For Quick Alerts
  ALLOW NOTIFICATIONS  
  For Daily Alerts

  ಪುನೀತ್ ಜೊತೆ ಕೋಟಿ ಗೆಲ್ಲಲು ಬರುತ್ತಿದ್ದಾರೆ ಪ್ರಭುದೇವ

  |

  ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಚತುರ್ಭಾಷಾ ನಟ ಕಮ್ ನಿರ್ದೇಶಕರೊಬ್ಬರು ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿರುವ ಕನ್ನಡದ ಕೋಟ್ಯಾಧಿಪತಿ ಸೀಸನ್ 2 ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ.

  ಮಂಗಳವಾರ (ಮಾ 19) ಅಪ್ಪಟ ಕನ್ನಡಿಗ ಪ್ರಭುದೇವಾ, ಪುನೀತ್ ರಾಜಕುಮಾರ್ ಕೇಳುವ ಪಶ್ನೆಗೆ ಉತ್ತರಿಸಲು ಬರಲಿದ್ದಾರೆ. ಮತ್ತು ಕನ್ನಡ ಚೆನ್ನಾಗಿ ಮಾತನಾಡುವ ಪ್ರಭುದೇವಾ ಕನ್ನಡದಲ್ಲೇ ಪುನೀತ್ ಕೇಳುವ ಪ್ರಶ್ನೆಗೆ ಉತ್ತರಿಸಲಿದ್ದಾರೆ. ಈ ರಿಯಾಲಿಟಿ ಶೋವಿನ ಶೂಟಿಂಗ್ ಇಂದು (ಮಾ 19) ಚೆನ್ನೈ ನಲ್ಲಿ ನಡೆಯಲಿದೆ.

  ಅಭಿಮಾನಿಗಳ ಜೊತೆ ಹುಟ್ಟಹಬ್ಬ ಆಚರಿಸಿಕೊಂಡ ಖುಷಿಯಲ್ಲಿರುವ ಪುನೀತ್ ಸದ್ಯ ಚೆನ್ನೈನಲ್ಲಿದ್ದಾರೆ. ಪ್ರಭುದೇವಾ ಅವರ ತಂದೆ ಸಾಕಷ್ಟು ಕನ್ನಡ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಪ್ರಭು ಡ್ಯಾನ್ಸ್ ನನಗೆ ತುಂಬಾ ಇಷ್ಟ. ನಾನು ಅವರ ಅಭಿಮಾನಿ, ಹಿಂದಿ ಚಿತ್ರರಂಗದಲ್ಲಿ ಅವರು ಗಳಿಸುತ್ತಿರುವ ಹೆಸರು ಮೆಚ್ಚತಕ್ಕಂತದ್ದು.

  ಪ್ರಭುದೇವಾ ಅವರಿಗೆ ಪ್ರಶ್ನೆ ಕೇಳಲು ನಾನು ಕಾತುರದಿಂದ ಇದ್ದೇನೆ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

  ಈ ರಿಯಾಲಿಟಿ ಶೋನಲ್ಲಿ ಇನ್ನೂ ಸಾಕಷ್ಟು ಸೆಲೆಬ್ರಿಟಿಗಲು ಭಾಗವಹಿಸಲಿದ್ದಾರೆ. 'ನನ್ನಿಂದಲೇ' ಚಿತ್ರದ ಶೂಟಿಂಗ್ ಮೇ ತಿಂಗಳಲ್ಲಿ ಆರಂಭವಾಗಲಿದೆ. ಅದು ಬಿಟ್ಟರೆ ಬೇರೆ ಯಾವುದೂ ಪ್ರಾಜೆಕ್ಟ್ ಸದ್ಯಕ್ಕೆ ಒಪ್ಪಿಕೊಂಡಿಲ್ಲ ಎಂದು ಪುನೀತ್ ಸ್ಪಷ್ಟ ಪಡಿಸಿದ್ದಾರೆ.

  ನಾನು ನೋಡಿದ ಉತ್ತಮ ಡ್ಯಾನ್ಸರಲ್ಲಿ ಅಪ್ಪು ಕೂಡಾ ಒಬ್ಬರು. ಪುನೀತ್ ಭೇಟಿ ಮಾಡಲು ನಾನೂ ಕಾತುರನಾಗಿದ್ದೇನೆ. ಮಾರ್ಚ್ 19ರಂದು ಕೋಟ್ಯಾಧಿಪತಿ ಶೂಟಿಂಗ್ ನಲ್ಲಿ ನಾನು ಭಾಗವಹಿಸಲಿದ್ದೇನೆ ಎಂದು ಪ್ರಭುದೇವ ಹೇಳಿದ್ದಾರೆ. ಪ್ರಭುದೇವ 123, H2O ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

  ಈ ಕಾರ್ಯಕ್ರಮ ಬರುವ ವಾರ ಪ್ರಸಾರವಾಗುವ ಸಾಧ್ಯತೆಯಿದೆ.

  (ಕಣ್ತಪ್ಪಿನಿಂದ ಈ ಕಾರ್ಯಕ್ರಮ ಇಂದು (ಮಾ 19) ಪ್ರಸಾರವಾಗಲಿದೆ ಎಂದು ಈ ಲೇಖನದಲ್ಲಿ ಈ ಹಿಂದೆ ಬರೆಯಲಾಗಿತ್ತು, ಅದನ್ನು ತಿದ್ದುಪಡಿ ಮಾಡಲಾಗಿದೆ).

  English summary
  Actor cum Director Prabhudeva to participate in Kannadada Kotyadhipati Season 2 reality show on Tuesday i.e. 19th March, 2013.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X