಿನ್ಸ್ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಮಹೇಶ್ ಬಾಬು ಅಭಿನಯದ 28ನೇ ಹಾಗೂ 29ನೇ ಸಿನಿಮಾ ನಡುವೆ ಮೊದಲು ಯಾವುದು? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದ್ದರೂ, ಫ್ಯಾನ್ಸ್ ಮಾತ್ರ ಖುಷಿಯಾಗಿದ್ದಾರೆ.

ಟಾಲಿವುಡ್ ಸೂಪರ್‌ಸ್ಟಾರ್
ಟಾಲಿವುಡ್‌ಗೆ ಬಾಲನಟನಾಗಿ ಎಂಟ್ರಿ ಕೊಟ್ಟಿದ್ದ ಮಹೇಶ್ ಬಾಬು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ರಾಜಕುಮಾರುಡು' ಸಿನಿಮಾ ಮೂಲಕ ಹೀರೊ ಆಗಿ ಎಂಟ್ರಿ ಕೊಟ್ಟಿದ್ದ ಪ್ರಿನ್ಸ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. 'ವಂಶಿ', 'ಬಾಬಿ', 'ಒಕ್ಕಡು', 'ಪೋಕಿರಿ', 'ಕಲೇಜಾ', 'ಭರತ್ ಅನೆ ನೇನು' ಅಂತಹ ಸಿನಿಮಾಗಳಲ್ಲಿ ನಟಿಸಿ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ 'ಸರ್ಕಾರು ವಾರಿ ಪಾಟ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಟ್ಟರೆ, ಸೋಲು ಅಂತ ಕಂಡಿದ್ದು ಕಮ್ಮಿನೇ. 27 ಸಿನಿಮಾ ಗಳಲ್ಲಿ ನಟಿಸಿದ ಬಳಿಕ 28 ಹಾಗೂ 29ನೇ ಸಿನಿಮಾ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ.

ತ್ರಿವಿಕ್ರಮ್ ಜೊತೆ ಸಿನಿಮಾ
ಮಹೇಶ್ ಬಾಬು ಈಗ ತಮ್ಮ ದಾಟಿಯನ್ನು ಬದಲಾಯಿಸಿಕೊಂಡಿದ್ದಾರೆ. ತಮಿಳಿನ ದಳಪತಿ ವಿಜಯ್ ಅವರ ಹಾದಿಯನ್ನೇ ಮಹೇಶ್ ಬಾಬು ಅನುಸರಿಸಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಸದ್ಯ ಮಹೇಶ್ ಬಾಬು 28ನೇ ಸಿನಿಮಾ ಕಡೆ ಗಮನವಿಟ್ಟಿದ್ದಾರೆ. ತ್ರಿವಿಕ್ರಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಲಿದೆ ಎನ್ನಲಾಗಿದೆ.

ಪ್ರಿನ್ಸ್-ರಾಜಮೌಳಿ ಸಿನಿಮಾ ಯಾವಾಗ?
ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾ ಶೂಟಿಂಗ್ ಶುರುವಾಗಿದೆ ಅನ್ನೋ ಮಾತು ಒಂದ್ಕಡೆ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಪ್ರಿನ್ಸ್ ಹಾಗೂ ರಾಜಮೌಳಿ ಸಿನಿಮಾ ಬಗ್ಗೆನೂ ಟಾಕ್ ಶುರುವಾಗಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಬ್ಲಾಕ್‌ಬಸ್ಟರ್ ಆಗುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್. ಹೀಗಾಗಿಯೇ ಇಬ್ಬರ ಸಿನಿಮಾ ಯಾವಾಗ ಶುರುವಾಗುತ್ತೋ ಅನ್ನೋದನ್ನು ಎದುರು ನೋಡುತ್ತಿದ್ದಾರೆ. ಆ ಸಿನಿಮಾ ಬಗ್ಗೆ ಈಗ ಟಾಕ್ ಶುರುವಾಗಿದೆ.

ಸೆಪ್ಟೆಂಬರ್‌ನಲ್ಲಿ ಸಿನಿಮಾ ಶೂಟಿಂಗ್
ಮಹೇಶ್ ಬಾಬು 28ನೇ ಸಿನಿಮಾವನ್ನು ರಾಜಮೌಳಿ ನಿರ್ದೇಶಿಸುತ್ತಿದ್ದಾರೆ. 'ಬಾಹುಬಲಿ' ಹಾಗೂ RRR ಅಂತ ಸಿನಿಮಾಗಳನ್ನು ಅದ್ಧೂರಿಯಾಗಿ ನಿರ್ದೇಶಿಸಿರೋ ರಾಜಮೌಳಿ ಮತ್ತೊಂದು ದುಬಾರಿ ಸಿನಿಮಾಗೆಕೈ ಹಾಕಿದ್ದಾರೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸೆಪ್ಟೆಂಬರ್ 08ರಂದು ಶೂಟಿಂಗ್ ಆರಂಭ ಆಗಲಿದ್ಯಂತೆ. ಇನ್ನೊಂದು ಮೂಲದ ಪ್ರಕಾರ, ಸೆಪ್ಟೆಂಬರ್ 13ರಿಂದ ಮಹೇಶ್ ಬಾಬು ಶೂಟಿಂಗ್‌ನಲ್ಲೂ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಅದಕ್ಕೀಗ ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ಸಿನಿಮಾ 28ನೇಯದ್ದಾ? ಅಥವಾ 29ನೇಯದ್ದಾ? ಅನ್ನೋ ಪ್ರಶ್ನೆ ಎದ್ದಿದೆ.


Click it and Unblock the Notifications











