For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಗೆಟಪ್‌ನಲ್ಲಿ ತಹಶೀಲ್ದಾರ್ ಪ್ರತ್ಯಕ್ಷ: ಜಿಲ್ಲಾಧಿಕಾರಿ ಕಂಗಾಲು!

  |

  ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ ದೇಶ ಮೂಲೆ ಮೂಲೆಯಲ್ಲೂ ಮೋಡಿ ಮಾಡುತ್ತಿದೆ. ಎಲ್ಲರ ಬಾಯಲ್ಲೂ 'ಕಾಂತಾರ' ಸಿನಿಮಾ ಬಗ್ಗೆನೇ ಚರ್ಚೆ. ಹೀಗಿರುವಾಗ ಆಂಧ್ರದಲ್ಲಿ ಒಂದು ವಿಶಿಷ್ಟ ಘಟನೆ ನಡೆದಿದೆ. ಈ ಸಿನಿಮಾದಿಂದ ಪ್ರಭಾವಿತನಾದ ತಹಶೀಲ್ದಾರ ಒಬ್ಬರು 'ಕಾಂತಾರ' ಗೆಟಪ್ ಹಾಕಿ ಅಚ್ಚರಿ ಮೂಡಿಸಿದ್ದಾರೆ.

  'ಕಾಂತಾರ' ಕೇವಲ ಕರ್ನಾಟಕದಲ್ಲಷ್ಟೇ ಮೋಡಿ ಮಾಡಿಲ್ಲ ಅನ್ನೋದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. ಕರ್ನಾಟಕ, ಹಿಂದಿ, ತೆಲುಗು ಸೇರಿದಂತೆ, ತಮಿಳು ಹಾಗೂ ಮಲಯಾಳಂನಲ್ಲೂ ಸಿನಿಮಾಗೆ ಸಖತ್ ಓಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

  ಹಾಲಿವುಡ್ ನೋಡಿ ಕಲಿಬೇಕು ಎಂದ ಅಕ್ಷಯ್‌ಗೆ 'ಕಾಂತಾರ', 'ಕೆಜಿಎಫ್ 2' ನೋಡಿ ಎಂದ ಫ್ಯಾನ್ಸ್!ಹಾಲಿವುಡ್ ನೋಡಿ ಕಲಿಬೇಕು ಎಂದ ಅಕ್ಷಯ್‌ಗೆ 'ಕಾಂತಾರ', 'ಕೆಜಿಎಫ್ 2' ನೋಡಿ ಎಂದ ಫ್ಯಾನ್ಸ್!

  ಈಗಾಗಲೇ 'ಕಾಂತಾರ' ಬಾಕ್ಸಾಫೀಸ್ ಒಂದೊಂದೇ ದಾಖಲೆಯನ್ನು ಅಳಿಸಿ ಹಾಕುತ್ತಾ ಮುನ್ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ 50 ದಿನಗಳನ್ನು ಪೂರೈಸಲಿದೆ. ಇನ್ನು ಆಂಧ್ರ, ತೆಲಂಗಾಣದಲ್ಲಿ ತಡವಾಗಿ ಸಿನಿಮಾ ಬಿಡುಗಡೆ ಮಾಡಿದ್ದರೂ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹೀಗಿರುವಾಗಲೇ ಆಂಧ್ರದ ತಹಶೀಲ್ದಾರ ಎಲ್ಲರ ಗಮನ ಸೆಳೆದಿದ್ದಾರೆ.

  'ಕಾಂತಾರ' ಗೆಟಪ್‌ನಲ್ಲಿ ಬಂದ ತಹಶೀಲ್ದಾರ್

  'ಕಾಂತಾರ' ಗೆಟಪ್‌ನಲ್ಲಿ ಬಂದ ತಹಶೀಲ್ದಾರ್

  ಸಿನಿಮಾ ರಿಲೀಸ್ ಆಗಿ 50 ದಿನಗಳನ್ನು ಸಮೀಪಿಸುತ್ತಿದೆ. ಆದರೂ, 'ಕಾಂತಾರ' ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಪ್ರೇಕ್ಷಕರಲ್ಲಿ ರಿಷಬ್ ಶೆಟ್ಟಿಯ ಪಾತ್ರ ಆ ಮಟ್ಟಿಗೆ ಪ್ರಭಾವ ಬೀರಿದೆ. ಆಂಧ್ರ ಪ್ರದೇಶದ ಗುಂಟೂರಿನ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ತೆರಿಗೆ ಇಲಾಖೆಯು ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಯಿಂದ ತಹಶೀಲ್ದಾರ್ ಸೇರಿದಂತೆ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್ ಪ್ರಸಾದ್ ಎಂಬುವವರು 'ಕಾಂತಾರ' ಗೆಟಪ್‌ನಲ್ಲಿ ಎಂಟ್ರಿ ಕೊಟ್ಟ ಜನರಿಗ ಹಾಗೂ ಜಿಲ್ಲಾಧಿಕಾರಿಗೆ ಶಾಕ್ ಕೊಟ್ಟಿದ್ದಾರೆ.

  ಜಿಲ್ಲಾಧಿಕಾರಿ ಮುಂದೆ ತಹಶೀಲ್ದಾರ್ ಡೈಲಾಗ್

  ಜಿಲ್ಲಾಧಿಕಾರಿ ಮುಂದೆ ತಹಶೀಲ್ದಾರ್ ಡೈಲಾಗ್

  ಪ್ರಸಾದ್‌ ರಾವ್ ವೃತ್ತಿಯಲ್ಲಿ ತಹಶೀಲ್ದಾರ್ ಆಗಿದ್ದರೂ ಕಲೆಯಲ್ಲಿ ಅಭಿರುಚಿಯಿದೆ. ಈ ಕಾರಣಕ್ಕೆ ಅವರು 'ಕಾಂತಾರ' ಗೆಟಪ್‌ನಲ್ಲಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದರು. 'ಕಾಂತಾರ' ವೇಷಧಾರಿಯ ತಹಶೀಲ್ದಾರ್‌ರನ್ನು ನೋಡಿ ಜಿಲ್ಲಾಧಿಕಾರಿಗೆ ಅಚ್ಚರಿಯಾಗಿದೆ. ಅಲ್ಲದೆ 'ಕಾಂತಾರ' ಸಿನಿಮಾದ ಡೈಲಾಗ್ ಬಿಟ್ಟಿದ್ದಾರೆ ಅಂತಾನೂ ವರದಿಯಾಗಿದೆ. ತಹಶೀಲ್ದಾರ್ ಪ್ರಸಾದ್ ರಾವ್ ಅವರ ಕಲೆಯನ್ನು ಮೆಚ್ಚಿದ ಜಿಲ್ಲಾಧಿಕಾರಿ ಅವರೊಂದಿಗೆ ಸೆಲ್ಫೀ ತೆಗೆದುಕೊಂಡಿದ್ದಾರೆ.

  ಆಂಧ್ರ-ತೆಲಂಗಾಣದಲ್ಲಿ ಗೆದ್ದ 'ಕಾಂತಾರ'

  ಆಂಧ್ರ-ತೆಲಂಗಾಣದಲ್ಲಿ ಗೆದ್ದ 'ಕಾಂತಾರ'

  'ಕಾಂತಾರ' ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಿ 32 ದಿನಗಳಾಗಿವೆ. ಎರಡು ತೆಲುಗು ರಾಜ್ಯಗಳು ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದೂವರೆಗೂ ಸುಮಾರು 50 ಕೋಟಿ ರೂ. ಕಲೆ ಹಾಕಿದೆ ಎಂದಿದ್ದಾ ಟ್ರೇಡ್ ಎಕ್ಸ್‌ಪರ್ಟ್ಸ್. ಇನ್ನು ತೆಲಂಗಾಣದಲ್ಲಿ 12.50 ಕೋಟಿ, ಆಂಧ್ರ ಪ್ರದೇಶದಲ್ಲಿ 15 ಕೋಟಿ ಹಾಗೇ ಓವರ್ ಸೀನ್‌ನಿಂದ 4.50 ಕೋಟಿ ರೂಪಾಯಿ ಶೇರ್ ಸಿಕ್ಕಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

  'ಕಾಂತಾರ' ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ?

  'ಕಾಂತಾರ' ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ?

  ರಿಷಬ್ ಶೆಟ್ಟಿಯ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಇನ್ನೂ ಘರ್ಜಿಸುತ್ತಲೇ ಇದೆ. ಹಿಂದಿಯಲ್ಲಿ 75 ಕೋಟಿ ಕ್ಲಬ್ ಸೇರಿದ್ದು, ಇದೂವರೆಗೂ 76 ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನುತ್ತಾರೆ ಟ್ರೇಡ್ ಎಕ್ಸ್‌ಪರ್ಟ್ಸ್. ಹಾಗೇ ವಿಶ್ವದಾದ್ಯಂತ 400 ಕೋಟಿ ರೂ. ಗುರಿ ಇಟ್ಟುಕೊಂಡಿರೊ 'ಕಾಂತಾರ' 350 ಕೋಟಿಗೂ ಅಧಿಕ ಗಳಿಕ ಕಂಡಿದೆ. ಈ ಬೆನ್ನಲ್ಲೇ ಅತೀ ಶೀಘ್ರದಲ್ಲಿಯೇ ಓಟಿಟಿಗೂ ರಿಲೀಸ್ ಆಗುತ್ತಿದೆ ಅನ್ನೋ ಮಾತು ಕೂಡ ಕೇಳಿಬರುತ್ತಿದೆ. ಈ ಬೆನ್ನಲ್ಲೇ ಕಲೆಕ್ಷನ್‌ನಲ್ಲಿ ಕೊಂಚ ಇಳಿಕೆ ಕಂಡಿದೆ ಅನ್ನೋ ಮಾತು ಕೇಳಿಬರುತ್ತಿದೆ.

  <strong>ಕರ್ನಾಟಕದಲ್ಲಿ 'ಕೆಜಿಎಫ್ 2' ಹಿಂದಿಕ್ಕಲು 'ಕಾಂತಾರ'ಗೆ ಬೇಕಿರೋದು ₹2.10 ಕೋಟಿ ಅಷ್ಟೇನಾ? ಏನಿದೆ ರಿಪೋರ್ಟ್? </strong>ಕರ್ನಾಟಕದಲ್ಲಿ 'ಕೆಜಿಎಫ್ 2' ಹಿಂದಿಕ್ಕಲು 'ಕಾಂತಾರ'ಗೆ ಬೇಕಿರೋದು ₹2.10 ಕೋಟಿ ಅಷ್ಟೇನಾ? ಏನಿದೆ ರಿಪೋರ್ಟ್?

  English summary
  Tahsildar Prasada Rao From Vizianagaram Kantara Getup Photos Goes Viral, Know More.
  Tuesday, November 15, 2022, 14:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X