For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬುಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಪ್ಲ್ಯಾನ್ ಇಲ್ಲ!

  |

  ಸೂಪರ್‌ಸ್ಟಾರ್ ಮಹೇಶ್ ಬಾಬು ಕಳೆದ ಕೆಲವು ತಿಂಗಳಿಂದ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಿದ್ದಾರೆ. 'ಸರ್ಕಾರು ವಾರಿ ಪಾಟ' ಸಿನಿಮಾದ ಬಳಿಕ ಮಹೇಶ್ ಬಾಬು ಹೊಸ ಸಿನಿಮಾ ಅನೌನ್ಸ್ ಆಗಿದ್ದರೂ, ಇನ್ನೂ ಸೆಟ್ಟೇರಿಲ್ಲ. ಮೇ ತಿಂಗಳಲ್ಲಿ 'ಸರ್ಕಾರು ವಾರಿ ಪಾಟ' ರಿಲೀಸ್ ಆಗಿತ್ತು. ಅಂದಿನಿಂದ ಅವರ ಅಭಿಮಾನಿಗಳು ಹೊಸ ಸಿನಿಮಾ ಬಗ್ಗೆ ಎದುರು ನೋಡುತ್ತಲೇ ಇದ್ದಾರೆ.

  ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ಬಗ್ಗೆ ಟಾಲಿವುಡ್‌ನಲ್ಲಿ ಕುತೂಹಲವಿದೆ. ಯಾಕಂದ್ರೆ, ದಶಕಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದೆ. 'ಅಲಾ ವೈಕುಂಠಪುರಮುಲೋ' ಸಿನಿಮಾ ಸಕ್ಸಸ್ ಜೋಷ್‌ನಲ್ಲಿ ತ್ರಿವಿಕ್ರಮ್ ಇದ್ದರೆ, ಇನ್ನೊಂದು ಕಡೆ ಮಹೇಶ್ ಬಾಬು ಬಿಗ್ ಹಿಟ್ ಕೊಡುವ ತಯಾರಿ ನಡೆಸಿದ್ದಾರೆ.

  ಪ್ರಿನ್ಸ್ ಫ್ಯಾನ್ಸ್‌ಗೆ ಸರ್‌ಪ್ರೈಸ್ ನ್ಯೂಸ್: ಆ ಡೇಟ್‌ ಮೇಲೆ ಟವೆಲ್ ಹಾಕಿದ ತ್ರಿವಿಕ್ರಮ್!ಪ್ರಿನ್ಸ್ ಫ್ಯಾನ್ಸ್‌ಗೆ ಸರ್‌ಪ್ರೈಸ್ ನ್ಯೂಸ್: ಆ ಡೇಟ್‌ ಮೇಲೆ ಟವೆಲ್ ಹಾಕಿದ ತ್ರಿವಿಕ್ರಮ್!

  ಇವರಿಬ್ಬರ ಕಾಂಬಿನೇಷನ್ ಸಿನಿಮಾ ಮುಹೂರ್ತ ಆಗಿ ಹಲವು ದಿನಗಳಾಗಿವೆ. ಆದರೆ, ಇನ್ನೂ ಸಿನಿಮಾ ಸೆಟ್ಟೇರಿಲ್ಲ. ಸಿನಿಮಾ ತಡವಾಗುತ್ತಿರುವುದಕ್ಕೆ ಪ್ಯಾನ್ ಇಂಡಿಯಾ ಪ್ಲ್ಯಾನ್ ಕಾರಣ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಇತ್ತೀಚೆಗೆ ಮಹೇಶ್ ಬಾಬು ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಿಲ್ಲ ಎಂದು ಹೇಳಿದ್ದರು. ಈ ಕಾರಣಕ್ಕೆ ಅಭಿಮಾನಿಗಳಲ್ಲಿ ಮತ್ತೆ ಗೊಂದಲ ಶುರುವಾಗಿದೆ.

  ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಸೌಂಡು

  ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಸೌಂಡು

  ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿರೋದು ಗೊತ್ತೇ ಇದೆ. ಅದರಲ್ಲೂ ಟಾಲಿವುಡ್ ಸಿನಿಮಾಗಳು ವಿಶ್ವದಾದ್ಯಂತ ಬೇಜಾನ್ ಸದ್ದು ಮಾಡುತ್ತಿದೆ. ಈಗಾಗಲೇ 'ಬಾಹುಬಲಿ', 'RRR' ಹಾಗೂ 'ಪುಷ್ಪ'ದಂತಹ ಸಿನಿಮಾಗಳು ಬಾಕ್ಸಾಫೀಸ್‌ ಅನ್ನು ಕೊಳ್ಳೆ ಹೊಡೆದು ಬಂದಿವೆ. ಈಗ 'ಕಾರ್ತಿಕೇಯ 2' ಸಿನಿಮಾ ಕೂಡ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಈ ಕಾರಣಕ್ಕೆ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಆಗುತ್ತೆ ಅನ್ನೋ ಗುಲ್ಲೆದ್ದಿತ್ತು.

  ಟೈಗರ್ ಶ್ರಾಫ್ ಹೊಸ ಪ್ರೇಯಸಿಗೂ ಮಹೇಶ್ ಬಾಬುಗೂ ಹಳೆಯ ನಂಟು: ಈ ವೈರಲ್ ಆಯ್ತು ಸುದ್ದಿ!ಟೈಗರ್ ಶ್ರಾಫ್ ಹೊಸ ಪ್ರೇಯಸಿಗೂ ಮಹೇಶ್ ಬಾಬುಗೂ ಹಳೆಯ ನಂಟು: ಈ ವೈರಲ್ ಆಯ್ತು ಸುದ್ದಿ!

  ಪ್ಯಾನ್ ಇಂಡಿಯಾ ಪ್ಲ್ಯಾನ್ ಇಲ್ಲ

  ಪ್ಯಾನ್ ಇಂಡಿಯಾ ಪ್ಲ್ಯಾನ್ ಇಲ್ಲ

  ದಕ್ಷಿಣದ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ಇಂತಹ ಸಮಯದಲ್ಲಿ ಮಹೇಶ್ ಬಾಬು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಗೊಂದಲ ಟಾಲಿವುಡ್ ಮಂದಿಗಿದೆ. 'ಕಾರ್ತಿಕೇಯ 2' ಸಕ್ಸಸ್ ಬಳಿಕ ಮಹೇಶ್ ಬಾಬು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿತ್ತು. ತ್ರಿವಿಕ್ರಮ್ ಕೂಡ ಇದಕ್ಕಾಗಿಯೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾತಿತ್ತು. ಲೆಟೆಸ್ಟ್ ಮ್ಯಾಟರ್ ಏನಂದ್ರೆ, ಮಹೇಶ್ ಬಾಬು ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಿಲ್ವಂತೆ. ಪ್ಯಾನ್ ಇಂಡಿಯಾ ಮಾಡೋದೇ ಇಲ್ಲ ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.

  ಮಹೇಶ್ ಬಾಬುಗೆ ಇಂಟ್ರೆಸ್ಟ್ ಇಲ್ಲ

  ಮಹೇಶ್ ಬಾಬುಗೆ ಇಂಟ್ರೆಸ್ಟ್ ಇಲ್ಲ

  ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಮಹೇಶ್ ಬಾಬು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಅಂತ ಹಲವರು ಅಭಿಪ್ರಾಯ ಪಟ್ಟಿದ್ದರು. ಆದರೆ, ಮಹೇಶ್ ಬಾಬುಗೆ ಮಾತ್ರ ಆಸಕ್ತಿ ಇಲ್ವಂತೆ. ತ್ರಿವಿಕ್ರಮ್ ತಮಿಳುನಲ್ಲೂ ರಿಲೀಸ್ ಮಾಡೋಕೆ ಮುಂದಾಗಿದ್ದರಂತೆ. ಆದರೆ, ಮಹೇಶ್‌ ಬಾಬುಗೆ ಇಂಟ್ರೆಸ್ಟ್ ಇಲ್ಲದೆ ಇದ್ದಿದ್ದರಿಂದ ಅದನ್ನೂ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಸೂಪರ್‌ಸ್ಟಾರ್ 28ನೇ ಸಿನಿಮಾ ಸ್ಟ್ರೈಟ್ ಸಿನಿಮಾ ಎಂದು ಹೇಳಲಾಗುತ್ತಿದೆ.

  2023 ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್

  2023 ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್

  ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾ ಆದಷ್ಟು ಬೇಗ ಫಿನಿಶ್ ಆಗಲೇಬೇಕು. ಈಗಾಗಲೇ ಸಿನಿಮಾ 2023 ಏಪ್ರಿಲ್ ತಿಂಗಳಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ಇಟ್ಟುಕೊಂಡಿದೆ ಎನ್ನಲಾಗಿದೆ. ಆದರೆ, ಇನ್ನೂ ಸಿನಿಮಾ ಸೆಟ್ಟೇರದೆ ಇರೋದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಯಾಕಂದ್ರೆ ತ್ರಿವಿಕ್ರಮ್ ಸಿನಿಮಾ ಮುಗಿಯುತ್ತಿದ್ದಂತೆ ರಾಜಮೌಳಿ ಪ್ರಾಜೆಕ್ಟ್‌ ಸೆಟ್ಟೇರಲಿದೆ. ಇನ್ನೊಂದು ಕಡೆ ರಾಜಮೌಳಿ ಸಿನಿಮಾಗಾಗಿಯೇ ಪ್ಯಾನ್ ಇಂಡಿಯಾ ಮಾಡುತ್ತಿಲ್ಲ ಎಂದೂ ಹೇಳಲಾಗುತ್ತಿದೆ.

  English summary
  Super Star Mahesh Babu And Trivikram Movie Not A Pan India Movie, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X