For Quick Alerts
  ALLOW NOTIFICATIONS  
  For Daily Alerts

  ನ್ಯಾಚುರಲ್ ಸ್ಟಾರ್ ನಾನಿ 30ನೇ ಸಿನಿಮಾದಲ್ಲಿ 'ಸೀತಾ ರಾಮಂ' ಬ್ಯೂಟಿ ಮೃಣಾಲ್ ಠಾಕೂರ್!

  |

  2022ರಲ್ಲಿ ಟಾಲಿವುಡ್‌ಗೆ ಮಸ್ತ್ ಹಿಟ್ ಕೊಟ್ಟ ಸಿನಿಮಾ 'ಸೀತಾ ರಾಮಂ'. ದುಲ್ಖರ್ ಸಲ್ಮಾನ್ ಜೊತೆ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ನಟಿಸಿದ್ದರು. ಈ ಜೋಡಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನೇ ಮಾಡಿತ್ತು. ಮತ್ತೊಬ್ಬ ಬಾಲಿವುಡ್‌ ನಟಿಗೆ ಟಾಲಿವುಡ್‌ನಲ್ಲಿ ಗಟ್ಟಿ ನೆಲೆ ಸಿಕ್ಕಂತಾಗಿದೆ.

  'ಸೀತಾ ರಾಮಂ' ಸಿನಿಮಾ ಮೂಲಕ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ. ಅದುವೇ ತೆಲುಗುನ ನ್ಯಾಚುಲರ್ ಸ್ಟಾರ್ ನಾನಿ ಅಭಿನಯದ 30ನೇ ಸಿನಿಮಾ.

  ಅಮೆರಿಕದಲ್ಲಿ ಪವನ್-ಬಾಲಕೃಷ್ಣ ಅಭಿಮಾನಿಗಳ ನಡುವೆ ಗಲಾಟೆ, ಓರ್ವ ಬಂಧನಅಮೆರಿಕದಲ್ಲಿ ಪವನ್-ಬಾಲಕೃಷ್ಣ ಅಭಿಮಾನಿಗಳ ನಡುವೆ ಗಲಾಟೆ, ಓರ್ವ ಬಂಧನ

  ಹೊಸ ವರ್ಷದ ಆರಂಭದಲ್ಲಿಯೇ ನ್ಯಾಚುರಲ್ ಸ್ಟಾರ್ ನಾನಿಯ ಹೊಸ ಸಿನಿಮಾ ಸೆಟ್ಟೇರಿದೆ. ಇದು ನಾನಿ ನಟಿಸುತ್ತಿರುವ 30ನೇ ಸಿನಿಮಾ. ಈ ಸಿನಿಮಾ ಇಂದು (ಜನವರಿ 02) ಅಧಿಕೃತವಾಗಿ ಲಾಂಚ್ ಆಗಿದೆ. ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ವೈರ ಎಂಟರ್‌ಟೈನ್ಮೆಂಟ್ ನಾನಿ ಜೊತೆ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿತ್ತು. ಅದರಂತೆ ಇಂದು ಸಿನಿಮಾವನ್ನು ಲಾಂಚ್ ಮಾಡಿದೆ.

  ನ್ಯಾಚುರಲ್ ಸ್ಟಾರ್ ನಾನಿಯ ಮೂವತ್ತನೇ ಸಿನಿಮಾಗೆ ಶೌರ್ಯುವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ನಿರ್ದೇಶಕನಾಗಿ ಅವರಿಗೆ ಮೊದಲ ಸಿನಿಮಾ. ಇದೊಂದು ಎಮೋಶನಲ್ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಆಗಿದ್ದು, ಈ ಸಿನಿಮಾ ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾಗಿದೆ. ವಿಭಿನ್ನ ಕಥೆಯನ್ನೊಳಗೊಂಡ ಈ ಸಿನಿಮಾದಲ್ಲಿ ನಾನಿ ಜೋಡಿಯಾಗಿ 'ಸೀತಾ ರಾಮಂ' ಖ್ಯಾತಿಯ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದಾರೆ.

  Telugu Natural Star Nani 30th Movie With Mrunal Thakur Launched

  ಚೆರುಕುರಿ ವೆಂಕಟ ಮೋಹನ್, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ನಾನಿ ಮೂವತ್ತನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರತಿಭಾವಂತ ತಂತ್ರಜ್ಞರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಮಾಡುತ್ತಿದ್ರೆ, 'ಜೆರ್ಸಿ', 'ಶ್ಯಾಮ್ ಸಿಂಗ ರಾಯ್' ಬಳಿಕ ನಾನಿ ಜೊತೆ ಇದು ಅವರ ಮೂರನೇ ಸಿನಿಮಾ. 'ಹೃದಯಂ' ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡುತ್ತಿದ್ದಾರೆ.

  English summary
  Telugu Natural Star Nani 30th Movie With Mrunal Thakur Launched After Sita Ramam, Know More.
  Monday, January 2, 2023, 23:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X