X
ಹೋಮ್ » ಸೆಲಬ್ರಿಟಿಗಳು » ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು

ಮುಖ್ಯಮಂತ್ರಿ ಚಂದ್ರು

Actor
ಜೀವನ ಚರಿತ್ರೆ :  ಬೆಂಗಳೂರಿನಲ್ಲಿ ನೆಲೆಸಿರುವ ಮುಖ್ಯಮಂತ್ರಿ ಚಂದ್ರು ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ಖಳನಾಯಕನ ಪಾತ್ರದಿಂದ ಹಿಡಿದು,ಹಾಸ್ಯ, ಪೋಷಕ ಪಾತ್ರಗಳಲ್ಲಿ ತಮ್ಮದೆ ಛಾಪು ಮೂಡಿಸಿರುವ ಚಂದ್ರು ರಂಗಭೂಮಿಯ ಹಿನ್ನಲೆಯಿಂದ ಚಿತ್ರರಂಗಕ್ಕೆ ಬಂದರು. ಕಲಾಗಂಗೋತ್ರಿ ತಂಡದ `ಮುಖ್ಯಮಂತ್ರಿ' ನಾಟಕದಲ್ಲಿ ಮುಖ್ಯಮಂತ್ರಿಯ ಪಾತ್ರ ಮಾಡಿದ ಮೇಲೆ ಇವರ ಹೆಸರಿಗೆ ಮುಖ್ಯಮಂತ್ರಿ ಪ್ರತ್ಯಯ ಸೇರಿಕೊಂಡಿತು. 40 ವರ್ಷಗಳ ನಂತರವೂ ಇನ್ನು ಆ ನಾಟಕದ ಜನಪ್ರಿಯತೆ ಕಡಿಮೆಯಾಗಿಲ್ಲ. ಈಗಲೂ ಚಂದ್ರುರವರು ಆ ನಾಟಕದಲ್ಲಿ `ಮುಖ್ಯಮಂತ್ರಿ' ಪಾತ್ರ ಮಾಡುತ್ತಿದ್ದಾರೆ. 1983 ರಲ್ಲಿ ಅಂಬರೀಶ್ ಅಭಿನಯದ `ಚಕ್ರವ್ಯೂಹ' ಚಿತ್ರದಲ್ಲಿ ರಾಜಕಾರಣಿಯ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡಪರ ಹೋರಾಟಗಳಿಗೆ ಹೆಸರಾಗಿರುವ ಚಂದ್ರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ವೈಯಕ್ತಿಕ ಜೀವನ 1953 ರಲ್ಲಿ ನೆಲಮಂಗಲದ ಹೊನ್ನಸಂದ್ರದ ರೈತ ಕುಟುಂಬದಲ್ಲಿ ಜನಿಸಿದ ಚಂದ್ರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗುಮಾಸ್ತನ ಕೆಲಸ ಮಾಡುತ್ತಲೇ ನಾಟಕದತ್ತ ಆಕರ್ಷಿತರಾದ ಚಂದ್ರು `ರವೀಂದ್ರ ಕಲಾಕ್ಷೇತ್ರ'ದ ನಿತ್ಯ ಅತಿಥಿಯಾದರು. 1983 ರಲ್ಲಿ ನಟಿ ಪದ್ಮಾ ಅವರನ್ನು ಕೈಹಿಡಿದರು. ಈ ದಂಪತಿಗೆ ಇಬ್ಬರು ಮಕ್ಕಳು. 
ಮುಂದೆ ಓದಿ

ಮುಖ್ಯಮಂತ್ರಿ ಚಂದ್ರು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಮಂಜು ಮಿಲನ್ 11 Jul 2025
ಅರುಣ್ ಹೊಸಕೊಪ್ಪ 19 Jan 2024
ಬಾಲು ಚಂದ್ರಶೇಖರ್ 19 Mar 2021
as Actor
ರಘು ಸಮರ್ಥ್ 17 Jul 2020

ಮುಖ್ಯಮಂತ್ರಿ ಚಂದ್ರು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮುಖ್ಯಮಂತ್ರಿ ಚಂದ್ರು

ಹೆಸರು ಮುಖ್ಯಮಂತ್ರಿ ಚಂದ್ರು
ಹುಟ್ಟಿದ ದಿನ 28 Aug 1953
ವಯಸ್ಸು 73
ಹುಟ್ಟಿದ ಸ್ಥಳ Bengaluru
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮುಖ್ಯಮಂತ್ರಿ ಚಂದ್ರು ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+