For Quick Alerts
  ALLOW NOTIFICATIONS  
  For Daily Alerts

  ಪೂಜಾಗಾಂಧಿಗೆ ಸೂಕ್ತ ಕನ್ನಡ ವರ ಬೇಕಾಗಿದೆ

  |

  ನನಗೆ ಈ ಕರ್ನಾಟಕ ಎಲ್ಲವನ್ನೂ ನೀಡಿದೆ. ನಾನು ಕರ್ನಾಟಕ ಮತ್ತು ಕನ್ನಡಿಗರಿಗೆ ಯಾವಾಗಲೂ ಚಿರು ಖುಣಿಯಾಗಿರುತ್ತೇನೆ. ನಾನು ಕನ್ನಡದ ಹುಡುಗನನ್ನೇ ಮದುವೆಯಾಗುತ್ತೇನೆ, ಇದು ನಿಜ, ಇದು ನಿಜ, ನನ್ನನ್ನು ನಂಬಿ ಎಂದು ದಂಡುಪಾಳ್ಯದ ಹುಡುಗಿ ಪೂಜಾಗಾಂಧಿ ಅಭಿಮಾನ ಮತ್ತು ಭರವಸೆಯ ಮಳೆ ಸುರಿಸಿದ್ದಾರೆ.

  ಪಂಜಾಜಿನ ಭಲ್ಲೆ ಭಲ್ಲೆ ಬೆಡಗಿ ಪೂಜಾ ಕನ್ನಡ ವಂಶದ ಸರಗಮಪದನಿಸ ಹುಡುಗನೊಬ್ಬನನ್ನು ವರಿಸುವ ಸುದ್ದಿ ಕೇಳಿದ ಅನೇಕ ಹುಡುಗರು ಚಕಿತರಾಗಿದ್ದಾರೆ. ಆದರೆ, ದುಖಃದ ಸಂಗತಿ ಎಂದರೆ ಪೂಜಾ ತಮ್ಮ ಜಾತಕವನ್ನಾಗಲೀ ಅಥವಾ ಕಾಂಟ್ಯಾಕ್ಟ್ ವಿಳಾಸವನ್ನಾಗಲೀ ಬಹಿರಂಗಪಡಿಸಿಲ್ಲ.

  ಟಿವಿ9 ನ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪೂಜಾಗಾಂಧಿ, ನಾನು ರಾಜಕೀಯಕ್ಕೆ ಸೇರಿದ್ದು ( ಜನತಾದಳ, ಸೆಕ್ಯುಲರ್) ಯಾವುದೇ ಲಾಭ ಉದ್ದೇಶ ಇಟ್ಟು ಕೊಂಡಲ್ಲ. ಮಾಜಿ ಪ್ರಧಾನಿ ದೇವೇಗೌಡ ನನಗೆ ರೋಲ್ ಮಾಡೆಲ್. ಯಾವುದೇ ಸಪೋರ್ಟ್ ಇಲ್ಲದೆ ಅವರು ದೇಶದ ಪ್ರಧಾನಿಯಾಗಿದ್ದು ನನಗೆ ಹೆಮ್ಮೆ ಎನಿಸುತ್ತದೆ. ಅವರ ರೈತರ ಪರ ಕಾಳಜಿ ಮೆಚ್ಚುವಂತದ್ದು ಎಂದು ಮಣ್ಣಿನಮಗನನ್ನು ಮನಸಾರೆ ಹೊಗಳಿದರು.

  ನಾನು ಹುಟ್ಟಿ ಬೆಳೆದದ್ದು ಪಂಜಾಬ್ ನಲ್ಲಿ ಆದರೆ ನಾನು ಮತ್ತೆ ಪಂಜಾಬ್ ಗೆ ಹೋಗುವ ಪ್ರಮೇಯವೇ ಇಲ್ಲ. ನನ್ನ ತಂದೆತಾಯಿವರನ್ನು ಇಲ್ಲೇ ಕರೆಸಿ ಕೊಂಡಿದ್ದೇನೆ. ನನ್ನ ಮುಂದಿನ ಉಸಿರು ಕರ್ನಾಟಕದಲ್ಲೇ ಎಂದಿದ್ದಾರೆ.

  ನಾನು ಜಾತ್ಯಾತೀತ ಜನತಾದಳ ಪಕ್ಷದ ಯಾವುದೇ ನಿರ್ಣಯಕ್ಕೆ ಬದ್ದನಾಗಿದ್ದೇನೆ. ಪಕ್ಷದ ಮುಖಂಡರು ನೀಡುವ ಯಾವುದೇ ಜನಪರ ಕೆಲಸಕ್ಕೆ ನಾನು ನನ್ನನ್ನು ಅರ್ಪಿಸ ಕೊಳ್ಳುತ್ತೇನೆ. ಬರುವ ತಿಂಗಳು ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುವ ಪಕ್ಷದ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ ಎಂದು ಪೂಜಾಗಾಂಧಿ ಘೋಷಿಸಿದರು.

  English summary
  Mungaru Male and Dandypalya Kannada movie heroine Pooja Gandhi has declared that she will marry a Kannada boy for sure. Any body there? Punjabi/Kannada Matrimony

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X