Don't Miss!
- News
Budget 2023: ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯನ್ನು ಲೋಕಸಭೆಯಲ್ಲಿ ವೀಕ್ಷಿಸಿದ ಪುತ್ರಿ, ಸಂಬಂಧಿಕರು- ಪತಿ ಗೈರು
- Sports
ENG vs SA ODI: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ: ಸರಣಿ ವೈಟ್ವಾಶ್ ಮಾಡುವ ಗುರಿ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇವಲ 8 ದಿನಗಳಲ್ಲಿಯೇ ತನ್ನದೇ 'ಅಖಂಡ' ಸಿನಿಮಾ ಬಾಕ್ಸಾಫೀಸ್ ದಾಖಲೆ ಮುರಿದ ಬಾಲಕೃಷ್ಣ
ಒಂದರ ಹಿಂದೊಂದು ಸೋಲುಗಳನ್ನುಂಡಿದ್ದ ಬಾಲಕೃಷ್ಣಗೆ ಭರ್ಜರಿ ಗೆಲುವು ಕೊಟ್ಟಿದ್ದು 'ಅಖಂಡ'. ಈ ಸಿನಿಮಾ ನಿರ್ದೇಶಕ ಬೋಯಪಾಟಿ ಶೀನುಗೂ ಭರ್ಜರಿ ಸಕ್ಸಸ್ ಕೊಟ್ಟ ಸಿನಿಮಾ ಆಗಿತ್ತು. 'ಅಖಂಡ' ಗೆಲುವಿನ ಬಳಿಕ 'ಲೆಜೆಂಡ್' ಬಾಲಕೃಷ್ಣ ಖದರ್ ಕೂಡ ಬದಲಾಗಿತ್ತು.
ಈ ಸಿನಿಮಾ ಗೆಲುವಿನ ಬೆನ್ನಲ್ಲೇ ಬಾಲಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದರಲ್ಲೊಂದು 'ವೀರ ಸಿಂಹ ರೆಡ್ಡಿ'. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿ, ಕಳೆದ ವಾರವಷ್ಟೇ ಬಿಡುಗಡೆ ಮಾಡಿದ್ದರು. ಆರಂಭದಲ್ಲಿ ಭರ್ಜರಿ ಗಳಿಕೆ ಕಂಡಿದ್ದ ಈ ಸಿನಿಮಾ ನಂತರ ದಿನಗಳಲ್ಲಿ ಹೆಚ್ಚೇನು ಮೋಡಿ ಮಾಡಿಲ್ಲ.
'ವಾಲ್ತೇರು
ವೀರಯ್ಯ'
Vs
'ವೀರ
ಸಿಂಹ
ರೆಡ್ಡಿ':ಸಂಕ್ರಾಂತಿ
ವೀಕೆಂಡ್‌ನಲ್ಲಿ
ಗೆದ್ದೋರು
ಯಾರು?
ಥಿಯೇಟರ್‌ಗಳಲ್ಲಿ ಹೆಚ್ಚೇನೂ ಮೋಡಿ ಮಾಡದೇ ಹೋದರೂ, ಬಾಲಕೃಷ್ಣ ಸಿನಿಮಾ 'ವೀರ ಸಿಂಹ ರೆಡ್ಡಿ' ಅವರದ್ದೇ 'ಅಖಂಡ' ಸಿನಿಮಾದ ದಾಖಲೆಯನ್ನು ಉಡೀಸ್ ಮಾಡಿದೆ. ಅದಷ್ಟಕ್ಕೂ ಎಂಟೇ ದಿನಗಳಲ್ಲಿ ಚಿಂದಿ ಉಡಾಯಿಸಿದ 'ವೀರ ಸಿಂಹ ರೆಡ್ಡಿ' ಕಲೆಕ್ಷನ್ ಎಷ್ಟು ಅನ್ನೋದನ್ನು ನೋಡೋಣ ಬನ್ನಿ.

ಬಾಲಯ್ಯನ 'ಅಖಂಡ' ಗಳಿಕೆ ಎಷ್ಟು?
ಟಾಲಿವುಡ್‌ನ ಮಾಸ್ ಸಿನಿಮಾಗಳ ಕಿಂಗ್ ಬಾಲಕೃಷ್ಣ. ಇವರ ಡೈಲಾಗ್‌ಗೆ, ಆಕ್ಷನ್‌ಗೆ ಡ್ಯಾನ್ಸ್ ಸ್ಪೀಡ್‌ಗೆ ಮರುಳಾಗದೇ ಇದ್ದವರು ಕಡಿಮೆನೇ. ಆದರೂ, ಒಂದಿಷ್ಟು ಸೋಲಿನ ಬಳಿಕ ಬಾಲಕೃಷ್ಣ ಸ್ಟ್ರಾಂಗ್ ಆಗಿಯೇ ಕಮ್‌ಬ್ಯಾಕ್ ಮಾಡಿದ್ದರು. ಅದುವೇ 'ಅಖಂಡ' ಈ ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಸುಮಾರು 120 ಕೋಟಿ ರೂ.ಯನ್ನು ಕಲೆ ಹಾಕಿತ್ತು. ಬಾಲಕೃಷ್ಣ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಅನ್ನೋ ಹೆಗ್ಗಳಿಕೆ ಗಳಿಸಿತ್ತು. ಈಗ ಈ ಸಿನಿಮಾದ ದಾಖಲೆಯನ್ನು 'ವೀರ ಸಿಂಹ ರೆಡ್ಡಿ' ಉಡೀಸ್ ಮಾಡಿದೆ.

8 ದಿನಗಳ 'ವೀರ ಸಿಂಹ ರೆಡ್ಡಿ' ಗಳಿಕೆ ಎಷ್ಟು?
ಬಾಲಕೃಷ್ಣ 107ನೇ ಸಿನಿಮಾ 'ವೀರ ಸಿಂಹ ರೆಡ್ಡಿ' ಬಿಡುಗಡೆಯಾಗಿ ಕೇವಲ ಎಂಟು ದಿನಗಳಾಗಿವೆ. ಮಾಸ್ ಕಮ್ ಆಕ್ಷನ್ ಸಿನಿಮಾ ಕೇವಲ 8 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ದರ್ಬಾರ್ ಮಾಡಿತ್ತು. ವಿಶ್ವದಾದ್ಯಂತ 'ವೀರ ಸಿಂಹ ರೆಡ್ಡಿ' ಸುಮಾರು 121 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅದೇ ಕೇವಲ ಭಾರತದಲ್ಲಿ ಸುಮಾರು 105.02 ಕೋಟಿ ರೂ.(Gross) ಲೂಟಿ ಮಾಡಿದೆ. ಅದೇ ನೆಟ್ ಕಲೆಕ್ಷನ್ 89 ಕೋಟಿ ರೂ. ಎಂದು ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ.

'ಅಖಂಡ' ದಾಖಲೆ 8 ದಿನಗಳಲ್ಲಿ ಉಡೀಸ್
ಬಾಲಕೃಷ್ಣ ಅಭಿನಯದ 'ಅಖಂಡ' ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಸುಮಾರು 120 ಕೋಟಿ. ಅಂತದ್ರಲ್ಲಿ ಈ ದಾಖಲೆಯನ್ನು ಬಾಲಕೃಷ್ಣ ಅವರದ್ದೇ ಸಿನಿಮಾ 'ವೀರ ಸಿಂಹ ರೆಡ್ಡಿ' ಉಡೀಸ್ ಮಾಡಿದೆ. ಬಾಲಕೃಷ್ಣ ಸಿನಿಮಾ ಮೊದಲ ದಿನ ಸುಮಾರು 33 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆ ಬಳಿಕ ಸಿನಿಮಾ ಕಲೆಕ್ಷನ್ ಡ್ರಾಪ್ ಆಗಿತ್ತು. ಸಂಕ್ರಾಂತಿ ಹಬ್ಬದಂದು ಹೆಚ್ಚೇನು ಮೋಡಿ ಮಾಡಿರಲಿಲ್ಲ. ಒಂದು ವೇಳೆ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಜೋರಾಗಿದ್ದರೆ, ಸಿನಿಮಾ ಇನ್ನಷ್ಟು ಕಲೆಕ್ಷನ್ ಮಾಡುತ್ತಿತ್ತು.

ಚಿರು,ಬಾಲಯ್ಯ ಸಿನಿಮಾದಿಂದ 200 ಕೋಟಿ ರೂ.
ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ' ಹಾಗೂ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 'ವಾಲ್ತೇರು ವೀರಯ್ಯ' ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿತ್ತು. ಬಾಲಯ್ಯನ ಸಿನಿಮಾಗಿಂತ 'ವಾಲ್ತೇರು ವೀರಯ್ಯ' ಕಲೆಕ್ಷನ್ ಜೋರಾಗಿದೆ. 7 ದಿನಗಳಲ್ಲಿ ಚಿರು ಸಿನಿಮಾ ಸುಮಾರು 140 ಕೋಟಿ ಗಳಿಸಿದೆ. ಎರಡೂ ಸಿನಿಮಾಗಳಿಂದ ಸಂಕ್ರಾಂತಿ ಸಂಭ್ರಮದಲ್ಲಿ 260 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ.